2008ರ ಮುಂಬೈ ದಾಳಿ ವೇಳೆ NSG ಕಮಾಂಡೋ ಮುನ್ನಡೆಸಿದ ಜೆಕೆ ದತ್ ಕೊರೋನಾಗೆ ಬಲಿ!

Published : May 19, 2021, 10:14 PM IST
2008ರ ಮುಂಬೈ ದಾಳಿ ವೇಳೆ NSG ಕಮಾಂಡೋ ಮುನ್ನಡೆಸಿದ ಜೆಕೆ ದತ್ ಕೊರೋನಾಗೆ ಬಲಿ!

ಸಾರಾಂಶ

26/11 ಮುಂಬೈ ದಾಳಿ ವೇಳೆ NSG ಕಮಾಂಡೋ ಮುನ್ನಡೆಸಿದ್ದ ಜೆಕೆ ದತ್ ದಕ್ಷ ಕಮಾಂಡೋ ಅಧಿಕಾರಿ ಕೊರೋನಾಗೆ ಬಲಿ ಆಪರೇಶನ್ ಬ್ಲಾಕ್ ಟೊರೆಂಡೊ ಸಂಘಟಿಸಿದ ಚತುರ

ನವದೆಹಲಿ(ಮೇ.19):  2008 ಮುಂಬೈ ದಾಳಿ ಅದೆಂತಾ ಘನಘೋರ ದಾಳಿ ಅನ್ನೋದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನದ ಲಷ್ಕರ್-ಇ-ತೈಬಾ, ಇಸ್ಲಾಮಿಸ್ಟ್ ಭಯೋತ್ಪಾದನಾ ಸಂಘಟನೆ ಸತತ 4 ದಿನ ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ 166 ಅಮಾಯಕರು ಬಲಿಯಾಗಿದ್ದಾರೆ. ಇನ್ನೂ 300ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭಯೋತ್ಪಾದಕರ ದಾಳಿಯನ್ನು ಪೊಲೀಸ್, ಸೇನೆ ಜೊತೆ ಸೇರಿ NSG ಪಡೆ ನಿರ್ನಾಮ ಮಾಡಿತ್ತು. ಈ NSG ಪಡೆಯನ್ನು ಮುನ್ನಡೆಸಿದ ಕಮಾಂಡೋ ಅಧಿಕಾರಿ ಜೆಕೆ ದತ್ ಕೊರೋನಾದಿಂದ ನಿಧನರಾಗಿದ್ದಾರೆ.

ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!

72 ವರ್ಷದ ಜೆಕೆ ದತ್ತಾ ಅವರಿಗೆ ಕೊರೋನಾ ರೋಗ ಲಕ್ಷಣ ಕಂಡುಬಂದಿತ್ತು. ಹೀಗಾಗಿ ದತ್ತಾ ಅವರನ್ನು ಗುರುಗಾಂವ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು 3.30ರ ವೇಳೆಗೆ ಹೃದಯಾಘಾತದಿಂದ ಜೆಕೆ ದತ್ ನಿಧನರಾಗಿದ್ದಾರೆ. 

2008ರಲ್ಲಿ ಮುಂಬೈನ ತಾಜ್ ಹೊಟೆಲ್‌, ಒಬೆರಾಯ್ ಹಾಗೂ ನರಿಮಾನ್ ಪಾಯಿಂಟ್‌ನಲ್ಲಿ ಅಡಗಿದ್ದ ಉಗ್ರರ ಸದೆಬಡಿಯಲು NSG ಕಮಾಂಡೋ ಪಡೆ ಹೆಲಿಕಾಪ್ಟರ್ ಮೂಲಕ ಬಂದಿಳಿತ್ತು. ಆಪರೇಶನ್ ಬ್ಲಾಕ್ ಟೊರೆಂಡೊ ಹೆಸರಿನಲ್ಲಿ ದಾಳಿ ಸಂಘಟಿಸಿದ ಜೆಕೆ ದತ್ ಕಮಾಂಡೋ ಪಡೆ ಉಗ್ರರ ಸದಬಡಿದಿತ್ತು. ಈ ಹೋರಾಟದಲ್ಲಿ ಬೆಂಗಳೂರಿನ ಕಮಾಂಡೋ ಸಂದೀಪ್ ಉಣ್ಣಿಕೃಷ್ಣನ್ ಹುತಾತ್ಮರಾಗಿದ್ದರು.

26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕಿ-ಉರ್-ರೆಹಮಾನ್ ಲಖ್ವಿಗೆ 15 ವರ್ಷ ಜೈಲು!

1971 ರ ಬ್ಯಾಚ್ ಬಂಗಾಳ ಕೇಡರ್ ಐಪಿಎಸ್ ಅಧಿಕಾರಿ  ಜೆಕೆ ದತ್ 2006 ರಿಂದ 2009 ರವರೆಗೆ ಎನ್‌ಎಸ್‌ಜಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!