
ನವದೆಹಲಿ(ಜು.09): ಭಾರತದ ರಾಷ್ಟ್ರೀಯ ತನಿಖಾ ದಳ(NIA)ದಿಂದ ಬಂಧನ ಭೀತಿಯಲ್ಲಿರುವ ವಿವಾದಿತ ಇಸ್ಲಾಂ ಧರ್ಮಪ್ರಚಾರಕ ಝಾಕಿರ್ ನಾಯ್ಕ್ ವಿದೇಶದಲ್ಲಿ ತಲೆಮರೆಸಿಕೊಂಡು ವಿವಾದಿತ ಹೇಳಿಕೆ ನೀಡುತ್ತಿದ್ದಾರೆ. ಮಲೇಷಿಯಾದಲ್ಲಿ ಅಡಗಿರುವ ಜಾಕಿರ್ ನಾಯ್ಕ್ ಇದೀಗ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಮುಸ್ಲಿಮರಿಗೆ ಮಾತ್ರ ಸ್ವರ್ಗದಲ್ಲಿ ಸ್ಥಾನವಿದೆ. ಆದರೆ ಮುಸ್ಲಿಮೇತರಿಗೆ ನರಕವೇ ಗತಿ ಎಂದಿದ್ದಾರೆ.
ಶಿಕ್ಷೆ ಆಗುವವರೆಗೆ ಅರೆಸ್ಟ್ ಮಾಡದ ಭರವಸೆ ಕೊಟ್ರೆ ಭಾರತಕ್ಕೆ ಬರುವೆ: ನಾಯ್ಕ್
ಜೂನ್ 27 ರಂದು Youtubeನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿರುವ ಆರೋಪ ಎದುರಿಸುತ್ತಿರು ಝಾಕಿರ್ ನಾಯ್ಕ್ ವಿವಾದ ಹೇಳಿಕೆ ನೀಡಿದ್ದಾರೆ. ಬೆಂಬಲಿಗರ ಜೊತೆಗಿನ ಸಂವಾದದಲ್ಲಿ ಜಾಕಿರ್ ಸ್ವರ್ಗ ನರಕದ ಪಾಠ ಮಾಡಿದ್ದಾರೆ. ಈ ವೇಳೆ ಭಾರತದ ಪತ್ರಕರ್ತ ರವೀಶ್ ಕುಮಾರ್ ಹಾಗೂ ಮುಸ್ಲಿಮೇತರು ಸ್ಥಿತಿ ಏನು ಎಂದು ಕೇಳಲಾಗಿದೆ.
ಜಾಕಿರ್ ನಾಯ್ಕ್‌ನನ್ನು ಭಾರತಕ್ಕೆ ಕಳಸಲ್ವಂತೆ ಮಲೇಷ್ಯಾ ಪ್ರಧಾನಿ!
ಈ ಪ್ರಶ್ನೆಗೆ ಉತ್ತರಿಸುತ್ತಾ ಝಾಕಿರ್ ನಾಯ್ಕ್, ರವೀಶ್ ಕುಮಾರ್ ಹಾಗೂ ಇತರ ಮಸ್ಲಿಮೇತರರಿಗೆ ಸ್ವರ್ಗದಲ್ಲಿ ಸ್ಥಾನವಿಲ್ಲ. ಮಸಲ್ಮಾನರ ಜನ್ನತ್(ಸ್ವರ್ಗ)ಗೆ ಅವರು ಅರ್ಹರಲ್ಲ ಎಂದು ಝಾಕಿರ್ ನಾಯ್ಕ್ ಹೇಳಿದ್ದಾರೆ.
ಭಯೋತ್ಪಾದನೆ ಪ್ರಚೋದನೆ ನೀಡಿದ ಗಂಭೀರ ಆರೋಪ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪ ಹೊತ್ತಿರುವ ಝಾಕಿರ್ ನಾಯ್ಕ್,ಬಂಧನ ಭೀತಿಯಿಂದ ಮಲೇಷಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ