ರಾಜ್ಯಗಳು ಸಿಎಎ ಜಾರಿ ಮಾಡಲೇಬೇಕು: ಕಾಂಗ್ರೆಸ್ ನಾಯಕ

By Suvarna NewsFirst Published Jan 19, 2020, 10:50 AM IST
Highlights

ರಾಜ್ಯಗಳು ಸಿಎಎ ಜಾರಿ ಮಾಡಲೇಬೇಕು| ಸಿಎಎ ಜಾರಿ ನಿರಾಕರಿಸುವುದು ಅಸಾಂವಿಧಾನಿಕ: ಕಾಂಗ್ರೆಸ್ ನಾಯಕ|

ಕಲ್ಲಿಕೋಟೆ[ಜ.19]: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆ ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ಸರ್ಕಾರವೇ ಸಿಎಎ ವಿರುದ್ಧ ಗೊತ್ತುವಳಿ ಅಂಗೀಕರಿಸಿದ ನಡುವೆಯೇ, ಯಾವುದೇ ರಾಜ್ಯವು ಸಿಎಎ ಜಾರಿಯನ್ನು ನಿರಾಕರಿ\ಸುವಂತಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪ್ರತಿಪಾದಿಸಿದ್ದಾರೆ.

ಮದುವೆ ಮಂಟಪದಲ್ಲೂ ಪೌರತ್ವ ಕಾಯ್ದೆಯದ್ದೇ ಹವಾ..!

ಅಲ್ಲದೆ, ಸಿಎಎ ಜಾರಿ ನಿರಾಕರಿಸುವುದು ಅಸಾಂವಿಧಾನಿಕ ಎಂದು ಹೇಳಿದ್ದಾರೆ. ಕೇರಳ ಸಾಹಿ ತ್ಯೋತ್ಸವವನ್ನುದ್ದೇಶಿಸಿ ಶನಿವಾರ ಮಾತ ನಾಡಿದ ಕೇಂದ್ರದ ಮಾಜಿ ಕಾನೂನು ಸಚಿವ ಸಿಬಲ್, ‘ಸಂಸತ್ತಿನಿಂದ ಅಂಗೀಕಾರಗೊಂಡಿರುವ ಸಿಎಎ ಅನ್ನು ಜಾರಿಗೊಳಿಸ ಲಾಗದು ಎಂದು ರಾಜ್ಯಗಳು ಹೇಳುವಂತಿಲ್ಲ. ಕಾಯ್ದೆ ವಾಪಸ್ ಪಡೆಯಲು ಕೇಂದ್ರಕ್ಕೆ ಒತ್ತಡ ತನ್ನಿ. ಆದರೆ, ಸಿಎಎ ಜಾರಿ ಮಾಡದಿರುವುದು ಅಸಾಂವಿಧಾನಿಕ’ ಎಂದು ಹೇಳಿದರು.

ಇನ್ನು ಸಿಎಎ ಜಾರಿಯಾದಂದಿನಿಂದ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೇರಳ ಹಾಗೂ ಪಂಜಾಬ್ ತಮ್ಮ ವಿಧಾನಸಭೆಯಲ್ಲಿ  ಸಿಎಎ ವಿರುದ್ಧ ಗೊತ್ತುವಳಿ ಅಂಗೀಕರಿಸಿ ಕೇಂದ್ರಕ್ಕೆ ಸೆಡ್ಡು ಹೊಡೆದಿವೆ.

ಹುಬ್ಬಳ್ಳಿಯಲ್ಲಿ ಅಮಿತ್ ಶಾ ಘರ್ಜನೆ: ಸಿಎಎ ಜಾರಿ ನಮ್ಮೆಲ್ಲರ ಹೊಣೆ!

click me!