
ನವದೆಹಲಿ (ಮೇ.01) ಭಾರತದ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ಪಾವತಿ ಮಾಡಿ ಸಾಗಬೇಕು. ಟೋಲ್ ಪಾವಕಿ ಸದ್ಯ ಫಾಸ್ಟಾಗ್ ಮೂಲಕ ಕಡಿತಗೊಳ್ಳುತ್ತಿದೆ. ಟೋಲ್ ಪ್ಲಾಜಾ ಬಳಿ ವಾಹನ ಸರದಿ ಸಾಲಿನಲ್ಲಿ ಸ್ಕ್ಯಾನ್ ಮಾಡಿ ಸಾಗಬೇಕು. ಸಂಚಾರ ದಟ್ಟಣೆ ಹೆಚ್ಚಿದ್ದರೆ ಟೋಲ್ ಪ್ಲಾಜಾ ಬಳಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದೀಗ ANPR ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಟೋಲ್ ಪ್ಲಾಜಾ ಇರುವುದಿಲ್ಲ, ಟೋಲ್ ಕಲೆಕ್ಷನ್ ಕೇಂದ್ರಗಳೂ ಇಲ್ಲ, ಬ್ಯಾರಿಕೇಡ್ ಇಲ್ಲ. ವಾಹನ ನಿಧಾನ ಮಾಡಿ ಸ್ಕ್ಯಾನ್ ಮಾಡಬೇಕಾದ ಅನಿವಾರ್ಯತೆಯೂ ಇಲ್ಲ, ಗೇಟ್ ಓಪನ್ ಆಗಲು ಕಾಯಬೇಕಾಗಿಲ್ಲ. ಹೆದ್ದಾರಿ ಮೂಲಕ ಸಾಗಿದರೆ ಸಾಕು ಆಟೋಮ್ಯಾಟಿಕ್ ಆಗಿ ಟೋಲ್ ಕಡಿತಗೊಳ್ಳಲಿದೆ. ಹೊಸ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೀಶನ್ ವ್ಯವಸ್ಥೆ ಜಾರಿಯಾಗಿದೆ.
ದೆಹಲಿ ಮುಂಬೈ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇದೀಗ ಭಾರತದ ಮೊದಲ ANPR ಟೋಲ್ ಕಡಿತ ವ್ಯವಸ್ಥೆ ಆರಂಭಗೊಂಡಿದೆ. ಸೂರತ್ ಬಳಿ ಈ ANPR ವ್ಯವಸ್ಥೆ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಸಾಗುವಾಗ ಯಾವುದೇ ಟೋಲ್ ಪ್ಲಾಜಾಗಳು ಸಿಗುವುದಿಲ್ಲ. ಎಷ್ಟೇ ವೇಗದಲ್ಲಿ ಹೋದರೂ ಆಟೋಮ್ಯಾಟಿಕ್ ಆಗಿ ಟೋಲ್ ಕಡಿತಗೊಳ್ಳಲಿದೆ. ಕಳೆದ ಎರಡು ತಿಂಗಳಿನಿಂದ ಪರೀಕ್ಷೆಗಳು ಆರಂಭಗೊಂಡಿತ್ತು. ಇದೀಗ ಹೊಸ ಟೋಲ್ ವ್ಯವಸ್ಥೆ ಕಾರ್ಯಾರಂಭಗೊಂಡಿದೆ.
ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ವ್ಯವಸ್ಥೆ ಜಾರಿ ಮಾಡಿದೆ. ಈ ವ್ಯವಸ್ಥೆಯಲ್ಲಿ ANPR ಹಾಗೂ ಫಾಸ್ಟಾಗ್ ವ್ಯವಸ್ಥೆಯನ್ನೂ ಇಂಟಿಗ್ರೇಟೆಡ್ ಮಾಡಿ ಜಾರಿ ಮಾಡಲಾಗಿದೆ. ಹೆದ್ದಾರಿಗಳಲ್ಲಿ ANPR ತಂತ್ರಜ್ಞಾನ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ವಾಹನ ಹಾದು ಹೋಗುವಾಗ ತ್ವರಿತವಾಗಿ ಎಐ ಕ್ಯಾಮೆರಾ, ಎಐ ಸ್ಕ್ಯಾನರ್ ಫಾಸ್ಟಾಗ್ ಸ್ಕ್ಯಾನ್ ಮಾಡಿ ಟೋಲ್ ಹಣ ಕಡಿತ ಮಾಡಲಿದೆ. ಜಿಪಿಎಸ್ ಆಧಾರಿತ ಟೋಲ್ ಸಿಸ್ಟಮ್ ಇದಾಗಿದೆ.
ಸದ್ಯ ದೆಹಲಿ ಮುಂಬೈ ಹೆದ್ದಾರಿ 48ರಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಮೊದಲ ಪ್ರಯೋಗ ಪರೀಕ್ಷೆಗಳು ನಡೆದು ಮೇ 1 ರಿಂದ ಕಾರ್ಯಾರಂಭಗೊಂಡಿದೆ. ಮೊದಲ ದಿನವೇ ಉತ್ತಮ ಸ್ಪಂದನೆಗಳು ವ್ಯಕ್ತವಾಗಿದೆ. ಇದೀಗ ದೇಶದ ಇತರ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗುತ್ತದೆ.
ಈ ಟೋಲ್ ವ್ಯವಸ್ಥೆಯಿಂದ ಜನರು ಟೋಲ್ ಹೆದ್ದಾರಿಗಳಲ್ಲಿ ಎಷ್ಟು ಪ್ರಯಾಣ ಮಾಡುತ್ತಾರೋ ಅಷ್ಟೋ ಪಾವತಿ ಮಾಡಿದರೆ ಸಾಕು. ಸದ್ಯ ಇರುವ ವ್ಯವಸ್ಥೆಯಲ್ಲಿ ಹಲವು ಬಾರಿ ವಾಹನ ಸವಾರರು ಟೋಲ್ ಪಾವತಿ ಕೆಲವೇ ಕಿಲೋಮೀಟರ್ ತೆರಳಿ ಬಳಿಕ ತಮ್ಮ ಸ್ಥಳಗಳಿಗೆ ತೆರಳಲು ಸರ್ವೀಸ್ ರಸ್ತೆಗೆ ತಿರುಗುತ್ತಾರೆ. ಇತ್ತ ಸಂಪೂರ್ಣ ಟೋಲ್ ಪಾವತಿಸಿ ಟೋಲ್ ರಸ್ತೆಯಲ್ಲಿ ಕೆಲವೇ ಕಿಲೋಮೀಟರ್ ಬಳಸುತ್ತಾರೆ. ಇದರಿಂದ ವಾಹನ ಸವಾರರಿಗೆ ನಷ್ಟವಾಗುತ್ತದೆ. ಇತ್ತ ಕೆಲವರು ಟೋಲ್ ಪ್ಲಾಜಾ ಬರುವ ಮುನ್ನ ಸರ್ವೀಸ್ ರಸ್ತೆಗೆ ತೆರಳಿ ಬಳಿಕ ಮತ್ತೆ ಹೆದ್ದಾರಿಗೆ ಆಗಮಿಸುತ್ತಾರೆ. ಈ ಮೂಲಕ ಟೋಲ್ ಹಣ ಪಾವತಿಸುವುದನ್ನು ತಪ್ಪಿಸುತ್ತಾರೆ. ಹೊಸ ವ್ಯವಸ್ಥೆಯಿಂದ ನೀವು ಹೆದ್ದಾರಿಗೆ ಎಂಟ್ರಿಯಾದರೆ ಸಾಕು ಎಷ್ಟು ಕಿಲೋಮೀಟರ್ ಪ್ರಯಾಣಿಸುತ್ತೀರಿ, ಅಷ್ಟು ಮೊತ್ತ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ