ಟ್ವೀಟರಿಂದ ಭಾರತದ ಪರಾಗ್ ವಜಾಕ್ಕೆ ಕಾರಣ ಕೊಟ್ಟ ಎಲಾನ್ ಮಸ್ಕ್, ಪರಾಗ್ ಆಕ್ರಮಣಶೀಲ ವ್ಯಕ್ತಿತ್ವದವರಾಗಿರಲಿಲ್ಲ. ಸಿಇಒ ಆಗಲು ಎಲ್ಲರನ್ನೂ ಮೆಚ್ಚಿಸಬೇಕಿಲ್ಲ: ಮಸ್ಕ್
ಸ್ಯಾನ್‌ಫ್ರಾನ್ಸಿಸ್ಕೋ (ಸೆ.5): ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್ ಅನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಖರೀದಿಸುತ್ತಿದ್ದಂತೆ, ಆ ಕಂಪನಿಯ ಸಿಇಒ ಆಗಿದ್ದ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಅವರನ್ನು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಜಾಗೊಳಿಸಿದ್ದರು. ಆ ನಿರ್ಧಾರವನ್ನು ಕೈಗೊಂಡಿದ್ದು ಏಕೆ ಎಂಬುದರ ಬಗ್ಗೆ ಮಸ್ಕ್ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಆಸ್ತಿ ಒಂದೇ ವರ್ಷಕ್ಕೆ 1532 ಕೋಟಿ ಏರಿಕೆ, ಯಾವ ಪಕ್ಷ ಟಾಪ್‌ನಲ್ಲಿದೆ?
ಟ್ವೀಟರ್ ಖರೀದಿಸುವುದಕ್ಕೂ ಮುನ್ನ ಪರಾಗ್ ಅವರನ್ನು 2022ರಲ್ಲಿ ಔತಣಕೂಟದ ನೆಪದಲ್ಲಿ ಭೇಟಿಯಾಗಿದ್ದೆ. ಪರಾಗ್ ಅವರ ವ್ಯಕ್ತಿತ್ವ ನನ್ನನ್ನು ಪ್ರಭಾವಿಸಲಿಲ್ಲ. ಪರಾಗ್ ಒಳ್ಳೆಯ ವ್ಯಕ್ತಿಯೇ ಆಗಿದ್ದರು. ಆದರೆ ಸಿಇಒ ಆಗಲು ಅದು ಕಾರಣವಾಗುವುದಿಲ್ಲ. ಸಿಇಒ ಆಗಲು ಎಲ್ಲ ಜನರೂ ಮೆಚ್ಚಿಕೊಳ್ಳಬೇಕು ಎಂದೇನೂ ಇಲ್ಲ. ಟ್ವೀಟರ್‌ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್ ಬೇಕಾಗಿತ್ತು (ಆಕ್ರಮಣಶೀಲ ವ್ಯಕ್ತಿತ್ವದವರು). ಆದರೆ ಪರಾಗ್ ಅದಾಗಿರಲಿಲ್ಲ ಎಂದು ಮಸ್ಕ್ ತಿಳಿಸಿದ್ದಾರೆ.
ಮಸ್ಕ್ ಅವರ ಜೀವನಗಾಥೆ ಕುರಿತು ಲೇಖಕ ವಾಲ್ಟರ್ ಐಸಾಕ್ಸನ್ ಅವರು ಪುಸ್ತಕವೊಂದನ್ನು ಬರೆದಿದ್ದಾರೆ. ಸೆ.12ರಂದು ಬಿಡುಗಡೆಯಾಗುವ ಆ ಕೃತಿಯಲ್ಲಿ ಪರಾಗ್ ವಜಾ ಕುರಿತ ಈ ಅಂಶಗಳು ಇವೆ.
ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!
ಪರಾಗ್ ಒಬ್ಬರೇ ಅಲ್ಲ, ಟ್ವೀಟರ್ ಅನ್ನು ಖರೀದಿಸಿದ ಬಳಿಕ ಆ ಕಂಪನಿಯ ಉನ್ನತ ಸಿಬ್ಬಂದಿಯನ್ನು ಏಕಾಏಕಿ ಮಸ್ಕ್ ವಜಾಗೊಳಿಸಿದ್ದರು. ನಂತರ ಸಾವಿರಾರು ನೌಕರರು ಕೆಲಸ ಕಳೆದುಕೊಂಡಿದ್ದರು. ಬಳಿಕ ಟ್ವೀಟರ್ ಹೆಸರನ್ನು ‘ಎಕ್ಸ್’ ಎಂದು ಬದಲಿಸಿದರು.