ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹಾಕುವ ಹುಚ್ಚು ಹೊಂದಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿ ತನ್ನ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದ. ಹಾಗೆಯೇ ಕೆಲ ದಿನಗಳ ಹಿಂದೆ ಈತ ಎರಡು ದೋಣಿಗಳ ಮೇಲೆ ಕಾಲಿಟ್ಟಂತೆ ಚಲಿಸುವ ಎರಡು ಕಾರುಗಳ ಮೇಲೆ ತನ್ನ ಒಂದೊಂದು ಕಾಲುಗಳನ್ನು ಇಟ್ಟು ಸ್ಟಂಟ್ ಮಾಡಿದ್ದ ಇದರ ವಿಡಿಯೋವನ್ನು ಆತ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ನೋಡಿದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಕಂಬಿ ಹಿಂದೆ ಕೂರಿಸಿದ್ದಾರೆ.
ರಾಜೀವ್ ಬಂಧಿತ ವ್ಯಕ್ತಿ. ಈತ ಭಾರಿ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಚೊಚ್ಚಲ ಚಿತ್ರ ಫೂಲ್ ಔರ್ ಕಾಂತೆ (1991) ನಲ್ಲಿ ನಟ ಅಜಯ್ ದೇವಗನ್ (Ajay Devgn) ಮಾಡಿದ ಸಾಹಸವನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರಾಜೀವ್ ಈ ಸ್ಟಂಟ್‌ಗಾಗಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದ ಮತ್ತು ಜನನಿಬಿಡ ರಸ್ತೆಯಲ್ಲಿ ವೀಲ್ಹಿಂಗ್ ಪ್ರದರ್ಶಿಸುತ್ತಿದ್ದ. ಹಾಗೆ ಮಾಡುವ ಮೂಲಕ ಅವನು ತನ್ನ ಪ್ರಾಣವನ್ನು ಮಾತ್ರವಲ್ಲದೆ ರಸ್ತೆಯಲ್ಲಿರುವ ಇತರ ಜನರ ಪ್ರಾಣವನ್ನೂ ಅಪಾಯಕ್ಕೊಡಿದ್ದ. ಹೀಗಾಗಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆತ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಆಧರಿಸಿ, ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಈತನನ್ನು 21 ವರ್ಷ ಪ್ರಾಯದ ಸೊರಖ (Sorakha) ಗ್ರಾಮದ ನಿವಾಸಿ ರಾಜೀವ್ (Rajiv) ಎಂದು ಗುರುತಿಸಲಾಗಿದೆ. ಈತನಿಂದ ವಿಡಿಯೋ ಮಾಡಲು ಬಳಸಿದ್ದ ಎರಡು ಎಸ್‌ಯುವಿಗಳು ಮತ್ತು ಒಂದು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೆಕ್ಟರ್ 113 ಪೊಲೀಸ್ ಠಾಣೆಯ ಎಸ್‌ಎಚ್‌ಒ ಶರದ್ ಕಾಂತ್ (Sharad Kant) ಹೇಳಿದ್ದಾರೆ.
ಸ್ಟಂಟ್ ಮಾಡಲು ಬಳಸಿದ್ದ ಈ ಎರಡು ಟೊಯೊಟಾ ಫಾರ್ಚುನರ್ (Toyota Fortuners) ಕಾರುಗಳಲ್ಲಿ ಒಂದು ಮತ್ತು ಮತ್ತೊಂದು ಬೈಕ್ ರಾಜೀವ್ ಅವರ ಕುಟುಂಬಕ್ಕೆ ಸೇರಿದೆ. ಅವರು ವೀಡಿಯೊಗಾಗಿ ಮತ್ತೊಂದು ಫಾರ್ಚುನರ್ ಅನ್ನು ಸಂಬಂಧಿಕರಿಂದ ತೆಗೆದುಕೊಂಡಿದ್ದರು. ಈತ ಕೇವಲ ಸಾಮಾಜಿಕ ಮಾಧ್ಯಮಕ್ಕಾಗಿ (social media) ಮಾತ್ರ ವೀಡಿಯೊ ಮಾಡುತ್ತಿದ್ದ ಎಂದು ಎಸ್‌ಎಚ್‌ಒ ಹೇಳಿದ್ದಾರೆ.
ಬೈಕ್ ಏರಿ ಸ್ಟಂಟ್ ಮಾಡಿದ ಅಜ್ಜ: ವಿಡಿಯೋ ವೈರಲ್, ಕೇಸ್ ಜಡಿದ ಖಾಕಿ
ಮಂಗಳೂರಿನಲ್ಲಿ ನಗರದ ಹಲವೆಡೆ ಬೈಕ್ ವ್ಹೀಲಿಂಗ್(Wheeling) ನಡೆಸಿದ್ದ 8 ಮಂದಿಯನ್ನ ಪೊಲೀಸರು ಮಾರ್ಚ್‌ನಲ್ಲಿ ಬಂಧಿಸಿದ್ದರು. ಈ ಪ್ರಕರಣದಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪೊಲೀಸರು(Police) ಕಾರ್ಯಾಚರಣೆಗಿಳಿದು ಈ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ತಂಡ ಒಟ್ಟು ಐದು ಪ್ರಕರಣಗಳನ್ನ ದಾಖಲಿಸಿ ಎಂಟು ಮಂದಿಯನ್ನು ಬಂಧಿಸಿದೆ Arrest) ಬಂಧಿತರನ್ನ ಇಲ್ಯಾಸ್, ಸುಹೈಲ್, ಅಬೂಬಕ್ಕರ್ ಸಿದ್ದಿಕ್, ಸಫ್ವಾನ್, ಶರೀಫ್, ತೌಸಿಫ್, ಅನೀಝ್, ಕಿಶನ್ ಶೆಟ್ಟಿ ಎಂದು ಗುರುತಿಸಲಾಗಿದೆ.
ರಾಕಿಭಾಯ್ ಸ್ಟೈಲಲ್ಲಿ ಯುವಕನ ಬಿಂದಾಸ್ ಸ್ಟಂಟ್..!
ತೊಕ್ಕೊಟ್ಟು ಫ್ಲೈ ಓವರ್, ಉಳ್ಳಾಲ, ಅಡ್ಯಾರ್, ವಾಮಂಜೂರು ಭಾಗದಲ್ಲಿ ಬಂಧಿತ ಯುವಕರು ವ್ಹೀಲಿಂಗ್ ಮಾಡುತ್ತಿದ್ದರು. ಬಂಧಿತರಿಂದ ವ್ಹೀಲಿಂಗ್ ಮಾಡಲು ಬಳಸಿದ ಐದು ಬೈಕ್‌ಗಳನ್ನ(Bike) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಯುವಕರು ರಸ್ತೆಯಲ್ಲಿ ವ್ಹೀಲಿಂಗ್ ಮತ್ತು ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದರು. ವ್ಹೀಲಿಂಗ್ ಮಾಡಿದ ವಿಡಿಯೋಗಳನ್ನ ತಾವೇ ಸೋಶಿಯಲ್ ಮೀಡಿಯಾಗಳಲ್ಲಿ(Social Media) ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ರಸ್ತೆಗಳ ಮೇಲೆ ವ್ಹೀಲಿಂಗ್ ಮಾಡುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಬೈಕ್ ವೀಲಿಂಗ್ ಸವಾರನ ಜೀವಕ್ಕೆ ಪಾಯ ತರುವುದಷ್ಟೇ ಅಲ್ಲದೇ ಸಾರ್ವಜನಿಕರ ಅಮೂಲ್ಯಜೀವದ ಜೊತೆ, ಇತರ ವಾಹನ ಸವಾರರ ಜೀವಕ್ಕೂ ಕುತ್ತು ತುರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ