
ನೋಯ್ಡಾ: ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಕೇವಲ 24 ವರ್ಷದ ದೀಪಿಕಾ ಎಂಬ ಮಹಿಳೆ ತನ್ನ ಪತಿಯ ಮನೆಯ ಮಹಡಿಯಿಂದ ಹಾರಿ ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ಗೌತಮಬುದ್ಧ ನಗರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವರದಕ್ಷಿಣೆ ಕಿರುಕುಳಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ.
ದೀಪಿಕಾ ಪೋಷಕರು ನೀಡಿರುವ ದೂರಿನಲ್ಲಿ, ‘ಭಾನುವಾರ ಮಧ್ಯಾಹ್ನ ದೀಪಿಕಾ ನನಗೆ ಕರೆ ಮಾಡಿ, ಗಂಡನ ಮನೆಯವರು ಟೊಯೋಟಾ ಫಾರ್ಚ್ಯುನರ್ ಎಸ್‌ಯುವಿ ಮತ್ತು 50 ಲಕ್ಷ ರು. ವರದಕ್ಷಿಣೆ ಕೊಡುವಂತೆ ಹಿಂಸಿಸುತ್ತಿದ್ದಾರೆ ಎಂದು ಅತ್ತಿದ್ದಳು. ಸಂಜೆ ನಾನವರ ಮನೆಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದೆ. ಆ ರಾತ್ರಿ 12.30ರ ಹೊತ್ತಿಗೆ ದೀಪಿಕಾ ಟೆರೆಸ್ಸಿಂದ ಬಿದ್ದಳೆಂದು ಆಕೆಯ ಮನೆಯವರು ಕರೆ ಮಾಡಿದ್ದರು. ನಾನು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವಳು ಮೃತಪಟ್ಟಿದ್ದಳು’ ಎಂದು ದೂರಿದ್ದಾರೆ. ಮತ್ತೊಂದೆಡೆ ದೀಪಿಕಾರ ಚಿಕ್ಕಪ್ಪ ಮಾತನಾಡಿ, ‘1 ಕೋಟಿ ರು. ಖರ್ಚು ಮಾಡಿ ಮದುವೆ ಮಾಡಿದ್ದೆವು ಹಾಗೂ ಮಹಿಂದ್ರಾ ಸ್ಕಾರ್ಪಿಯೋ ಗಾಡಿ, 35-40 ತೊಲೆ ಬಂಗಾರ, ನಗದನ್ನು ನೀಡಿದ್ದೆವು’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ