ನೋಯ್ಡಾದ ಪ್ರತಿಷ್ಠಿತ ಐಷಾರಾಮಿ ಹೌಸಿಂಗ್ ಸೊಸೈಟಿ ಫ್ಲಾಟೊಂದರಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು 16 ರಿಂದ 20 ವರ್ಷದೊಳಗಿನ ಪ್ರಾಯದ ಹಲವು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ನವದೆಹಲಿ: ನೋಯ್ಡಾದ ಪ್ರತಿಷ್ಠಿತ ಐಷಾರಾಮಿ ಹೌಸಿಂಗ್ ಸೊಸೈಟಿ ಫ್ಲಾಟೊಂದರಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು 16 ರಿಂದ 20 ವರ್ಷದೊಳಗಿನ ಪ್ರಾಯದ ಹಲವು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ನೋಯ್ಡಾ ಸೆಕ್ಟರ್ 94ರ ಸೂಪರ್‌ನೋವಾ ಸೊಸೈಟಿಯಲ್ಲಿ ನಡೆದ ಈ ರೇವ್‌ಪಾರ್ಟಿಯಲ್ಲಿ ವಿವಿಧ ಕಾಲೇಜಿನ 39 ವಿದ್ಯಾರ್ಥಿಗಳು ಭಾಗಿಯಾಗಿದ್ದು, ಇದರಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಕೂಡ ಇದ್ದರು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರೆಲ್ಲರೂ 16ರಿಂದ 20 ವರ್ಷದೊಳಗಿನ ವಿದ್ಯಾರ್ಥಿಗಳಾಗಿದ್ದು, ದಾಳಿ ವೇಳೆ ಕೆಲ ವಿದ್ಯಾರ್ಥಿಗಳು ಮದ್ಯಸೇವನೆ ಮಾಡುತ್ತಿದ್ದರು, 21ರೊಳಗಿನ ಪ್ರಾಯದವರು ಮದ್ಯಪಾನ ಮಾಡುವುದು ಉತ್ತರ ಪ್ರದೇಶದಲ್ಲಿ ಕಾನೂನು ಬಾಹಿರವಾಗಿದೆ. ಘಟನಾ ಸ್ಥಳದಲ್ಲಿ ಹಲವು ಮದ್ಯದ ಬಾಟಲ್‌ಗಳು, ಹುಕ್ಕಾ ಹಾಗೂ ಇತರ ಮತ್ತೇರಿಸುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಹೌಸಿಂಗ್ ಸೊಸೈಟಿಯ ನಿವಾಸಿಗಳು ಹೇಳುವ ಪ್ರಕಾರ, ಹೀಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಪ್ರಶ್ನಿಸಿದ್ದ ಅಲ್ಲಿನ ನಿವಾಸಿಗಳ ಜೊತೆ ಈ ವಿದ್ಯಾರ್ಥಿಗಳು ದುರ್ವರ್ತನೆ ತೋರಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಖಾಲಿಯಾದ ಮದ್ಯದ ಬಾಟಲ್‌ಗಳನ್ನು ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾರೆ ಎಂದಿದ್ದಾರೆ. ಅಂದಹಾಗೆ ಈ ವಿದ್ಯಾರ್ಥಿಗಳು ವಾಟ್ಸಾಪ್‌ನಲ್ಲೇ ಈ ರೇವ್ ಪಾರ್ಟಿಗೆ ಆಹ್ವಾನ ನೀಡಿದ್ದರು. ಜೊತೆಗೆ ಪ್ರವೇಶ ಶುಲ್ಕವನ್ನು ನಿಗದಿ ಮಾಡಿದ್ದರು ಎಂದು ವರದಿ ಆಗಿದೆ.
Rave Party in Bengaluru: ರೇವ್ ಪಾರ್ಟಿ ಪ್ರಕರಣ..ಎಣ್ಣೆ ಕಿಕ್, ಡ್ರಗ್ಸ್ ಕಿಕ್ ಜೊತೆಗೆ ಅದೂ ಸಹ ಇತ್ತಂತೆ!
ಎಂಥ ವಿಚಿತ್ರ ನೋಡಿ ಮಕ್ಕಳು ಶಾಲೆಗೆ ಹೋಗಿ ಉತ್ತಮ ವಿದ್ಯಾಭ್ಯಾಸ ಪಡೆದು ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಸ್ವಾಭಿಮಾನಿಗಳಾಗಲಿ ಎಂದು ಪೋಷಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುತ್ತಿದ್ರೆ, ಕಷ್ಟದ ಅರಿವೇ ಇಲ್ಲದ ವಿದ್ಯಾರ್ಥಿಗಳು ಪೋಷಕರ ಈ ತ್ಯಾಗದ ಅರಿವಿಲ್ಲದೇ ದುಶ್ಚಟಗಳಿಗೆ ದಾಸರಾಗುತ್ತಾ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ.
ಬೆಂಗಳೂರು: ರೇವ್ ಪಾರ್ಟಿಯಲ್ಲಿ 86 ಮಂದಿ ಡ್ರಗ್ಸ್ ಸೇವಿಸಿದ್ದು ನಿಜ..!