Latest Videos

ಐಸ್ ಕ್ರೀಮ್ ಆರ್ಡರ್ ಮಾಡಿದ ಮಹಿಳೆಗ ಶಾಕ್, ಪ್ಯಾಕ್ ತೆರೆದಾಗ ಪತ್ತೆಯಾಯ್ತು ಸತ್ತ ಚೇಳು!

By Chethan KumarFirst Published Jun 15, 2024, 8:37 PM IST
Highlights

ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಐಸ್‌ಕ್ರೀಮ್‌ನಲ್ಲಿ ಇತ್ತೀಚೆಗೆ ಮನುಷ್ಯನ ಬೆರಳು ಪತ್ತೆಯಾದ ಘಟನೆ ಬೆನ್ನಲ್ಲೇ ಇದೀಗ ಮಹಿಳೆ ಆರ್ಡರ್ ಮಾಡಿದ ಅಮೂಲ್ ಐಸ್‌ಕ್ರೀಮ್‌ನಲ್ಲಿ ಚೇಳು ಪತ್ತೆಯಾದ ಘಟನೆ ವರದಿಯಾಗಿದೆ.

ನೋಯ್ಡಾ(ಜೂ.15) ರೆಡಿ ಮೇಡ್ ಫುಡ್, ಐಸ್ ಕ್ರೀಮ್ ಸೇರಿದಂತೆ ತಿನಿಸುಗಳಲ್ಲಿ ಸತ್ಯ ಕೀಟಗಳು, ಸೇರಿದಂತೆ ಜಂತುಗಳ ಪತ್ತೆಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಐಸ್ ಕ್ರೀಮ್‌ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿನ ಮಹಿಳೆಗೆ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಅಮೂಲ್ ಐಸ್ ಕ್ರೀಮ್‌ನಲ್ಲಿ ಸತ್ತ ಚೇಳು ಪತ್ತೆಯಾಗಿದೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಮಹಿಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನೋಯ್ಡಾ ಸೆಕ್ಟರ್ 12ರ ನಿವಾಸಿ ದೀಪಾ ಮಕ್ಕಳ ಆಸೆಯಂತೆ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾರೆ. ಮ್ಯಾಂಗೋ ಮಿಲ್ಕ್ ಶೇಕ್ ಮಾಡುವುದಾಗಿ ಭರವಸೆ ನೀಡಿದ್ದ ದೀಪಾ, ಅಮೂಲ್ ವೆನಿಲ್ಲಾ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾರೆ. ಆನ್‌ಲೈನ್ ಬ್ಲಿಂಕಿಂಟ್ ಮೂಲಕ ಐಸ್ ಕ್ರೀಮ್ ಆರ್ಡರ್ ಪ್ಲೇಸ್ ಮಾಡಲಾಗಿದೆ. 195 ರೂಪಾಯಿ ಪಾವತಿಸಿದ್ದಾರೆ. ಕೆಲವೇ ಹೊತ್ತಲ್ಲಿ ಐಸ್ ಕ್ರೀಮ್ ದೀಪಾ ಮನೆ ಸೇರಿದೆ.

ಜೆಪ್ಟೊದಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ ಮುಂಬೈ ವೈದ್ಯನಿಗೆ ಶಾಕ್: ಕೋನ್ ಐಸ್‌ಕ್ರೀಂನಲ್ಲಿತ್ತು ಮಾನವ ಬೆರಳು

ಐಸ್ ಕ್ರೀಮ್ ಪ್ಯಾಕ್ ತೆರೆದ ದೀಪಾಗೆ ಅಚ್ಚರಿಯಾಗಿದೆ. ಕಾರಣ ಐಸ್ ಕ್ರೀಮ್‌ನಲ್ಲಿ ಸತ್ತ ಚೇಳೊಂದು ಪತ್ತೆಯಾಗಿದೆ. ಒಂದೆಡೆ ಆತಂಕ, ಆಕ್ರೋಶ ಎಲ್ಲವೂ ಹೆಚ್ಚಾಗಿದೆ. ಕಾರಣ ಐಸ್ ಕ್ರೀಮ್ ಮೇಲಿನ ಭಾಗದಲ್ಲೇ ಚೇಳು ಪತ್ತೆಯಾದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಐಸ್ ಕ್ರೀಮ್ ತಿಂದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಠವಶಾತ್ ಯಾರೂ ತಿಂದಿರಲಿಲ್ಲ ಎಂದು ದೀಪಾ ಹೇಳಿದ್ದಾರೆ.

ಐಸ್ ಕ್ರೀಮ್‌ನಲ್ಲಿ ಚೇಳು ಪತ್ತೆಯಾದ ಬೆನ್ನಲ್ಲೇ ವಿಡಿಯೋ ಹಾಗೂ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಎಲ್ಲೆಡೆ ಹರಿದಾಡಿದೆ. ಆಹಾರಗಳನ್ನು ತಿನ್ನುವ ಮೊದಲು ಎರಡೆರಡು ಬಾರಿ ಪರಿಶೀಲಿಸಿ ಎಂದು ದೀಪಾ ಸಲಹೆ ನೀಡಿದ್ದಾರೆ. ಮಕ್ಕಳಿಗೆ ಆಹಾರ ನೀಡುವಾಗಲೂ ಪ್ಯಾಕ್ ಪರಿಶೀಲಿಸಿ, ನೇರವಾಗಿ ಮಕ್ಕಳಿಗೆ ಕೈಗೆ ನೀಡಬೇಡಿ. ಇದು ನಾನು ಕಲಿತ ಪಾಠ ಎಂದು ಮಹಿಳೆ ಸಲಹೆ ನೀಡಿದ್ದಾರೆ. 

 

After a cut finger in ice cream, a centipede was found in Amul Ice Cream in Noida, watch pic.twitter.com/Mc5cm7rb6O

— Jyoti Karki (@Jyoti_karki_)

 

ಬ್ಲಿಂಕಿಟ್ ಹಾಗೂ ಅಮೂಲ್ ಮ್ಯಾನೇಜರ್ ಮಹಿಳೆಯನ್ನು ಸಂಪರ್ಕಿಸಿದೆ, ಬ್ಲಿಂಕಿಟ್ ಹಣ ವಾಪಸ್ ನೀಡಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ದೀಪಾ ಈ ಮಾತುಗಳನ್ನು ಅಲ್ಲಗೆಳೆದಿದ್ದಾರೆ. ಯಾರೂ ಕೂಡ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ವೈರಲ್ ಹುಳುಗಳ ಬರ್ಗರ್; 'ಮೊದಲು ನೀವದನ್ನು ತಿನ್ನಿ ನಂತರ ಅವು ನಿಮ್ಮನ್ನು ತಿನ್ನುತ್ತವೆ!'

click me!