ಮಧ್ಯಪ್ರದೇಶದಲ್ಲಿ ಮೊಸಳೆಯೇ ಜನವಸತಿ ಪ್ರದೇಶಕ್ಕೆ ಬಂದಿದ್ದು ಜನರು ಮನೆಯಿಂದ ಹೊರ ಬರಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಪ್ರದೇಶದ ಶಿವಪುರಿಯಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ
ಮಳೆಗಾಲದಲ್ಲಿ ಹಾವು ಚೇಳು ಮುಂತಾದ ಸರೀಸೃಪಗಳು ಮನೆಯೊಳಗೆ ನುಸುಳಲು ಯತ್ನಿಸುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದಲ್ಲಿ ಮೊಸಳೆಯೇ ಜನವಸತಿ ಪ್ರದೇಶಕ್ಕೆ ಬಂದಿದ್ದು ಜನರು ಮನೆಯಿಂದ ಹೊರ ಬರಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಪ್ರದೇಶದ ಶಿವಪುರಿಯಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 8 ಅಡಿ ಉದ್ದದ ಮೊಸಳೆಯೊಂದು ಆ ಪ್ರದೇಶದ ಜನರಲ್ಲಿ ಭಯದ ವಾತಾವರಣವನ್ನು ನಿರ್ಮಿಸಿತ್ತು. ಈ ದೃಶ್ಯವನ್ನು ಅಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ನಂತರದಲ್ಲಿ ಈ ಮೊಸಳೆಯನ್ನು ಹಿಡಿದು ಸಮೀಪದ ಕೆರೆ ಪ್ರದೇಶದಲ್ಲಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಶಿವಪುರಿಯ ಹಳೆ ಬಸ್‌ನಿಲ್ದಾಣದ ಕಾಲೋನಿಯೊಂದರಲ್ಲಿ ಈ ಘಟನೆ ನಡೆದಿದೆ. ಮಳೆ ನೀರಿನಿಂದ ತುಂಬಿದ ಕಾಲೋನಿಯ ಓಣಿಯಲ್ಲಿ ಮೊಸಳೆ ಹರಿದಾಡುತ್ತಾ ಜನವಸತಿ ಪ್ರದೇಶದತ್ತ ಬಂದಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿನ ನಿವಾಸಿಗಳು ಸ್ಥಳೀಯಾಡಳಿತಕ್ಕೆ ಈ ವಿಚಾರವನ್ನು ತಿಳಿಸಿದ್ದಾರೆ. ನಂತರ ಸಮೀಪದ ಮಾಧವ ರಾಷ್ಟ್ರೀಯ ಉದ್ಯಾನವನದ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಈ ದೈತ್ಯಗಾತ್ರದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಈ ಮೊಸಳೆಯನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಸಂಖ್ಯಾ ಸಾಗರ್ ಕೆರೆಯ ಆವರಣದಲ್ಲಿ ಬಿಟ್ಟಿದ್ದಾರೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಅಜಯ್ ಭಾರ್ಗವ್ ಮಾಹಿತಿ ನೀಡಿದ್ದಾರೆ.
Crocodile in shivpuri m.p pic.twitter.com/D2kVvDmlAH
— Pankaj Arora (@Pankajtumhara)ಈ ಬಾರಿಯ ಮುಂಗಾರು ಮಳೆ ದೇಶಾದ್ಯಂತ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಹಲವು ಪ್ರದೇಶಗಳಲ್ಲಿ ತೀವ್ರ ಮಳೆಯಿಂದಾಗಿ ಭೂಕುಸಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಬಹುತೇಕ ಜಲಾಶಯಗಳು ಮಳೆ ನೀರಿನಿಂದಾಗಿ ತುಂಬಿ ಹರಿಯುತ್ತಿವೆ. ಹಾಗೆಯೇ ಮಧ್ಯಪ್ರದೇಶದಲ್ಲೂ ಹಲವು ಜಿಲ್ಲೆಗಳಲ್ಲಿ ದಾಖಲೆಯ ಮಳೆಯಾಗಿದೆ. ಜಬಲ್ಪುರ, ಭೋಪಾಲ್, ನರ್ಮದಾಪುರ್ ವಿಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ನರ್ಮದಾಪುರ ಹಾಗೂ ಭೋಪಾಲ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಗರದ ಬಹುತೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ ನಗರದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿರುವ ಪರಿಸ್ಥಿತಿ ಇದೆ. ಈ ಕಾರಣಕ್ಕೆ ಮೊಸಳೆಗಳು ವಸತಿ ಪ್ರದೇಶಗಳತ್ತ ಧಾವಿಸುತ್ತಿವೆ. ಸಾಮಾನ್ಯವಾಗಿ ಮುಂಗಾರು ಮಳೆಯ ನಂತರ ಇಂತಹ ಪರಿಸ್ಥಿತಿಗಳು ಹೆಚ್ಚಾಗುತ್ತಿವೆ.
ಮೊಸಳೆಯೊಂದು ಯುವಕನ ಚೆಲ್ಲಾಟ
ಮೊಸಳೆಗಳು ಅತ್ಯಂತ ಅಪಾಯಕಾರಿ ಸರೀಸೃಪಗಳು, ಅತ್ಯಂತ ಮಾರಣಾಂತಿಕವೆನಿಸಿದ ಪರಭಕ್ಷಕಗಳು ಎಂದು ಅವುಗಳನ್ನು ಪರಿಗಣಿಸಲಾಗಿದೆ. ಮೊಸಳೆ ಎಂದ ತಕ್ಷಣ ಬಹುತೇಕರು ಹೆದರಿ ಸುರಕ್ಷಿತ ಸ್ಥಳಗಳಿಗೆ ಹೋಗುವುದೇ ಹೆಚ್ಚು, ಯಾರೂ ಕೂಡ ಅಪಾಯಕಾರಿಯಾದ ಮೊಸಳೆಗಳೊಂದಿಗೆ ಚೆಲ್ಲಾಟವಾಡಲು ಹೋಗುವುದಿಲ್ಲ. ಆದಾಗ್ಯೂ ಇಲ್ಲೊರ್ವ ಯುವಕ ಹುಚ್ಚು ಸಾಹಸ ಮಾಡಲು ಹೋಗಿ ತನ್ನ ಒಂದು ಕೈಯನ್ನೇ ಕಳೆದುಕೊಂಡಿದ್ದಾನೆ. ಫಿಜೆನ್ ಎಂಬ twitter ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋ ನೋಡಿ ಹೌಹಾರಿದ್ದಾರೆ.
ಮೊಸಳೆ ಜೊತೆ ಯುವಕನ ಚೆಲ್ಲಾಟ, ಆಮೇಲೇನಾಯ್ತು ನೋಡಿ
ವಿಡಿಯೋದಲ್ಲಿ ಕಾಣಿಸುವಂತೆ ಮೊಸಳೆ ಉದ್ಯಾನವನದ ಕೆಲಸಗಾರನಂತೆ ಕಾಣುವ ವ್ಯಕ್ತಿಯೊಬ್ಬ ಮೊಸಳೆಯ ಬಾಯಿಯೊಳಗೆ ಕೈ ಹಾಕಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮೊಸಳೆಯು ತನ್ನ ಬಾಯಿಯನ್ನು ಅಗಲವಾಗಿ ತೆರೆದುಕೊಂಡು ಮಲಗಿಕೊಂಡಿದೆ. ಹೀಗೆ ಬಾಯ್ತೆರೆದು ಮಲಗಿರುವ ಮೊಸಳೆಯ ಮುಂದೆ ಯುವಕ ಸಾಹಸ ಮಾಡಲು ಹೋಗಿ, ತನ್ನ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ. ಯುವಕ ತನ್ನ ಬಲಗೈಯನ್ನು ಮೊಸಳೆಯ ಬಾಯೊಳಗೆ ಇಟ್ಟಿದ್ದಾನೆ. ಕೂಡಲೇ ಮೊಸಳೆಗೆ ಇದು ಲಡ್ಡು ಬಂದು ಬಾಯಿಗೆ ಬಿತ್ತ ಎಂಬಂತೆ ಆಗಿದ್ದು, ನಿರೀಕ್ಷಿಸದೇ ಬಾಯಿಗೆ ಆಹಾರ ಬಿದ್ದಂತಾಗಿದ್ದು, ಅದು ಈತನ ಕೈಯನ್ನು ಕಚ್ಚಿ ಎಳೆದಾಡಿದೆ. ಈ ವೇಳೆ ಸ್ಟಂಟ್ ಮಾಡುವ ಸರದಿ ಮೊಸಳೆ ಪಾಲಾಗಿದ್ದು, ಯುವಕನ ಕೈಯನ್ನು ಕಚ್ಚಿ ಮೊಸಳೆ ಎಳೆದಾಡಿದೆ. ಇತ್ತ ಸುಮ್ಮನಿರಲಾರದೆ ಅಪಾಯಕಾರಿ ಮೊಸಳೆಯೆದರು ಸಾಹಸ ಮಾಡಲು ಹೋದ ಯುವಕನ ಸ್ಥಿತಿ ಇರಲಾರದೇ ಇರುವೆ ಬಿಟ್ಕೊಂಡ ಎಂಬಂತಾಗಿದೆ.
ಅನಕೊಂಡ, ಮೊಸಳೆಯ ನಡುವೆ ಬೃಹತ್ ಹೋರಾಟ: ಗೆದ್ದವರಾರು video viral