Covid Vaccine: ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Kannadaprabha News   | Asianet News
Published : Jan 18, 2022, 01:30 AM IST
Covid Vaccine: ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಸಾರಾಂಶ

ಯಾವುದೇ ವ್ಯಕ್ತಿಯ ಸಮ್ಮತಿ ಪಡೆಯದೇ ಬಲವಂತವಾಗಿ ಕೋವಿಡ್‌ ಲಸಿಕೆ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಸಿಕೆ ಪಡೆಯಲು ನಿರಾಕರಿಸುವವರಿಗೆ ಬಲವಂತವಾಗಿ ಲಸಿಕೆ ನೀಡುವುದು ಹಾಗೂ ಸರ್ಕಾರ ಸೌಲಭ್ಯ ನಿರಾಕರಿಸುವಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

ನವದೆಹಲಿ (ಜ.18): ಯಾವುದೇ ವ್ಯಕ್ತಿಯ ಸಮ್ಮತಿ ಪಡೆಯದೇ ಬಲವಂತವಾಗಿ ಕೋವಿಡ್‌ ಲಸಿಕೆ (Covid Vaccine) ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಸಿಕೆ ಪಡೆಯಲು ನಿರಾಕರಿಸುವವರಿಗೆ ಬಲವಂತವಾಗಿ ಲಸಿಕೆ ನೀಡುವುದು ಹಾಗೂ ಸರ್ಕಾರ ಸೌಲಭ್ಯ ನಿರಾಕರಿಸುವಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

‘ಕೋವಿಡ್‌ ಲಸಿಕಾಕರಣ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಲ್ಲಿ ವ್ಯಕ್ತಿಯ ಸಮ್ಮತಿ ಪಡೆಯದೆ ಬಲವಂತವಾಗಿ ಲಸಿಕೆ ನೀಡುವ ಕುರಿತು ಯಾವುದೇ ಪ್ರಸ್ತಾಪ ಇಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. ‘ಅಂಗವೈಕಲ್ಯ ಹೊಂದಿದವರಿಗೆ ಆದ್ಯತೆ ಮೇರೆಗೆ ಹಾಗೂ ಮನೆ ಬಾಗಿಲಿಗೆ ಕೊರೋನಾ ಲಸಿಕೆ ನೀಡಬೇಕು’ ಎಂದು ಎವಾರಾ ಫೌಂಡೇಷನ್‌ ಎಂಬ ಎನ್‌ಜಿಒ ಸುಪ್ರೀಂಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.

‘ಅಂಗವಿಕಲರಿಗೆ ಲಸಿಕಾಕರಣ ಪ್ರಮಾಣಪತ್ರ ಹಾಜರುಪಡಿಸುವುದರಿಂದ ವಿನಾಯಿತಿ ನೀಡಬೇಕು’ ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ‘ಯಾವುದೇ ಉದ್ದೇಶಕ್ಕಾಗಲಿ ಜತೆಯಲ್ಲಿ ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಒಯ್ಯಬೇಕು ಎಂಬ ಯಾವುದೇ ಸೂಚನೆಯನ್ನು ನೀಡಿಲ್ಲ’ ಎಂದು ತಿಳಿಸಿದೆ.

5 ವರ್ಷಗಳಿಂದ ಮಲಗಿದಲ್ಲಿಯೇ ಇದ್ದ, ಕೋವಿಶೀಲ್ಡ್‌ ಹಾಕಿಸಿಕೊಂಡ ಬಳಿಕ ಎದ್ದು ಓಡಾಡುವಂತಾದ...!

ಭಾರತದ ಲಸಿಕಾ ಅಭಿಯಾನಕ್ಕೆ 1 ವರ್ಷ: ಕೋವಿಡ್‌ ನಿಯಂತ್ರಣದ ನಿಟ್ಟಿನಲ್ಲಿ ಭಾರತದಲ್ಲಿ ಆರಂಭಿಸಲಾದ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಜ.16ರ ಭಾನುವಾರ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಒಂದು ವರ್ಷದಲ್ಲಿ 156 ಕೋಟಿ ಡೋಸ್‌ ಲಸಿಕೆ ವಿತರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ ಮೂಲಕ ಆರಂಭಗೊಂಡ ಅಭಿಯಾನ ಬಳಿಕ 65 ವರ್ಷ ಮೇಲ್ಪಟ್ಟವರು, ವಿವಿಧ ಆರೋಗ್ಯ ಸಮಸ್ಯೆಯಿಂದ ಮೇಲ್ಪಟ್ಟವರಿಗೆ ವಿಸ್ತರಿಸಲಾಯಿತು. ನಂತರ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡಿಕೆ ಆರಂಭವಾಯಿತು. ಇನ್ನು ಕಳೆದ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಜ.10ರಿಂದ ಮುಂಜಾಗ್ರತಾ ಲಸಿಕೆಯನ್ನು ನೀಡಲಾಗುತ್ತಿದೆ.

ಮಕ್ಕಳಿಗೆ ಶೇ. 100 ಲಸಿಕೆ ಪೂರ್ಣಗೊಳಿಸಿದ ಲಕ್ಷದ್ವೀಪ: ಕೋವಿಡ್-19 ಲಸಿಕೆಯ ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಮತ್ತೊಂದು ಮೈಲಿಗಲ್ಲು ದಾಖಲಿಸಿದೆ. ಲಕ್ಷದ್ವೀಪ ಆಡಳಿತವು 15 ರಿಂದ 18 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಪೂರ್ಣ ಶೇ. 100 ಕೋವಿಡ್-19 ಲಸಿಕೆಯನ್ನು ಹಾಕಿದೆ. ಆ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಎನ್ನುವ ಕೀರ್ತಿ ಲಕ್ಷ್ವದೀಪದ್ದಾಗಿದೆ. 

Covid19 ವ್ಯಾಕ್ಸಿನ್‌ ತೆಗೆದುಕೊಂಡಿಲ್ಲ, ಇದು ಮೆಡಿಕಲ್ ಮಾಫಿಯಾ: Agni Shridhar

ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ ಕವರತ್ತಿಯಲ್ಲಿ 2021 ರ ಜನವರಿ 3 ರಂದು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದರು. ಲಕ್ಷದ್ವೀಪದ ಎಲ್ಲಾ ಹತ್ತು ಜನವಸತಿ ದ್ವೀಪಗಳಲ್ಲಿ ಶಾಲೆಗಳಲ್ಲಿ ವಿವಿಧ ಜಾಗೃತಿ ಅಭಿಯಾನಗಳು ಮತ್ತು ವಿಶೇಷ ಅಭಿಯಾನಗಳ ಮೂಲಕ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ ಒಂದು ವಾರದೊಳಗೆ 3492 ಮಕ್ಕಳ ಗುರಿಯನ್ನು ಸಾಧಿಸಲಾಗಿದೆ ಎನ್ನುವುದು ಗಮನಾರ್ಹ ಅಂಶವಾಗಿದೆ. ಇದಕ್ಕೂ ಮುನ್ನ 18 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲೂ ಶೇ. 100 ರಷ್ಟು ಲಸಿಕೆ ಹಾಕಿದ ಮೊದಲ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಎನ್ನುವ ಹಿರಿಮೆಯನ್ನೂ ಲಕ್ಷದ್ವೀಪ ಸಂಪಾದಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..