ಲಾಕ್‌ಡೌನ್ ಹಿನ್ನೆಲೆ ವಾಹನಗಳು ಬಂದ್| ಸ್ಮಶಾನಕ್ಕೆ ಹಿಂದೂ ಮಹಿಳೆಯ ಶವ ಕೊಂಡೊಯ್ಯಲು ಪರದಾಟ| ಹತ್ತಿರ ಸುಳಿಯದ ಕುಟುಂಬಸ್ಥರು| ಸ್ಮಶಾನಕ್ಕೆ ಹಿಂದೂ ಮಹಿಳಡಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು
ಭೋಪಾಲ್(ಏ.08): ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ನಿಂದ ಬಹುತೇಕ ಎಲ್ಲವೂ ಸ್ತಬ್ಧಗೊಂಡಿದೆ. ಹೊರಗೆ ಓಡಾಡುವವರನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳಲಾರಂಭಿಸಿದ್ದು, ಜನರೆಲ್ಲಾ ತಮ್ಮ ಮನೆಯೊಳಗೆ ಉಳಿಯುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂ ಮಹಿಳೆಯೊಬ್ರ ಮೃತದೇಹ ಕೊಂಡೊಯ್ಯಲು ವಾಹನಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಸಲ್ಮಾನ ಯುವಕರು ಆಕೆಯ ಮೃತದೇಹವನ್ನು ಸ್ಮಶಾನಕ್ಕೆ ಹೊತ್ತೊಯ್ದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಸದ್ಯ ಈ ಯುವಕರ ನಡೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಇಂದೋರ್ನ ಮಹಿಳೆಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಈ ವೆಳೆ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ವಾಹನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಮಹಿಳೆ ಕೊರೋನಾದಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ಆಕೆಯ ಸಂಬಂಧಿಕರನ್ನು ಕಾಡಿದ್ದು, ಇದೇ ಕಾರಣದಿಂದ ಮೃತದೇಹವನ್ನು ಮುಟ್ಟಲು ಅವರು ಹಿಂಜರಿದಿದ್ದಾರೆ. ಇಂತಹ ಸಂದರ್ಭಭದಲ್ಲಿ ಊರಿನ ಮುಸ್ಲಿಂ ಯುವಕರು ತಾವೇ ಮುಂದಾಗಿ ಆ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ತಮ್ಮ ಕೈಯ್ಯಾರೆ ಚಟ್ಟ ಸಿದ್ಧಪಡಿಸಿ, ಅದರಲ್ಲಿ ಅಕೆಯ ಮೃತದೇಹವನ್ನು ಹೊತ್ತು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ.
undefined
ಲಾಕ್‌ಡೌನ್: ಹಿಂದೂ ಸಹೋದರನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು!
ಸದ್ಯ ಈ ಮುಸ್ಲಿಂ ಯುವಕರು ಮಾಸ್ಕ್ ಧರಿಸಿ, ಮೃತದೇಹ ಹೊತ್ತು ಸಾಗುತ್ತಿರುವ ಫೋಟೋ ಹಾಗೂ ವಿಡಿಯೋಗಳು ಭಾರೀ ವೈರಲ್ ಅಗಿವೆ. ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಕೂಡ ಈ ಯುವಕರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಿಂದೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಕೈಜೋಡಿಸಿದ ಮುಸ್ಲಿಂ ಯುವಕರು ಈ ಸಮಾಜಕ್ಕೆ ಮಾದರಿ ಎಂದಿದ್ದಾರೆ.
ಇನ್ನು, ಮುಸ್ಲಿಂ ಯುವಕರು ಪ್ರತಿಕ್ರಿಯಿಸಿದ್ದು, ಬಾಲ್ಯದಿಂದಲೂ ನಾವು ಆ ಮಹಿಳೆಯನ್ನು ನೋಡುತ್ತಿದ್ದೇವೆ. ಆಕೆಯ ಮನೆಯಲ್ಲಿ ಆಟವಾಡಿಕೊಂಡು ಬೆಳೆದವರು. ಆಕೆ ಸಾವನ್ನಪ್ಪಿದಾಗ ಮನೆಯವರು ಕೂಡ ಹತ್ತಿರ ಹೋಗಲು ಹಿಂಜರಿದಿದ್ದನ್ನು ನೋಡಿ ಬೇಸರವಾಯಿತು. ಹೀಗಾಗಿ, ನಾವೇ ಆಕೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋದೆವು ಎಂದಿದ್ದಾರೆ.