ತಮಿಳುನಾಡು ಒಪ್ಪಿಗೆ ಇಲ್ಲದೆ ಮೇಕೆದಾಟು ಡ್ಯಾಂ ಇಲ್ಲ?

By Kannadaprabha News  |  First Published Jun 23, 2022, 11:04 AM IST

*  ಜಲಶಕ್ತಿ ಸಚಿವರಿಂದ ಭರವಸೆ ಸಿಕ್ಕಿದೆ: ತಮಿಳುನಾಡು
*  ಸಚಿವರ ಭೇಟಿ ಬಳಿಕ ತ.ನಾಡು ಮಂತ್ರಿ ಹೇಳಿಕೆ
*  ಮಂಡಳಿಗೆ ಮೇಕೆದಾಟು ಬಗ್ಗೆ ಚರ್ಚೆಗೆ ಅಧಿಕಾರವಿಲ್ಲ 
 


ಚೆನ್ನೈ(ಜೂ.23):  ತಮಿಳುನಾಡಿನ ಒಪ್ಪಿಗೆ ಇಲ್ಲದೇ ಕರ್ನಾಟಕ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಆಗದು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ತಮಗೆ ತಿಳಿಸಿದ್ದಾರೆ ಎಂದು ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈಮುರುಗನ್‌ ಹೇಳಿದ್ದಾರೆ.

ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ನಿರ್ಮಾಣ ಮಾಡಲು ಚಿಂತಿಸಿರುವ ಅಣೆಕಟ್ಟು ಯೋಜನೆಗೆ ತಮಿಳುನಾಡಿನ ಹಿತದೃಷ್ಟಿಯಿಂದ ಅವಕಾಶ ನೀಡಬಾರದು ಎಂದು ಕೋರಿ ತಮಿಳುನಾಡಿನ ಶಾಸಕರ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ಬುಧವಾರ ಮನವಿ ಮಾಡಿತು. 

Tap to resize

Latest Videos

ಒಕ್ಕೂಟ ವ್ಯವಸ್ಥೆ ಮೇಲೆ ಸ್ಟಾಲಿನ್‌ ದಬ್ಬಾಳಿಕೆ: ಸಿಎಂ ಬೊಮ್ಮಾಯಿ ಆಕ್ರೋಶ

ಅಲ್ಲದೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮೇಕೆದಾಟು ಅಣೆಕಟ್ಟು ಕುರಿತಾಗಿ ಚರ್ಚೆ ನಡೆಸದಂತೆ ಶೆಖಾವತ್‌ ಅವರು ಸೂಚನೆ ನೀಡಬೇಕು. ಮಂಡಳಿಗೆ ಮೇಕೆದಾಟು ಬಗ್ಗೆ ಚರ್ಚೆಗೆ ಅಧಿಕಾರವಿಲ್ಲ ಎಂದೂ ನಿಯೋಗ ಕೋರಿತು. ಆಗ ಶೆಖಾವತ್‌ ಈ ಮೇಲಿನಂತೆ ಉತ್ತರಿಸಿದರು ಎಮದು ದೊರೈಮುರುಗನ್‌ ಹೇಳಿದ್ದಾರೆ.
 

click me!