ದೀಪಾವಳಿ : ಎಲ್ಲಾ ಪಟಾಕಿಗಳಿಗೂ ನಿಷೇಧ ಇಲ್ಲ

By Kannadaprabha News  |  First Published Oct 30, 2021, 6:32 AM IST
  • ದೀಪಾವಳಿ ಸಮೀಪಿಸುತ್ತಿರುವ ಬೆನ್ನಲ್ಲೇ, ಎಲ್ಲಾ ಪಟಾಕಿಗಳ ಬಳಕೆ ಮೇಲೆ ನಿಷೇಧ ಹೇರಲ್ಲ ಎಂದಿರುವ ಸುಪ್ರೀಂ
  • ನಿಷೇಧಿತ ‘ಬೇರಿಯಂ ಸಾಲ್ಟ್‌’ ರಾಸಾಯನಿಕ ಅಂಶ ಒಳಗೊಂಡ ಪಟಾಕಿಗಳನ್ನು ಮಾತ್ರವೇ ನಿಷೇಧಿಸಲಾಗುತ್ತದೆ 

ನವದೆಹಲಿ (ಅ.30): ದೀಪಾವಳಿ (Deepavali) ಸಮೀಪಿಸುತ್ತಿರುವ ಬೆನ್ನಲ್ಲೇ, ಎಲ್ಲಾ ಪಟಾಕಿಗಳ (crackers) ಬಳಕೆ ಮೇಲೆ ನಿಷೇಧ ಹೇರಲ್ಲ ಎಂದಿರುವ ಸುಪ್ರೀಂ ಕೋರ್ಟ್‌ (Supreme Court), ನಿಷೇಧಿತ ‘ಬೇರಿಯಂ ಸಾಲ್ಟ್‌’  ರಾಸಾಯನಿಕ (Chemical) ಅಂಶ ಒಳಗೊಂಡ ಪಟಾಕಿಗಳನ್ನು ಮಾತ್ರವೇ ನಿಷೇಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸದೆ.

ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ, ‘ಪಟಾಕಿ ಕುರಿತು ನಾವು ನೀಡಿದ ನಿರ್ದೇಶನಗಳನ್ನು ಯಾರೂ ಉಲ್ಲಂಘಿಸಬಾರದು. ಹಬ್ಬದ (Festival) ಹೆಸರಿನಲ್ಲಿ ಸಂವಿಧಾನದತ್ತವಾದ ಇತರರ ಆರೋಗ್ಯದ (Health) ಹಕ್ಕನ್ನು ಉಲ್ಲಂಘನೆಯಾಗಲು ಬಿಡುವುದಿಲ್ಲ. ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳ ಜೀವನದಲ್ಲಿ ಆಟವಾಡುವುದಕ್ಕೆ ಯಾರಿಗೂ ಅವಕಾಶ ನೀಡಿಲ್ಲ’ ಎಂದೂ ಹೇಳಿತು.

Latest Videos

undefined

ಬೆಂಗ್ಳೂರಲ್ಲಿ ಸಾಲು ಸಾಲು ದುರಂತ: ಗೋಡೌನ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

‘ಪಟಾಕಿಗಳ ಮೇಲೆ ಪೂರ್ತಿ ನಿಷೇಧವಿಲ್ಲ. ಆದರೆ ನಾಗರಿಕರು ಮತ್ತು ವಿಶೇಷವಾಗಿ ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ನಿಷೇಧಿತ ಬೇರಿಯಂ ಸಾಲ್ಟ್‌ (Chemical) ರಸಾಯನಿಕ ಬಳಸಿದ ಪಟಾಕಿಗಳನ್ನು ಬಳಸಲೇಬಾರದು. ತಮ್ಮ ಈ ಆದೇಶ ಪಾಲನೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಪ ಕಂಡುಬಂದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ’ ಎಂದಿತು.

ನಿಷೇಧಿತ ಪಟಾಕಿಗಳ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶಗಳನ್ನು ಜನರಲ್ಲಿ ಅರಿವು ಮೂಡಿಸಲು ರಾಜ್ಯಗಳು (States) ಮತ್ತು ಕೇಂದ್ರಾಡಳಿತ ಪ್ರದೇಶಗಳು ದಿನಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ ಮತ್ತು ಸ್ಥಳೀಯ ಕೇಬಲ್‌ಗಳ ಮುಖಾಂತರ ಪ್ರಚಾರ ಮಾಡಬೇಕು ಎಂದು ಸೂಚಿಸಿತು.

ಪಟಾಕಿ ನಿಷೇದ ಸಮುದಾಯ ವಿರೋಧಿ ಅಲ್ಲ

 

ಪಟಾಕಿ (Firecracker Ban) ನಿಷೇಧ ಮಾಡಿರುವ ತನ್ನ ಹಿಂದಿನ ಆದೇಶ ಯಾವುದೇ ಸಮುದಾಯದ ವಿರುದ್ಧವಲ್ಲ ಎಂದು (clarification) ಸ್ಪಷ್ಟಪಡಿಸಿರುವ (Supreme Court) ಸುಪ್ರೀಂಕೋರ್ಟ್‌, ಸಂಭ್ರಮಾಚರಣೆ ನೆಪದಲ್ಲಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದಷ್ಟೇ ತನ್ನ ಆದೇಶ ಹಿಂದಿನ ಉದ್ದೇಶ ಎಂದು ಹೇಳಿದೆ.

ಪರಿಸರ ಮಾಲಿನ್ಯ (Environmental Pollution) ತಡೆಯಲು ದೇಶಾದ್ಯಂತ ಪಟಾಕಿ ಸಿಡಿತಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಾತುಗಳನ್ನು ಆಡಿದ ನ್ಯಾ. ಎಂ.ಆರ್‌.ಶಾ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ‘ ಸಂಭ್ರಮಾಚರಣೆಯ ನೆಪ ಹೇಳಿಕೊಂಡು ನೀವು(ತಯಾರಕರು) ನಾಗರೀಕರ ಜೀವದ ಜೊತೆ ಆಟವಾಡುವುದು ಸಮಂಜಸವಲ್ಲ. ಕೋರ್ಟ್‌ ಯಾವುದೇ ಸಮುದಾಯದ ವಿರುದ್ಧವಾಗಿ ಈ ಆದೇಶ ನೀಡಿಲ್ಲ. ಜನರ ಮೂಲಭೂತ ಹಕ್ಕನ್ನು ರಕ್ಷಿಸುವುದಕ್ಕೋಸ್ಕರ ಈ ಆದೇಶ ನೀಡಲಾಗಿದೆ. ಆದೇಶದ ಸಂಪೂರ್ಣ ಪಾಲನೆಯಾಗಬೇಕು. ದೇಶದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧ ಮಾಡಿಲ್ಲ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿ ಇದೆ. ದೆಹಲಿಯ ಜನ ಮಾಲಿನ್ಯ ಅನುಭವಿಸುತ್ತಿರುವ ತೊಂದರೆ ಎಲ್ಲರಿಗೂ ತಿಳಿದಿದೆ. ಕೋರ್ಟ್‌ ಇರುವುದು ಜನರ ರಕ್ಷಣೆಗಾಗಿ’ ಎಂದು ಹೇಳಿದೆ.

ಏಳು ರಾಜ್ಯಗಳಲ್ಲಿ ಪಟಾಕಿ ಸಂಪೂರ್ಣ ನಿಷೇಧ

ಈ ಹಿಂದೆ ಪಟಾಕಿ ನಿಷೇಧಿಸುವ ವೇಳೆ ಸಂಪೂರ್ಣವಾಗಿ ಆದೇಶದ ಬಗ್ಗೆ ವಿವರಿಸಲಾಗಿದೆ ಎಂದು ಹೇಳಿರುವ ಕೋರ್ಟ್‌ ಆದೇಶ ಜಾರಿಗೆ ತರುವಲ್ಲಿ ಆಡಳಿತ ವಿಫಲವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದೆ.

ದೀಪಾವಳಿ ಹಬ್ಬ ಎದುರಾದಾಗ ಪಟಾಕಿ ನಿಷೇಧದ ಸುದ್ದಿ ಮತ್ತೆ ಮತ್ತೆ ಚರ್ಚೆಗೆ ಬರುತ್ತದೆ. ಬಾಲಿವುಡ್ ಮತ್ತು ಕ್ರೀಡಾ ಸೆಲೆಬ್ರಿಟಿಗಳು ಪಟಾಕಿ ನಿಷೇಧದ ಬಗ್ಗೆ ಮಾತನಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆಗಳು ಬಂದಿದ್ದವು.  ಕೊರೋನಾ ಕಾರಣಕ್ಕೆ ಕಳೆದ ದೀಪಾವಳಿಯಲ್ಲಿಯೂ ಹಲವು ರಾಜ್ಯಗಳು ಪಟಾಕಿಗೆ ಅವಕಾಶ ನೀಡಿರಲಿಲ್ಲ.  ಹಸಿರು ಪಟಾಕಿಗೆ ಈಗಲೂ ಅವಕಾಶ ಇದೆ.

click me!