ಒಂದೆಡೆ ಕೊರೋನಾ ವೈರಸ್ ಹೊಡೆತ, ಮತ್ತೊಂದೆಡೆ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ. ಇದು ಭಾರತ ಮಾತ್ರವಲ್ಲ, ವಿಶ್ವದ ಬಹುತೇಕ ರಾಷ್ಟ್ರಗಳ ಪರಿಸ್ಥಿತಿ. ಇದರ ನಡುವೆ ಆರ್ಥಿಕ ಪುನಶ್ಚೇತನಕ್ಕೆ ಆಯೋಜಿಸಲಾಗ ಇಂಡಿಯಾ ಗ್ಲೋಬಲ್ ವೀಕ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಭಾರತಕ್ಕೆ ಅಡಿಪಾಯ ಹಾಕಿದ್ದಾರೆ.
ನವದೆಹಲಿ(ಜು.09): ಕೊರೋನಾ ವೈರಸ್‌ನಿಂದ ದೇಶದ ನಾಗರೀಕರ ಆರೋಗ್ಯ ಹದಗೆಡುತ್ತಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇತ್ತ ಕೈಗಾರಿಕೆಗಳು, ವಾಣಿಜ್ಯ ಉದ್ದಿಮೆ, ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವ ಕಾರಣ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದರ ನಡುವೆ ಆರ್ಥಿಕ ಪುನಶ್ಚೇತನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಗ್ಲೋಬಲ್ ವೀಕ್ ಕಾರ್ಯಕ್ರಮದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಫೋನ್ ಕಾಲ್; ಇಲ್ಲಿದೆ ಮಾತುಕತೆ ಸಾರಾಂಶ!.
undefined
ವಿಶ್ವದ ಎಲ್ಲಾ ಕಂಪನಿಗಳು ಭಾರತಕ್ಕೆ ಆಗಮಿಸಿ ವ್ಯವಹಾರ ನಡೆಸಲು ಬೇಕಾದ ವಾತಾವರಣ ನಿರ್ಮಿಸಲಾಗಿದೆ. ಭಾರತ ವಿಶ್ವದ ಮಕ್ತ ಆರ್ಥಿಕತೆ ಹೊಂದಿದೆ ರಾಷ್ಟ್ರ. ಹೀಗಾಗಿ ವಿದೇಶಿ ಕಂಪನಿಗಳಿಗೆ ಅದ್ಧೂರಿ ಸ್ವಾಗತ ನೀಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ
ಭಾರತೀಯ ಪ್ರಜೆಗಳ ಆರೋಗ್ಯಕ್ಕೆ ಪ್ರಮುಖ ಆದ್ಯತೆಯಾಗಿದೆ. ಇದರ ಜೊತೆಗೆ ಆರ್ಥಿಕ ಆರೋಗ್ಯವೂ ಉತ್ತಮಪಡಿಸಲು ಭಾರತ ಹೋರಾಟ ನಡೆಸುತ್ತಿದೆ. ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಹೋರಾಟದ ಕುರಿತು ಮಾಹಿತಿಯನ್ನು ಪ್ರಧಾನಿ ಮೋದಿ ಹೇಳಿದ್ದಾರೆ. ಕೊರೋನಾ ವೈರಸ್‌ಗೆ ಔಷದ ಹಾಗೂ ಹೆಚ್ಚು ಉತ್ಪಾದನೆ ಮಾಡಲು ಭಾರತ ಸಿದ್ದ ಎಂದಿದ್ದಾರೆ.
30ಕ್ಕೂ ಹೆಚ್ಚು ರಾಷ್ಟ್ರದ ಪ್ರತಿನಿಧಿಗಳು ಇಂಡಿಯಾ ಗ್ಲೋಬಲ್ ವೀಕ್ 2020 ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರದ ದಿಗ್ಗಜರು, ತಜ್ಞರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕೊರೋನಾ ವೈರಸ್ ನಿಯಂತ್ರಣ ಜೊತೆಗೆ ಆರ್ಥಿಕತೆಯನ್ನು ಸರಿದೂಗಿಸುವ ಜವಾಬ್ದಾರಿ ಎಲ್ಲಾ ರಾಷ್ಟ್ರಗಳಿದೆ. ಈ ನಿಟ್ಟಿನಲ್ಲಿ ಭಾರತ ಗ್ಲೋಬಲ್ ವೀಕ್ ಕಾರ್ಯಕ್ರಮದ ಮೂಲಕ ಮಹತ್ವದ ಹೆಜ್ಜೆ ಇಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.