
ನವದೆಹಲಿ (ಡಿ.26): ದಿ.ಪ್ರಧಾನಿ ರಾಜೀವ್ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಿಷೇಧಗೊಂಡಿದ್ದ ಬ್ರಿಟಿಷ್-ಇಂಡಿಯಾ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ‘ದ ಸಟಾನಿಕ್ ವರ್ಸೆಸ್’ ಪುಸ್ತಕ 36 ವರ್ಷಗಳ ನಂತರ ಸದ್ದಿಲ್ಲದೆ ಭಾರತಕ್ಕೆ ಮರಳಿದೆ.
‘ದೆಹಲಿಯಲ್ಲಿ ಕೆಲವು ದಿನಗಳಿಂದ ಪುಸ್ತಕ ಬಿಕರಿಯಾಗುತ್ತಿದ್ದು, ಪುಸ್ತಕ ಸದ್ಯ ಕಡಿಮೆ ದಾಸ್ತಾನು ಹೊಂದಿದೆ. ಪುಸ್ತಕದ ಬಗ್ಗೆ ಓದುಗರ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು, ಮಾರಾಟ ಉತ್ತಮವಾಗಿರಲಿದೆ’ ಎಂದು ಬಹ್ರಿಸನ್ಸ್ ಪುಸ್ತಕ ಮಾರಾಟಗಾರರ ಮಾಲೀಕ ರಜನಿ ಮಲ್ಹೋತ್ರಾ ಪಿಟಿಐಗೆ ತಿಳಿಸಿದ್ದಾರೆ.
ನಾಲ್ಕು ಮದುವೆ, ನಾಲ್ಕು ವಿಚ್ಛೇದನ, 75 ವರ್ಷದ ಸಲ್ಮಾನ್ ರಶ್ದಿ ಜೀವನ!
ನಿಷೇಧ ಏಕೆ?: ಪುಸ್ತಕ ಧರ್ಮ ದೂಷಣೆಯಿಂದ ಕೂಡಿದೆ ಎಂದು ಪುಸ್ತಕ ಮತ್ತು ಲೇಖಕ ಸಲ್ಮಾನ್ ವಿರುದ್ಧ ಮುಸ್ಲಿಂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಪುಸ್ತಕವನ್ನು ನಿಷೇಧಿಸಲಾಗಿತ್ತು.
ನಿಷೇಧ ರದ್ದು: ಪುಸ್ತಕ ಆಮದು ನಿಷೇಧ ರದ್ದು ಪ್ರಶ್ನಿಸಿದ್ದ ಅರ್ಜಿಯೊಂದನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಪುಸ್ತಕ ನಿಷೇಧಿಸುವ ಆದೇಶದ ಪ್ರತಿ ಹಾಜರಿಗೆ ಅಧಿಕಾರಿಗಳು ವಿಫಲರಾದ ಬೆನ್ನಲ್ಲೇ, ಅಂಥ ಯಾವುದೇ ನಿಷೇಧ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಕುರಾನ್ ಎಂಜಾಯ್ ಮಾಡುವ ಗ್ರಂಥವಲ್ಲ:
ಭಾರತೀಯ ಮೂಲದ ಲೇಖಕರಾಗಿರುವ ಸಲ್ಮಾನ್ ರಶ್ದಿ ವಿವಾದಾತ್ಮಕ ಕೃತಿ ಬಳಿಕವೂ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ್ದರು.‘ಇಸ್ಲಾಂನ ಪರಮೋಚ್ಚ ಗ್ರಂಥವನ್ನು ತಿದ್ದುಪಡಿ ಮಾಡಿ ಅದನ್ನು ಹೆಚ್ಚು ಮಾನವೀಯಗೊಳಿಸಬಹುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕುರಾನ್ ಅಷ್ಟು ಎಂಜಾಯ್ ಮಾಡಬಲ್ಲ ಕೃತಿಯಲ್ಲ. ನಿರೂಪಣೆ ಅಷ್ಟು ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ