
ತಿರುವನಂತಪುರಂ (ಮಾ.12) ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಗಿ ಮೊನಾಲಿಸಾ ಸಿನಿಮಾ, ಸೀರಿಯಲ್, ಕಾರ್ಯಕ್ರಮಗಳ ಮೂಲಕ ಭಾರಿ ಬ್ಯೂಸಿಯಾಗಿದ್ದಳು. ಇದ್ದಕ್ಕಿದ್ದಂತೆ ಕೇರಳಕ್ಕೆ ಓಡಿ ಹೋಗಿ ಮುಸ್ಲಿಂ ಯುವಕ ಫರ್ಮಾನ್ ಖಾನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾಳೆ. ಪೋಷಕರ ವಿರೋಧದ ನಡುವೆ ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದಾರೆ. ಲವ್ ಜಿಹಾದ್ ಆರೋಪಗಳು ಬಲವಾಗುತ್ತಿರುವ ಬೆನ್ನಲ್ಲೇ ಈ ಮದುವೆ ದೇಶಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ಮೂಲಕ ನವ ಜೋಡಿ ಸ್ಪಷ್ಟನೆ ನೀಡಿದೆ.
ಕೇರಳದಲ್ಲಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆಯಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಸೇರಿಂದಂತೆ ಎಲ್ಲೆಡೆ ತೀವ್ರ ಆಕ್ರೋಶಗಳು, ಆರೋಪ, ಟೀಕೆಗಳು ವ್ಯಕ್ತವಾಗುತ್ತಿದೆ. ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್ ಮಾಡಲಾಗುತ್ತಿದೆ ಅನ್ನೋ ಆರೋಪ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಇದೀಗ ಮೊನಾಲಿಸಾ ಫರ್ಮಾನ್ ಖಾನ್ ಮದುವೆ ಮತ್ತೊಬ್ಬೆ ಲವ್ ಜಿಹಾದ್ ಚರ್ಚೆ ಭುಗಿಲೇಳುವಂತೆ ಮಾಡಿದೆ. ಇದು ಲವ್ ಜಿಹಾದ್, ಕೆಲ ತಿಂಗಳಲ್ಲಿ ಈ ಮದುವೆಯ ಅಸಲಿಯತ್ತು ಬಹಿರಂಗವಾಗಲಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಮೊನಾಲಿಸಾ ಹಾಗೂ ಫರ್ಮಾನ್ ಖಾನ್, ಇದು ಲವ್ ಜಿಹಾದ್ ಅಲ್ಲ. ಪ್ರೀತಿಸುತ್ತಿದ್ದೇವು, ಇದೀಗ ಮದುವೆಯಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ
ನಮ್ಮ ಮದುವೆ ಲವ್ ಜಿಹಾದ್ ಅಲ್ಲ, ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ. ದೇವಸ್ಥಾನದ ಆವರಣದಲ್ಲಿ ಮದುವೆ ನಡೆದಿದೆ. ಪೋಷಕರನ್ನ ಸಂಬಂಧಿಯೊಬ್ಬನ ಮದುವೆಯಾಗಲು ಒತ್ತಾಯಿಸಿದ್ದರು. ಆತನ ಮದುವೆಯಾಗಲು ನನಗೆ ಇಷ್ಟವಿರಲಿಲ್ಲ. ನನ್ನ ಇಷ್ಟ ಫರ್ಮಾನ್ ಮೇಲಿತ್ತು. ಹೀಗಾಗಿ ಫರ್ಮಾನ್ ಖಾನ್‌ನ ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿದ್ದಾರೆ. ಎಲ್ಲಾ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಪ್ರೀತಿಯಿಂದ ಮದುವೆಯಾಗಿದ್ದೇನೆ. ನನ್ನ ಫರ್ಮಾನ್ ಖಾನ್ ಎಲ್ಲರಂತಲ್ಲ. ನಮ್ಮ ಪ್ರೀತಿ ಗೆದ್ದಿದೆ ಎಂದು ಮೊನಾಲಿಸಾ ಹೇಳಿದ್ದಾಳೆ.
ಮೊನಾಲಿಸಾ ಮಧ್ಯಪ್ರದೇಶ ಮೂಲದವರಾಗಿದ್ದರೆ, ಫರ್ಮಾನ್ ಖಾನ್ ಮಹಾರಾಷ್ಟ್ರ ಮೂಲದವರು. ಮಾರ್ಚ್ 11 ರಂದು ಕೇರಳದ ಅರ್ಮನೂರ್ ಶ್ರೀ ನೈನಾರ್ ದೇವಾ ದೇವಸ್ಥಾನದಲ್ಲ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 6 ತಿಂಗಳಿನಿಂದ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಪ್ರೀತಿಯಾಗಿ ತಿರುಗಿತ್ತು. 2025ರ ಮಹಾ ಕುಂಭ ಮೇಳದಲ್ಲಿ ಸರ ಮಾಲೆ ಮಾರುತ್ತಿದ್ದ ಬೆಡಗಿ, ಯೂಟ್ಯೂಬರ್ ಮೂಲಕ ಭಾರಿ ವೈರಲ್ ಆಗಿದ್ದಳು. ಈಕೆಯ ಕಣ್ಣಿಗೆ ಹಲವರು ಮನಸೋತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ