ಪಾಕಿಸ್ತಾನ ಜೊತೆ ಸೇರಿದ ರಾಷ್ಟ್ರಕ್ಕೆ ಶಾಕ್, ಭಾರತೀಯ ವರ್ತಕರಿಂಗ ಟರ್ಕಿ ಆ್ಯಪಲ್ ಬ್ಯಾನ್

Published : May 13, 2025, 05:57 PM IST
ಪಾಕಿಸ್ತಾನ ಜೊತೆ ಸೇರಿದ ರಾಷ್ಟ್ರಕ್ಕೆ ಶಾಕ್, ಭಾರತೀಯ ವರ್ತಕರಿಂಗ ಟರ್ಕಿ ಆ್ಯಪಲ್ ಬ್ಯಾನ್

ಸಾರಾಂಶ

ಭಾರತದ ಮೇಲೆ ಉಗ್ರರ ಬಿಟ್ಟು ಬಳಿಕ ಗಡಿಯಲ್ಲಿ ದಾಳಿ ನಡೆಸಿದ ಪಾಕಿಸ್ತಾನಕ್ಕೆ ನೆರವು ನೀಡಿದ್ದು ಟರ್ಕಿ. ಆದರೆ ಈ ಟರ್ಕಿಗೆ ಇದೀಗ ಭಾರತೀಯರು ಶಾಕ್ ನೀಡಿದ್ದಾರೆ.  ವರ್ತಕರು ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದಾರೆ. 

ಪುಣೆ(ಮೇ.13) ಭಾರತದ ಮೇಲೆ ದಾಳಿಗೆ ಪಾಕಿಸ್ತಾನಕ್ಕೆ ನೆರವು ನೀಡಿದ ಕೆಲವೇ ಕೆಲವು ರಾಷ್ಟ್ರ ಪೈಕಿ ಟರ್ಕಿ ಮೊದಲ ಸ್ಥಾನದಲ್ಲಿತ್ತು. ಭಾರತ ಉಗ್ರರ ವಿರುದ್ದ ಹೋರಾಟಕ್ಕಿಳಿದರೆ ಪಾಕಿಸ್ತಾನ, ಭಾರತದ ಮೇಲೆ ಸಂಘರ್ಷಕ್ಕಿಳಿದಿತ್ತು.  ಪಾಕಿಸ್ತಾನದ ಈ ನಡೆಗೆ ಟರ್ಕಿ ಬೆಂಬಲ ಸೂಚಿಸಿತ್ತು. ಟರ್ಕಿ ಬಹಿರಂಗವಾಗಿ ಬೆಂಬಲ ನೀಡಿದ್ದು ಮಾತ್ರವಲ್ಲ, ಭಾರತದ ಮೇಲೆ ದಾಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿತ್ತು. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿಗೆ ಇದೀಗ ಭಾರತೀಯರು ಶಾಕ್ ನೀಡಿದ್ದಾರೆ. ಪುಣೆಯ ವರ್ತಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದಾರೆ.

ಪುಣೆ ಸಿಟಿ ಮಾರ್ಕೆಟ್ ಮೂಲಕ ಭಾರತದಲಲ್ಲಿ ಟರ್ಕಿ ಆ್ಯಪಲ್ 1,000 ರಿಂದ 2,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿತ್ತು. ಟರ್ಕಿಶ್ ಆ್ಯಪಲ್‌ಗೆ ಭಾರತದಲ್ಲಿ ಭಾರಿ ಬೇಡಿಕಯೂ ಇತ್ತು. ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಟರ್ಕಿ ಆ್ಯಪಲ್ ಭಾರತಕ್ಕೆ ಪೂರೈಕೆಯಾಗುತ್ತಿತ್ತು. ಆದರೆ ಪುಣೆ ವರ್ತಕರು ಸ್ವಯಂಪ್ರೇರಿತವಾಗಿ ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದಾರೆ. ಟರ್ಕಿ ವಿರುದ್ದ ವರ್ತಕರು ಭಾರಿ ಆಕ್ರೋಶ ಹೊರಹಾಕಿದ್ದಾರೆ.

ಅದಂಪುರ ವಾಯುನೆಲೆಗೆ ಭೇಟಿ ಪಾಕ್ ಸುಳ್ಳು ಬಯಲು ಮಾಡಿದ ಮೋದಿ, ಜಗತ್ತಿಗೆ ಸ್ಪಷ್ಟ ಸಂದೇಶ

ಭಾರತದ ಹಣವನ್ನು ಭಾರತ ವಿರುದ್ಧ ಬಳಸಿದ ಟರ್ಕಿ
ಪುಣೆ ಆ್ಯಪಲ್ ವರ್ತಕರು ಟರ್ಕಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಭಾರತದ ಜೊತೆ ಆ್ಯಪಲ್ ವಹಿವಾಟು ನಡೆಸಿ ಇದರಿಂದ ಬಂದ ಹಣವನ್ನು ಭಾರತದ ವಿರುದ್ದವೇ ಟರ್ಕಿ ಬಳಸಿದೆ. ಟರ್ಕಿ ಸೇಬು ಹಣ್ಣು ಬ್ಯಾನ್ ಮಾಡಿರುವುದು ಆರ್ಥಿಕತೆಗೆ ಹೊಡೆತ ನೀಡಬೇಕು ಅನ್ನೋ ಕಾರಣದಿಂದ  ಅಲ್ಲ. ಟರ್ಕಿ ಬೇರೆ ದೇಶಕ್ಕೆ ಆ್ಯಪಲ್ ಕಳುಹಿಸಿ ವ್ಯಾಪಾರ ವಹಿವಾಟು ಕುದುರಿಸುತ್ತದೆ, ಆದಾಯ ಸಂಪಾದಿಸುತ್ತದೆ. ಆದರೆ ನಮ್ಮ ಟರ್ಕಿ ಸೇಬು ಹಣ್ಣು ಬ್ಯಾನ್ ನಿರ್ಧಾರ ಭಾರತೀಯ ಯೋಧರಿಗೆ ಬೆಂಬಲ ನೀಡಲು ತೆಗೆದುಕೊಂಡಿದ್ದೇವೆ. ನಾವು ಭಾರತೀಯ ಯೋಧರ ಜೊತೆಗಿದ್ದೇವೆ. ಯೋಧರಿಗೆ ನೈತಿಕ ಬೆಂಬಲ ನೀಡಲು ನಾವು ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದೇವೆ ಎಂದು ವರ್ತಕರು ಹೇಳಿದ್ದಾರೆ.

 

 

ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ ನಿರ್ಧಾರ ಘೋಷಿಸಿದ ಪುಣೆ ಸೇಬು ಹಣ್ಣಿನ ವರ್ತಕ ಸುಯೋಗ್ ಝೆಂಡೆ, ಟರ್ಕಿ ನಮ್ಮ ಶತ್ರುದೇಶಕ್ಕೆ ನೆರವು ನೀಡುವುದರ ಕುರಿತು ತಕರಾರಿಲ್ಲ. ಆದರೆ ಭಾರತ ವಿರುದ್ಧ ಈ ಹಣ ಬಳಕೆ ಮಾಡಿರುವುದು ನಾವು ಸಹಿಸುವುದಿಲ್ಲ. ಭಾರತದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಗೆ ಟರ್ಕಿ ನೆರವು ನೀಡಿದೆ. ಹೀಗಾಗಿ ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದೇವೆ. ಇದೀಗ ಉತ್ತರಖಂಡ, ಹಿಮಾಚಲ ಪ್ರದೇಶ ಹಾಗೂ ಇರಾನ್‌ನಿಂದ ಸೇಬು ಹಣ್ಣು ತರಿಸಿಕೊಳ್ಳುತ್ತಿದ್ದೇವೆ ಎಂದು ಸುಯೋಗ್ ಝೆಂಡೆ ಹೇಳಿದ್ದಾರೆ.

ಟರ್ಕಿ ಆ್ಯಪಲ್‌ಗೆ ಬೇಡಿಕೆ ಕುಸಿತ
ಮಾರುಕಟ್ಟೆಯಲ್ಲೂ ಟರ್ಕಿ ಆ್ಯಪಲ್‌ಗೆ ಬೇಡಿಕೆ ಭಾರಿ ಕುಸಿತಗೊಂಡಿದೆ. ಶೇಕಡಾ 50 ರಿಂದ 60 ರಷ್ಟು ಟರ್ಕಿ ಆ್ಯಪಲ್ ಮಾರಾಟ ಕುಸಿತವಾಗಿದೆ ಎಂದು ವರ್ತಕರು ಹೇಳಿದ್ದಾರೆ. ಭಾರತೀಯರು ಎಚ್ಚೆತ್ತುಕೊಂಡಿದ್ದಾರೆ. ಟರ್ಕಿ ಆ್ಯಪ್ ಬಹಿಷ್ಕರಿಸುತ್ತಿದ್ದಾರೆ ಎಂದು ಸುಯೋಗ್ ಹೇಳಿದ್ದಾರೆ.

ಪಾಕ್ ಗೆ ನಾವು ಯಾವುದೇ ಶಸ್ತ್ರಾಸ್ತ್ರ ಪೂರೈಕೆ ಮಾಡಿಲ್ಲ ಎಂದ ಚೀನಾ । India Pak Ceasefire

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌
ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ