* ದೇಶದಲ್ಲಿ ಮೂರನೇ ಅಲೆ ಕಾಲಿಡುವ ಮುನ್ಸೂಚನೆ
* ಮಕ್ಕಳನ್ನೇ ಟಾರ್ಗೆಟ್ ಮಾಡುವ ಮಾತುಗಳನ್ನು ಅಲ್ಲಗಳೆದ ಡಾ. ಅರೋರಾ
* ಅಂಕಿ ಅಂಶಗಳಿಂದ ಇದು ಸಾಬೀತಾಗಲ್ಲ ಎಂದ ವಿಜ್ಞಾನಿ
ನವದೆಹಲಿ(ಮೇ.25): ಇಡೀ ದೇಶವೇ ಕೊರೋನಾ ಎರಡನೇ ಅಲೆಯಿಂದ ನರಳುತ್ತಿದೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಕೊರೋನಾ ಮೂರನೇ ಅಲೆ ದಾಳಿ ಇಡಲಿದೆ ಎಂಬ ಸುದ್ದಿಗಳು ಸದ್ದು ಮಾಡುತ್ತಿವೆ. ಇದನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಸಿದ್ಧತೆಯನ್ನೂ ನಡೆಸಿವೆ. ಆದರೀಗ ಈ ಎಲ್ಲಾ ಭೀತಿಯ ನಡುವೆ ಭಾರತೀಯ ವಿಜ್ಞಾನಿಗಳು ನೀಡಿರುವ ಮಾಹಿತಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಕೊರೋನಾ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡಲಿದೆ ಎಂಬುವುದಕ್ಕೆ ಈವರೆಗೂ ಯಾವುದೇ ಆಧಾರ ಸಿಕ್ಕಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!
undefined
NTAGIನ ಅಧ್ಯಕ್ಷ ಡಾ. ಎನ್. ಕೆ. ಅರೋರಾ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡುತ್ತಾ ಭಾರತದಲ್ಲಿ ಈವರೆಗೆ ಲಭ್ಯವಾದ ಕೊರೋನಾ ಅಂಕಿ ಅಂಶಗಳಿಂದ ಮುಂದಿನ ದಿನಗಳಲ್ಲಿ ಕೊರೋನಾ ಯುವಕರು ಹಾಗೂ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲ. ಅಲ್ಲದೇ ಯಾವಾಗಿನಿಂದ ಕೊರೋನಾ ಪ್ರಕರಣಗಳು ಹೆಚ್ಚಾದಾಗ ಎರಡೂ ವರ್ಗದ ಜನರಲ್ಲೂ ಸೋಂಕು ಹೆಚ್ಚಾಗಿರುವ ಅಂಶ ಕಂಡು ಬಂದಿದೆ ಎಂದಿದ್ದಾರೆ.
ಮೂರನೇ ಅಲೆಯ ಭವಿಷ್ಯವಾಣಿ ಹೇಳುವುದು ಅಸಾಧ್ಯ
ಈಗಿನ ಪರಿಸ್ಥಿತಿಯಲ್ಲಿ ದೇಶಕ್ಕೆ ದಾಳಿ ಇಡಲಿರುವ ಮೂರನೇ ಕೊರೋನಾ ಅಲೆಯ ಭವಿಷ್ಯವಾಣಿ ಹೇಳುವುದು ಕಷ್ಟ. ಆದರೆ ಭಾರತ ಹಾಗೂ ಇತರ ದೇಶಗಳಲ್ಲಿ ಕಂಡು ಬಂದ ಅಂಕಿ ಅಂಶಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಬರಲಿರುವ ಮೂರನೇ ಅಲೆ ಯುವಕರು ಹಾಗೂ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂದು ಹೇಳುವುದು ಅರ್ಥಹೀನ ಎಂದಿದ್ದಾರೆ.
ಹೀಗಿದ್ದರೂ ಡಾ. ಅರೋರಾ ಮಕ್ಕಳ ಚಿಕಿತ್ಸೆಗಾಗಿ ಕೊರೋನಾ ಕೇಂದ್ರಗಳಲ್ಲಿರುವ ಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಅಗತ್ಯ ಬಿದ್ದ ಸೌಕರ್ಯಗಳನ್ನು ವ್ಯವಸ್ಥೆ ಮಾಡುವ ವಿಚಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ನವಜಾತ ಶಿಶು ಹಾಗೂ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುವುದು ಅಗತ್ಯ. ಹತ್ತಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆತ್ತವರು ಅಥವಾ ಪೋಷಕರು ಕಾಳಜಿ ವಹಿಸುವ ಅಗತ್ಯವಿದೆ. ಇದೇ ರೀತಿ ಗರ್ಭಿಣಿ ಮಹಿಳೆಯರಿಗೆ ಒಂಭತ್ತು ತಿಂಗಳು ತುಂಬುವ ಮೊದಲೇ ಹೆರಿಗೆಯಾಗುಗ ಸಾಧ್ಯತೆಗಳಿವೆ. ಈ ವಿಚಾರವಾಗಿ ಆರೋಗ್ಯ ಮಾರ್ಗಸೂಚಿ ಮೊದಲೇ ತಯಾರಿಡಬೇಕು ಎಂದಿದ್ದಾರೆ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!
ದೇಶದಲ್ಲಿ ಹೆಚ್ಚಿಸಲಾಗುತ್ತಿದೆ ವೈದ್ಯಕೀಯ ಸವಲತ್ತು
ಇಂತಹ ಪ್ರತ್ಯೇಕ ಕೇರ್ ಸೆಂಟರ್‌ಗಳನ್ನು ಸ್ಥಾಪಿಸುವ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ದೇಶದಲ್ಲಿ ಈಗಾಗಲೇ ಕೊರೋನಾದಿಮದ ಸೋಂಕಿತ ಮಕ್ಕಳ ಆರೈಕೆ ನಡೆಯುತ್ತಿದೆ. ಹೀಗಾಗಿ ಹೆಚ್ಚಿ ಕೋವಿಡ್ ಸೆಂಟರ್‌ಗಳಲ್ಲಿ ಮಕ್ಕಳ ನಿಗಾ ವಹಿಸುವ ಸೌಕರ್ಯವಿದೆ. ಆದರೀಗ ಬಾಲ ಚಿಕಿತ್ಸಾ ಕೇಂದ್ರ ಹಾಗೂ ಕೊರೋನಾ ನಿಯಂತ್ರಣ ಸೇವೆಯಲ್ಲಿ ಸುಧಾರಣೆ ಅಗತ್ಯ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona