ಮದ್ಯ ನಿಷೇಧಿತ ಬಿಹಾರದಲ್ಲಿ ಪೊಲೀಸ್ ಗಾಡಿಗೂ ಎಣ್ಣೆ ಇಲ್ವಾ?: ಕುಡುಕರಿಂದ ಗಾಡಿ ತಳ್ಳಿಸಿದ ಪೊಲೀಸರು

By Anusha KbFirst Published Feb 7, 2024, 12:26 PM IST
Highlights

ನಾಲ್ವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನೊಂದು ನಡುರಸ್ತೆಯಲ್ಲೇ ಇಂಧನ ಖಾಲಿಯಾಗಿ ನಿಂತು ಹೋಗಿದೆ. ಈ ವೇಳೆ ಬೇರೆ ಸಹಾಯಕ್ಕಾಗಿ ಕಾಯುವ ಬದಲು  ಪೊಲೀಸ್ ವ್ಯಾನ್‌ನಲ್ಲಿದ್ದ ಆರೋಪಿಗಳೇ ಪೊಲೀಸ್ ಗಾಡಿಯನ್ನು ಹಿಂದಿನಿಂದ ತಳ್ಳುವ ಮೂಲಕ ಪೊಲೀಸರಿಗೆ ಸಹಾಯ ಮಾಡಿದ್ದಾರೆ.

ಪಾಟ್ನಾ: ನಾಲ್ವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನೊಂದು ನಡುರಸ್ತೆಯಲ್ಲೇ ಇಂಧನ ಖಾಲಿಯಾಗಿ ನಿಂತು ಹೋಗಿದೆ. ಈ ವೇಳೆ ಬೇರೆ ಸಹಾಯಕ್ಕಾಗಿ ಕಾಯುವ ಬದಲು  ಪೊಲೀಸ್ ವ್ಯಾನ್‌ನಲ್ಲಿದ್ದ ಆರೋಪಿಗಳೇ ಪೊಲೀಸ್ ಗಾಡಿಯನ್ನು ಹಿಂದಿನಿಂದ ತಳ್ಳುವ ಮೂಲಕ ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಆರೋಪಿಗಳು ಪೊಲೀಸ್ ಗಾಡಿ ತಳ್ಳುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದಲ್ಲಿ ಈ ಘಟನೆ ನಡೆದಿದೆ.

ಬಿಹಾರ ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕಳ್ಳಭಟ್ಟಿ ದಂಧೆ ವ್ಯಾಪಕವಾಗಿದೆ. ಹೀಗೆ ಕಳ್ಳಭಟ್ಟಿ ಸೇವಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ಕಳುಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಹಾಯಕ್ಕಾಗಿ ಕಾಯುವ ಬದಲು ಈ ಆರೋಪಿಗಳು ಪೊಲೀಸ್ ವಾಹನವನ್ನು ತಳ್ಳಿ ಪಕ್ಕಕ್ಕೆ ಸರಿಸಿದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಆಗದೇ ಸುಗಮ ಸಂಚಾರಕ್ಕೆ ನೆರವಾಗಿದ್ದಾರೆ. 

ಬಿಹಾರದ ಈ ರೈತನಿಗೆ 7 ಹೆಣ್ಣು ಮಕ್ಕಳು : ಎಲ್ಲರೂ ಪೊಲೀಸ್ ಅಧಿಕಾರಿಗಳು

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಆರೋಪಿಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋರ್ಟ್ ತೀರ್ಪು ನೀಡುವ ಮೊದಲು ಇವರ ಈ ಮಾನವೀಯ ಕಾರ್ಯವನ್ನು ಗಮನಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಬಿಹಾರದಲ್ಲಿ ಸಾಮಾನ್ಯವಾಗಿ ನಡೆಯುವಂತಹ ಘಟನೆ ಎಂದಿದ್ದಾರೆ. ಬಿಹಾರದ್ದು ಎಂಬ ಹೆಸರು ಹೇಳದೇಯೇ ಈ ವೀಡಿಯೋ ಬಿಹಾರದ್ದು ಎನ್ನಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪೊಲೀಸ್ ಗಾಡಿಯನ್ನು ತಳ್ಳಿ ಸಹಾಯ ಮಾಡಿದ್ದಕ್ಕೆ ಅವರ ಶಿಕ್ಷೆಯ ಪ್ರಮಾಣದಲ್ಲಿ ಏನಾದರು ಕಡಿಮೆ ಇದೆಯೇ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಮದಿರೆಯ ಮತ್ತು... ನವ ವಧುವಿನ ಬೆಡ್‌ರೂಮ್‌ಗೆ ಪೊಲೀಸ್‌ ದಾಳಿ ... ತಲೆ ತಿರುಗಿ ಬಿದ್ದ ಅತ್ತೆ

Bihar: A Police van ran out of fuel in the middle of the road, and it was pushed by the inmates going to court for their hearing. pic.twitter.com/zPqdFbbc3T

— Jist (@jist_news)

 

click me!