ಇದು ಮಾನವ ನಿರ್ಮಿತ ದುರಂತ: 32 ಜನರ ಬಲಿ ಪಡೆದ ಗೇಮಿಂಗ್ ಸೆಂಟರ್ ವಿರುದ್ಧ ಸುಮೋಟೋ ಕೇಸ್

By Anusha Kb  |  First Published May 26, 2024, 3:14 PM IST

ಮಕ್ಕಳು ಸೇರಿದಂತೆ 32 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್‌ನ ಗೇಮಿಂಗ್ ಸೆಂಟರ್‌ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸುಮೋಟೋ(ಸ್ವಯಂ ಪ್ರೇರಿತ ಪ್ರಕರಣ) ದಾಖಲಿಸಿಕೊಂಡಿದ್ದು, ಇದೊಂದು ಮಾನವ ನಿರ್ಮಿತ ದುರಂತ ಎಂದು ಘೋಷಿಸಿದೆ. 


ಅಹ್ಮದಾಬಾದ್‌: ಮಕ್ಕಳು ಸೇರಿದಂತೆ 32 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್‌ನ ಗೇಮಿಂಗ್ ಸೆಂಟರ್‌ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸುಮೋಟೋ(ಸ್ವಯಂ ಪ್ರೇರಿತ ಪ್ರಕರಣ) ದಾಖಲಿಸಿಕೊಂಡಿದ್ದು, ಇದೊಂದು ಮಾನವ ನಿರ್ಮಿತ ದುರಂತ ಎಂದು ಘೋಷಿಸಿದೆ. 

ನ್ಯಾಯಾಧೀಶರಾದ ಬಿರೇನ್ ವೈಷ್ಣವ್ ಹಾಗೂ ದೇವನ್ ದೇಸಾಯಿ ಅವರಿದ್ದ ಗುಜರಾತ್ ಹೈಕೋರ್ಟ್‌ನ ವಿಶೇಷ ಬೆಂಚ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಥಮಿಕ ಹಂತದಲ್ಲಿ ಇದೊಂದು ಮಾನವ ನಿರ್ಮಿತ ದುರಂತ ಎಂದು ಕಂಡು ಬರುತ್ತಿದೆ ಎಂದು ಹೇಳಿದೆ. ಅಲ್ಲದೇ ಸಂಬಂಧಿಸಿದ ಇಲಾಖೆಗಳಿಂದ ಯಾವುದೇ ಅಗತ್ಯ ದಾಖಲೆಗಳನ್ನು ಪಡೆಯದೇ ಅಗತ್ಯ ಸೌಲಭ್ಯಗಳನ್ನು ನಿರ್ಮಿಸದೇ ಈ ಗೇಮಿಂಗ್ ಝೋನ್ ಅನ್ನು ನಿರ್ಮಿಸಲಾಗಿದೆ ಎಂಬುದನ್ನು ಬಿಟ್ಟ ಗಮನಿಸಿತ್ತು.

Latest Videos

undefined

ಕರಾಳ ವೀಕೆಂಡ್: ಸಾಲು ಸಾಲು ಅನಾಹುತ, ಅಪಘಾತ : ಬಸ್‌ಗೆ ಟ್ರಕ್ ಡಿಕ್ಕಿ : 11 ಯಾತ್ರಾರ್ಥಿಗಳ ಸಾವು

ಅಲ್ಲದೇ ಈ ಹೈಕೋರ್ಟ್ ಪೀಠವೂ ಸೋಮವಾರಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದ್ದು, ಅಹ್ಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್‌ನ ಮುನ್ಸಿಪಲ್ ಕಾರ್ಪೋರೇಷನ್ ಪರ ವಕೀಲರನ್ನು ಉಪಸ್ಥಿತರಿರುವಂತೆ ಹೇಳಿದೆ. ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಇಂತಹ ಗೇಮಿಂಗ್ ಸಂಸ್ಥೆಗಳನ್ನು ಯಾವ ಕಾನೂನು ನಿಯಮಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ ಅಥವಾ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿಯೂ ಇಂತಹ ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆಯೇ ಎಂಬ ಮಾಹಿತಿಯನ್ನು ಒದಗಿಸಲು ಅವರಿಗೆ ಸೂಚಿಸಲಾಗಿದೆ.

ಈ ದುರಂತದಲ್ಲಿ ಮೃತರಾದ ಮಕ್ಕಳ ಸಂಖ್ಯೆಯ ಬಗ್ಗೆ ಗೊಂದಲವಿದೆ, ಒಂದೊಂದು ಮಾಧ್ಯಮಗಳು ಒಂದು ಲೆಕ್ಕ ನೀಡುತ್ತಿವೆ. ಮುಂಜಾನೆ 25 ಮಕ್ಕಳು ಈ ದುರಂತದಲ್ಲಿ ಮಡಿದಿದ್ದಾರೆ ಎಂದು ವರದಿ ಆಗಿತ್ತು. ಆದಾದ ನಂತ 4 ಮಕ್ಕಳು ಮಡಿದಿದ್ದಾರೆ ಎಂದು ಒಂದು ಮಾಧ್ಯಮ ವರದಿ ಮಾಡಿದ್ದರೆ ಇನ್ನೊಂದು 9 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಮಾಡಿದೆ. ಗೇಮಿಂಗ್ ಸೆಂಟರ್ ಇದಾಗಿದ್ದರಿಂದ ಮಕ್ಕಳು ಸೇರಿದಂತೆ 32 ಜನ ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಇತ್ತೀಚಿನ ವರದಿಯಿಂದ ತಿಳಿದು ಬಂದಿದೆ.

ಒಂದೇ ಒಂದು ಎಕ್ಸಿಟ್ ಡೋರ್‌: ಅನುಮತಿಯೂ ಇಲ್ಲ, 

ಈ ಮಧ್ಯೆ ದುರಂತ ನಡೆದ ಬಳಿಕ ತನಿಖೆಗಿಳಿದ ಪೊಲೀಸರಿಗೆ ಈ ಗೇಮಿಂಗ್ ಸೆಂಟರ್ ನಡೆಸುವುದಕ್ಕೆ ಮಾಲೀಕ ಅಗ್ನಿ ಶಾಮಕ ಸಿಬ್ಬಂದಿ ಸೇರಿದಂತೆ ನಗರಾಡಳಿತದಿಂದ ಯಾವುದೇ ಅನುಮತಿ ಹಾಗೂ ಎನ್‌ಒಸಿ ಸರ್ಟಿಫಿಕೇಟ್‌ಗಳನ್ನು ಕೂಡ ಪಡೆದಿಲ್ಲ ಎಂದು ವರದಿ ಆಗಿದೆ. ಇದರ ಜೊತೆಗೆ ಒಳಗೆ ಹೋದವರು ವಾಪಸ್ ಹೊರಗೆ ಬರುವುದಕ್ಕೆ  ಒಂದೇ ಒಂದು ಎಕ್ಸಿಟ್ ಡೋರ್ ಇದ್ದಿದ್ದರಿಂದ  ಸಾವಿನ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಾಯ್ತು ಎಂದು ತಿಳಿದು ಬಂದಿದೆ. 

25 ಮಕ್ಕಳ ಬಲಿ ಪಡೆದ ಗುಜರಾತ್ ಗೇಮಿಂಗ್ ಸೆಂಟರ್ ಅಗ್ನಿ ಅನಾಹುತ: ಮೃತರ ಸಂಖ್ಯೆ 35ಕ್ಕೆ ಏರಿಕೆ

ನಿನ್ನೆ ಸಂಜೆ  ರಾಜ್‌ಕೋಟ್‌ನಲ್ಲಿರುವ ಮಕ್ಕಳು ಆಟವಾಡುವ ಗೇಮಿಂಗ್ ಸೆಂಟರ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಗೇಮಿಂಗ್‌ ಸೆಂಟರ್‌ಗೆ ಪ್ರವೇಶಿಸುವ ಶುಲ್ಕವನ್ನು ಕೇವಲ 99 ರೂಪಾಯಿ ಆಫರ್ ಫ್ರೈಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮಕ್ಕಳನ್ನು ಕರೆದುಕೊಂಡು ಈ ಗೇಮಿಂಗ್ ಸೆಂಟರ್‌ನಲ್ಲಿ ಕಿಕ್ಕಿರಿದು ತುಂಬಿದ್ದರು.   ಈ ಗೇಮಿಂಗ್ ಸೆಂಟರ್‌ನಲ್ಲಿ ಗೋ ಕಾರ್ಟ್ ಗೇಮ್ ವ್ಯವಸ್ಥೆ ಸಹ ಮಾಡಲಾಗಿತ್ತು. ಹೀಗಾಗಿ ಗೇಮಿಂಗ್‌ಗಾಗಿ  1200 ರಿಂದ 1500 ಲೀಟರ್ ಡಿಸೇಲ್ 1000 ಲೀಟರ್ ಪೆಟ್ರೋಲ್‌ನ್ನು ಕೂಡ  ಶೇಖರಿಸಿಡಲಾಗಿತ್ತು. ದುರಾದೃಷ್ಟವಶಾತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಡಿಸೇಲ್ ಪೆಟ್ರೋಲ್ ಸಂಗ್ರಹಿಸಿದ ಸ್ಥಳಕ್ಕೂ ವ್ಯಾಪಿಸಿದ್ದು, ದೊಡ್ಡ ಮಟ್ಟದಲ್ಲಿ ಬೆಂಕಿ ಅನಾಹುತಕ್ಕೆ ಕಾರಣವಾಯ್ತು. 

click me!