ಹೊಸ ದಾಳ ಉರುಳಿಸಿದ ಠಾಕ್ರೆ-ಪವಾರ್, ಬಂಡಾಯ ನಾಯಕ ಶಿಂಧೆಗೆ ಸಿಎಂ ಹುದ್ದೆ ಆಫರ್!

By Suvarna News  |  First Published Jun 22, 2022, 8:33 PM IST
  • ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಸಂಚಲನ
  • ಸರ್ಕಾರ ಉಳಿಸಿಕೊಳ್ಳಲು ಅಂತಿಮ ಹಂತದ ಕಸರತ್ತು
  • ಬಂಡಾಯ ಶಾಸಕರನ ನಾಯಕ ಶಿಂಧೆಗೆ ಸಿಎಂ ಹುದ್ದೆ ಆಫರ್

ಮುಂಬೈ(ಜೂ.22): ಮಹಾರಾಷ್ಟ್ರದಲ್ಲಿ ಕಳೆದೆರಡು ದಿನದಿಂದ ರಾಜಕೀಯ ಸಂಚಲನವೇ ಸೃಷ್ಟಿಯಾಗಿದೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದಾರೆ. ಇದರಿಂದ ಸರ್ಕಾರವೇ ಪತನದ ಹಾದಿಯಲ್ಲಿದೆ. ತುರ್ತು ಶಾಸಕಾಂಗ ಸಭೆ ನಡೆಸಿದ ಸಿಎಂ ಉದ್ಧವ್ ಠಾಕ್ರೆಗೆ ಮೈತ್ರಿ ಪಕ್ಷ ಎನ್‌ಸಿಪಿ ನಾಯಕ ಶರದ್ ಪವಾರ್ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಬಂಡಾಯ ಎದ್ದಿರುವ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ನೀಡುವ ಆಫರ್ ನೀಡಿದ್ದಾರೆ. 

ಅಘಾಡಿ ಮೈತ್ರಿ ಸರ್ಕಾರ ಶಾಸಕಾಂಗ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಸಲಹೆ ಪಡೆದಿದ್ದಾರೆ. ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ ಬಂಡಾಯ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ. ಇಷ್ಟೇ ಅಲ್ಲ ಶಿವಸೇನೆಯ ನಾಯಕ ಸಿಎಂ ಆದರೆ ಸಂತಸ ಎಂದು ಹೇಳುವ ಮೂಲಕ ರಾಜೀನಾಮೆ ಸುಳಿವು ನೀಡಿದ್ದರು.

Tap to resize

Latest Videos

ಸಿಎಂ ಉದ್ಧವ್ ಠಾಕ್ರೆಗೆ ಮತ್ತೊಂದು ಶಾಕ್, ಹೈಕೋರ್ಟ್ ಮೆಟ್ಟಿಲೇರಿದ ಅಕ್ರಮ ಆಸ್ತಿ ಪ್ರಕರಣ!

ಉದ್ಧವ್ ಠಾಕ್ರೆ ಭಾಷಣದ ಬೆನ್ನಲ್ಲೇ ಶರದ್ ಪವಾರ್ ದಿಢೀರ್ ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಬಂಡಾಯ ಶಮನಗೊಳಿಸಿ ಎಲ್ಲಾ ಶಾಸಕರನ್ನು ಪಕ್ಷಕ್ಕೆ ಕರೆರುವುದು ಅತೀ ದೊಡ್ಡ ಸವಾಲು. ಇತ್ತ ಬಂಡಾಯ ಶಾಸಕರು ಬಿಜೆಪಿ ಜೊತೆ ಕೈಜೋಡಿಸಿದರೆ ಮೈತ್ರಿ ಸರ್ಕಾರದ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಲಿದೆ. ಹೀಗಾಗಿ ಶರದ್ ಪವಾರ್, ಸಿಎಂ ಹುದ್ದೆಯನ್ನೇ ಏಕನಾಥ್ ಶಿಂಧೆ ನೀಡಲು ಸೂಚನೆ ನೀಡದ್ದಾರೆ. ಪವಾರ್ ಸೂಚನೆಯಂತೆ ಇದೀಗ ಉದ್ಧವ್ ಠಾಕ್ರೆ ಶಿಂಧೆಗೆ ಸಿಎಂ ಹುದ್ದೆ ಆಫರ್ ನೀಡಿದ್ದಾರೆ.

ಬಂಡಾಯ ಶಾಸಕರು ಗುಜರಾತ್‌ನಿಂದ ಅಸ್ಸಾಂಗೆ ತೆರಳಿದ್ದಾರೆ. ಇದೀಗ ಬಂಡಾಯ ಪಡೆಗೆ ಸಿಎಂ ಸ್ಥಾನದ ಆಫರ್ ಸಿಕ್ಕಿರುವ ಕಾರಣ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಕಾರಣ ಬಿಜೆಪಿ ಜೊತೆ ಕೈಜೋಡಿಸಿದರೆ ಡಿಸಿಎಂ ಹುದ್ದೆ ಗರಿಷ್ಠವಾಗಲಿದೆ. ಸಿಎಂ ಹುದ್ದೆಯನ್ನು ಬಿಜೆಪಿ ಇರಿಸಿಕೊಳ್ಳಲಿದೆ. ಹೀಗಾಗಿ ಸದ್ಯ ಶರದ್ ಪವಾರ್ ಉರುಳಿಸಿರುವ ದಾಳ ಹೊಸ ಸಂಚಲನಕ್ಕೆ ನಾಂದಿ ಹಾಡಿದೆ.

ಮಹಾರಾಷ್ಟ್ರದಲ್ಲಿ ಸಂಭವಿಸಿದ ದಿಢೀರ್‌ ರಾಜಕೀಯ ಬೆಳವಣಿಗೆಯ ಪ್ರಮುಖ ಸೂತ್ರಧಾರಿ ಏಕನಾಥ್‌ ಶಿಂಧೆ, ಹೀಗೆ ಬಂಡೇಳಲು ಕಾರಣವಾಗಿದ್ದು ದಿಢೀರ್‌ ಬೆಳವಣಿಗೆಯಲ್ಲ. ಬದಲಾಗಿ, ರಾಜಕೀಯದಲ್ಲಿ ಅವರು ಹೊಂದಿರುವ ಮಹತ್ವಕಾಂಕ್ಷೆ, ತಾವು ಹೊಂದಿದ್ದ ಖಾತೆ ನಿರ್ವಹಣೆಗೆ ಶಿವಸೇನಾ ನಾಯಕರ ಅಡ್ಡಿ, ಪಕ್ಷದಲ್ಲಿ ಯುವ ನಾಯಕರಿಗೆ ಹೆಚ್ಚಿನ ಮಣೆ ಹಾಕಿದ್ದೇ ಕಾರಣ ಎನ್ನಲಾಗುತ್ತಿದೆ.

ರಾಜೀನಾಮೆ ಪತ್ರ ರೆಡಿ ಇದೆ, ಶಾಸಕರು ಬಯಸಿದರೆ ಸ್ಥಾನ ತ್ಯಜಿಸಲು ಸಿದ್ಧ, ಉದ್ಧವ್ ಠಾಕ್ರೆ ಭಾಷಣ!

ಸಿಎಂ ಹುದ್ದೆ ಮೇಲೆ ಕಣ್ಣು:
2019ರಲ್ಲಿ ಮಹಾ ಅಘಾಡಿ ಸರ್ಕಾರ ರಚನೆ ಖಚಿತವಾಗುತ್ತಲೇ ಸಿಎಂ ಹುದ್ದೆಯಲ್ಲಿ ಮೊದಲ ಹೆಸರು ಕೇಳಿಬಂದಿದ್ದು ಏಕನಾಥ ಶಿಂಧೆ ಅವರದ್ದೇ. ಆದರೆ ಸಂಜಯ ರಾವತ್‌ ಮತ್ತು ಸುಭಾಷ್‌ ದೇಸಾಯಿ ಅವರ ಯತ್ನದ ಫಲವಾಗಿ ಉದ್ಧವ್‌ ಠಾಕ್ರೆಗೆ ಸಿಎಂ ಪಟ್ಟಸಿಕ್ಕಿತ್ತು. ಆಗಿನಿಂದಲೂ ಶಿಂಧೆ ಸ್ವಲ್ಪ ಮುನಿಸಿಕೊಂಡೇ ಇದ್ದರು.

 ಅಘಾಡಿ ಮೈತ್ರಿಕೂಟದ ಮೂರೂ ಪಕ್ಷಗಳ ನಾಯಕರು  ಸತತ ಸಭೆ ನಡೆಸುತ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ.

click me!