ಲಸಿಕೆ ಪಡೆಯುವುದು ಸಾಮಾಜಿಕ ಕಳಂಕ, ಹಾನಿಕಾರಕ ಎಂದು ಸಂಪೂರ್ಣ ಗ್ರಾಮಸ್ಥರ ಬಹಿಷ್ಕಾರ!

By Suvarna NewsFirst Published May 19, 2021, 6:38 PM IST
Highlights
  • ಕೊರೋನಾ ಲಸಿಕೆ, ಪರೀಕ್ಷೆಗೆ ಗ್ರಾಮಸ್ಥರ ಬಹಿಷ್ಕಾರ
  • 12 ಮಂದಿ ಬಲಿಯಾದರೂ ಲಸಿಕೆ ಪಡೆದು ಕಳಂಕ ತರಲ್ಲ ಎಂದು ಗ್ರಾಮಸ್ಥರು

ಬಿಹಾರ(ಮೇ.19): ಕೋವಿಡ್ ಲಸಿಕೆ ಪಡೆಯಲ ಹಿಂದೇಟು ಹಾಕಿದ ಮಂದಿ ಇದೀಗ ಮೊದಲ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿರುವುದನ್ನು ಗಮನಿಸಿದ್ದೇವೆ. ದೇಶಿಯ ಲಸಿಕೆ ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡಿಲ್ಲ, ನಾವು ಪಡೆಯಲ್ಲ, ಎಂದೆಲ್ಲಾ ಹಲವು ಜನ ನಾಯಕರು ಹೇಳಿ ಇದೀಗ ನಮ್ಮ ಲಸಿಕೆ ಎಲ್ಲಿ ಎಂದು ಪ್ರಶ್ನಿಸುತ್ತಿರುವುದನ್ನೂ ನೋಡಿದ್ದೇವೆ. ಆದರೆ ಈ ಗ್ರಾಮ ಇದೆಲ್ಲದ್ದಕ್ಕಿಂತ ವಿಶೇಷ ಕಾರಣ. ಈ ಗ್ರಾಮದ 12 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಆದರೂ ಕೊರೋನಾ ಪರೀಕ್ಷೆ ಹಾಗೂ ಲಸಿಕೆ ಪಡೆಯಲು ಗ್ರಾಮಸ್ಥರು ಮಾತ್ರ ತಯಾರಿಲ್ಲ.

ಪಾಂಡವಪುರದಲ್ಲಿ 2ನೇ ಡೋಸ್‌ ಕೋವಿಶೀಲ್ಡ್‌ಗೆ ಬೇಡಿಕೆ ಇಲ್ಲ!.

ಇದು ಬಿಹಾರದ ಬಬತಾ ಗ್ರಾಮ. ಈ ಗ್ರಾಮದ 2 ಕುಟುಂಬ 3 ಮೂವರಲ್ಲಿ ಕೊರೋನಾ ರೋಗಲಕ್ಷಣ ಕಾಣಿಸಿಕೊಂಡು ಮೃತಪಟ್ಟಿದ್ದರು. ಈ ವಿಚಾರ ತಿಳಿದ ಜಿಲ್ಲಾ ಆರೋಗ್ಯ ತಂಡ, ನೇರವಾಗಿ ಗ್ರಾಮಕ್ಕೆ ತೆರಳಿ ಪರೀಕ್ಷೆ ನಡೆಸಲು ಮುಂದಾಯಿತು. ಆದರೆ ಗ್ರಾಮದ ಯಾರೂ ಕೂಡ ಕೊರೋನಾ ಪರೀಕ್ಷೆ ಮುಂದಾಗಲಿಲ್ಲ. ಹರಸಾಹಸ ಪಟ್ಟು 2 ಕುಟುಂಬದ ಪರೀಕ್ಷೆಯಲ್ಲಿ ಇಬ್ಬರಿಗೆ ಕೊರೋನಾ ದೃಢಪಟ್ಟಿತು.

ಲಸಿಕೆ ಪಡೆದವರು ಸಂಪೂರ್ಣ ಸೇಫ್; ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.0.06; ಅಧ್ಯಯನ ವರದಿ!

ಹೋಮ್ ಕ್ವಾರಂಟೈನ್‌ನಲ್ಲಿರಲು ಸೂಚಿಸಿದ ವೈದ್ಯರ ತಂಡ, ಗ್ರಾಮಸ್ಥರು ಕೊರೋನಾ ಪರೀಕ್ಷೆ ಮಾಡಿಸಬೇಕು. ಉಚಿತವಾಗಿ ಪರೀಕ್ಷೆ ಮಾಡುತ್ತೇವೆ ಎಂದಿದ್ದಾರೆ. ಇನ್ನು ಲಸಿಕೆಯನ್ನು ಪಡೆಯಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ತಿರಸ್ಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಸಾಮಾಜಿಕ ಕಳಂಕ ಹಾಗೂ ಗ್ರಾಮದ ಪದ್ಧತಿ ವಿರುದ್ಧವಾಗಿ ಯಾರೂ ನಡೆದುಕೊಳ್ಳುವುದಿಲ್ಲ. ಹೀಗಾಗಿ ಲಸಿಕೆ ಪಡೆಯಲ್ಲ, ಪರೀಕ್ಷೆ ಮಾಡಿಸಲ್ಲ ಎಂದಿದ್ದಾರೆ.

ಕೊರೋನಾ ಲಸಿಕೆ ಪಡೆಯುವುದು ಸಾಮಾಜಿಕ ಕಳಂಕ, ಇನ್ನೂ ಪರೀಕ್ಷೆಯಂತೂ ನಮ್ಮ ಗ್ರಾಮ ಒಪ್ಪು ಮಾತೇ ಇಲ್ಲ ಎಂದಿದ್ದಾರೆ. ಸತತ ಒಂದು ವಾರ ಕೊರೋನಾ ಲಸಿಕೆ ಹಾಗೂ ಪರೀಕ್ಷೆ ನಡೆಸಲು ಗ್ರಾಮಕ್ಕೆ ತೆರಳಿದ ವೈದ್ಯ ತಂಡಕ್ಕೆ ಇದೇ ಉತ್ತರ. ಹಲವರ ಮನಒಲಿಸಿ ಇದೀಗ 50 ಮಂದಿ ಪರೀಕ್ಷೆ ಮಾಡಿಸಲಾಗಿದೆ. ಆದರೆ ಲಸಿಕೆ ಮಾತ್ರ ಹಾಕುತ್ತಿಲ್ಲ. ಲಸಿಕೆ ದೇಹಕ್ಕೆ ಹಾನಿಕಾರಕ ಎಂದು ಹಲವು ಗ್ರಾಮಸ್ಥರು ಹೇಳಿದ್ದಾರೆ. ಇದೀಗ ಇವರನ್ನು ಮನಒಲಿಸುವುದೇ ಸ್ಥಳೀಯ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ

click me!