
ಬೆಂಗಳೂರು (ಡಿ.25): ವಿಧಿಯ ವಿಚಿತ್ರ ಆಟ ತೋರಿಸಿದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗಿಯೊಬ್ಬ ಅನಾರೋಗ್ಯಪೀಡಿತ ಪತ್ನಿಯ ಆರೈಕೆ ಮಾಡುವ ಸಲುವಾಗಿ ನಿವೃತ್ತಿ ವಯಸ್ಸಿಗೆ ಇನ್ನೂ ಮೂರು ವರ್ಷಗಳು ಇರುವಾಗಲೇ ವಿಆರ್‌ಎಸ್ ಅಂದರೆ ವಾಲೆಂಟರಿ ರಿಟೈರ್‌ಮೆಂಟ್ ಸರ್ವೀಸ್ ಪಡೆದುಕೊಂಡಿದ್ದರು. ಆದರೆ ವಿಆರ್ ಎಸ್ ತೆಗೆದುಕೊಳ್ಳುವ ದಿನವೇ ಆಯೋಜಿಸಿದ್ದ ಪಾರ್ಟಿಯಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದಾರೆ. ಎಲ್ಲರೂ ಖುಷಿಯಿಂದ ಪಾರ್ಟಿ ಮಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಕುರ್ಚಿಯ ಮೇಲೆ ಕುಳಿತ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ನಿವೃತ್ತಿ ಕೂಟ ಆಯೋಜಿಸಿದ್ದ ಕುಟುಂಬ: ಕೋಟಾದ ದಾದಾಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೋಟಾದ ದಾದಾಬರಿ ಪ್ರದೇಶದಲ್ಲಿ ವಾಸವಿದ್ದ ದೇವೇಂದ್ರ ಕುಮಾರ್ ಸೆಂಟ್ರಲ್ ವೇರ್ ಹೌಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿಗೆ ಹೃದಯ ಸಮಸ್ಯೆ ಇದ್ದು, ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ದೇವೇಂದ್ರ 3 ವರ್ಷಗಳ ನಂತರ ನಿವೃತ್ತಿ ಹೊಂದಬೇಕಿತ್ತು.ಆದರೆ ಅನಾರೋಗ್ಯಪೀಡಿತ ಪತ್ನಿಯನ್ನು ನೋಡಿಕೊಳ್ಳಲು ದೇವೇಂದ್ರ ನಿವೃತ್ತಿಗೆ 3 ವರ್ಷ ಮೊದಲು ವಿಆರ್ ಎಸ್ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ದೇವೇಂದ್ರನ ಸ್ನೇಹಿತರು, ಬಂಧುಗಳು ಸಣ್ಣ ಪಾರ್ಟಿಯನ್ನೂ ಏರ್ಪಡಿಸಿದ್ದರು.
ದೇವೇಂದ್ರನ ಸಂಬಂಧಿಕರು ಮತ್ತು ಅನೇಕ ಸ್ನೇಹಿತರು ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಪರಿಚಿತರು, ಬಂಧುಗಳು ದೇವೇಂದ್ರನಿಗೆ ಮಾಲೆ ಹಾಕಿ ನಿವೃತ್ತಿ ಜೀವನಕ್ಕೆ ಶುಭ ಕೋರುತ್ತಿದ್ದರು. ಇದೇ ವೇಳೆ ಹಲವರ ಒತ್ತಾಯದ ಮೇರೆಗೆ ದೇವೇಂದ್ರನ ಪತ್ನಿ ದೀಪಿಕಾ ಕೂಡ ದೇವೇಂದ್ರ ಅವರಿಗೆ ಮಾಲಾರ್ಪಣೆ ಮಾಡಿದರು. ಮಾಲೆ ಹಾಕಿದ ಸ್ವಲ್ಪ ಹೊತ್ತಿನಲ್ಲೇ ದೀಪಿಕಾ ತಲೆಸುತ್ತು ಬಂದು ಕೆಳಗೆ ಬಿದ್ದು ಪ್ರಜ್ಞಾಹೀನರಾಗಿದ್ದರು.
Azerbaijan Airlines Plane Crash: ಪ್ರಯಾಣಿಕರ ಕೊನೇ ಕ್ಷಣದ ವಿಡಿಯೋ ವೈರಲ್!
ಸಾವಿನ ಸುದ್ದಿ ಕೇಳಿ ಶಾಕ್: ಈ ವೇಳೆ ಅಲ್ಲಿದ್ದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ದೀಪಿಕಾ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಯ ನಂತರ ಪತಿ ಯಾರ ಸೇವೆಗಾಗಿ ವಿಆರ್‌ಎಸ್ ತೆಗೆದುಕೊಂಡಿದ್ದಾರೋ ಆ ಪತ್ನಿಯೇ ಆತನನ್ನು ತೊರೆದಿದ್ದರಿಂದ ಸ್ಥಳೀಯ ಜನರು ವಿಧಿಯನ್ನು ದೂರಿದ್ದಾರೆ.
Rule Change: ಎಲ್‌ಪಿಜಿಯಿಂದ ಪಿಂಚಣಿವರೆಗೆ.. ಹೊಸ ವರ್ಷದಿಂದ ಆಗಲಿದೆ ಈ ಬದಲಾವಣೆಗಳು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ