
ನವದೆಹಲಿ(ಜು.21): ಕೊರೋನಾ ಸೋಂಕಿನ ಎರಡನೇ ಅಲೆಯ ಉತ್ತುಂಗದಲ್ಲಿ, ದೇಶಾದ್ಯಂತ ಆಮ್ಲಜನಕದ ಕೊರತೆಗೆ ವಿಚಾರದಲ್ಲಿ ವಿವಿಧ ರಾಜ್ಯಗಳು ಕೇಂದ್ರ ಸರ್ಕಾರವನ್ನು ಗುರಿಯಾಗಿಸುವಲ್ಲಿ ಯಾವುದೇ ಅವಕಾಶ ಬಿಟ್ಟಿಲ್ಲ. ಆದರೀಗ ಈ ಆಮ್ಲಜನಕ ಕೊರತೆ ವಿಚಾರ ಹೊಸ ರಾಜಕೀಯ ತಿರುವು ಪಡೆದುಕೊಂಡಿದೆ.
ಹೌದು ಕಾಂಗ್ರೆಸ್ ಸಂಸದ ವೇಣುಗೋಪಾಲ್ ಆಮ್ಲಜನಕದ ಕೊರತೆಯಿಂದ ಸಂಭವಿಸಿದ ಸಾವಿನ ಅಂಕಿಅಂಶಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಆರೋಗ್ಯ ರಾಜ್ಯ ಸಚಿವ ಡಾ.ಭಾರ್ತಿ ಪ್ರವೀಣ್ ಕುಮಾರ್ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಹೀಗಿದ್ದರೂ, ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಎಂದೂ ತಿಳಿಸಿದ್ದಾರೆ. ಸಾವಿನ ಅಂಕಿ ಅಂಶಗಳನ್ನು ಖುದ್ದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಸಚಿವಾಲಯಕ್ಕೆ ನಿಯಮಿತವಾಗಿ ನೀಡುತ್ತವೆ. ಇದರ ಅನ್ವಯ ದೇಶದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಒಂದೇ ಒಂದು ಸಾವು ಸಂಭವಿಸಿಲ್ಲ ಎಂದಿದ್ದಾರೆ.
ರಾಹುಲ್ ಹಾಗೂ ಕೇಜ್ರೀವಾಲ್ ಸುಳ್ಳುಗಾರರು
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರಾಹುಲ್ ಗಾಂಧಿ ದ್ವಂದ್ವ ಮನೋಭಾವ ಹೊಂದಿದ್ದಾರೆ. ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಹೈಕೋರ್ಟ್‌ನಲ್ಲಿ ಒಂದು ರೀತಿ ಮಾತನಾಡಿದರೆ, ಟಿವಿ-ಸೋಷಿಯಲ್ ಮೀಡಿಯಾದಲ್ಲಿ ಬೇರೆಯೇ ಮಾತನಾಡುತ್ತಾರೆ. ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಯಾವುದೇ ರಾಜ್ಯ / ಕೇಂದ್ರ ಪ್ರದೇಶವು ಇಂತಹ ಸಾವಿನ ಬಗ್ಗೆ ಮಾಹಿತಿ ಕಳುಹಿಸಿಲ್ಲ ಎಂದು ಕೇಂದ್ರ ಹೇಳುತ್ತಿದೆ. ಇದಕ್ಕೆ ಯಾವುದೇ ಅಂಕಿ ಅಂಶಗಳೂ ದಾಖಲೆಯಾಗಿ ಸಿಕ್ಕಿಲ್ಲ. ಇದರಿಂದ ಆಮ್ಲಕನಕ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಈ ಡೇಟಾ ಸೆಂಟರ್ ಕೇಂದ್ರಗಳು ಮಾಡಿದ್ದಲ್ಲ, ರಾಜ್ಯಗಳೇ ಕಳುಹಿಸಿವೆ ಎಂದೂ ಹೇಳಿದ್ದಾರೆ.
ದೆಹಲಿ ಸರ್ಕಾರಕ್ಕೆ ಬಿಸಿ
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಕ್ಲಾಸ್ ತೆಗೆದುಕೊಂಡ ಸಂಬಿತ್ ಪಾತ್ರಾ, ಆಮ್ಲಜನಕದ ಕೊರತೆಯಿಂದಾಗಿ ಒಬ್ಬ ರೋಗಿ ಸಾವನ್ನಪ್ಪಿದ್ದಾನೆ ಎಂದು ನಿಮ್ಮ ಸರ್ಕಾರವು ಕೇಂದ್ರಕ್ಕೆ ಕೊಟ್ಟ ದಾಖಲೆಯಲ್ಲಿ ಲಿಖಿತವಾಗಿ ಹೇಳಿದ್ದೀರಾ? ಇದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ವಿಷಯ ನಾವು ಕೇವಲ ರಾಜ್ಯ ಕಳುಹಿಸಿದ ಡೇಟಾವನ್ನು ಸಂಗ್ರಹಿಸುತ್ತೇವೆ. ರಾಜ್ಯಗಳು / ಯುಟಿಗಳು ತಮ್ಮ ಸಾವಿನ ಅಂಕಿಅಂಶಗಳನ್ನು ವರದಿ ಮಾಡುವ ಆಧಾರದ ಮೇಲೆ ನಾವು ಮಾರ್ಗಸೂಚಿಯನ್ನು ಹೊರಡಿಸಿದ್ದೇವೆ ಕೇಂದ್ರ ಹೇಳಿದೆ ಎಡಂದೂ ತಿಳಿಸಿದ್ದಾರೆ.
ಸುಳ್ಳು ಹೇಳಿದ್ದಾರೆ ಎಂದ ಕಮಲ್‌ನಾಥ್
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಈ ಬಗ್ಗೆ ಮಾತನಾಡುತ್ತಾ ದೇಶದಲ್ಲಿ ಆಮ್ಲಜನಕದ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಕೇಂದ್ರ ಹೇಳಿದೆ, ಇದು ಅತೀ ದೊಡ್ಡ ಸುಳ್ಳು. ಮಧ್ಯಪ್ರದೇಶದಲ್ಲಿ ಆಮ್ಲಜನಕದಿಂದ ಎಷ್ಟು ಸಾವುಗಳು ಸಂಭವಿಸಿವೆ. ಒಂದೆಡೆ ರಾಜ್ಯಗಳಿಗೆ ಕೊರೋನಾ ಡೇಟಾ ಕಳುಹಿಡಬೇಡಿ ಎನ್ನುತ್ತೀರಿ, ಅತ್ತ ರಾಜ್ಯಸಭೆಯಲ್ಲಿ ನಾವು ರಾಜ್ಯಗಳಿಂದ ಮಾತ್ರ ಡೇಟಾವನ್ನು ಸಂಗ್ರಹಿಸುತ್ತೇವೆ ಎಂದು ಹೇಳಲಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ದೆಹಲಿಯ ವಾದ
ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾತನಾಡುತ್ತಾ ದೆಹಲಿಯಲ್ಲಿ ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸಿವೆ. ಆಮ್ಲಜನಕದ ಕೊರತೆಯಿಂದಾಗಿ ಸಾವಿಗೆ 5 ಲಕ್ಷ ಪರಿಹಾರ ನೀಡಲು ನಾವು ಸಮಿತಿಯನ್ನು ರಚಿಸಿದ್ದೆವು, ಆದರೆ ಲೆಫ್ಟಿನೆಂಟ್ ಗವರ್ನರ್ ಇದನ್ನು ವಿಸರ್ಜಿಸಿದರು ಎಂದಿದ್ದಾರೆ.
ಮನೀಶ್ ಸಿಸೋದಿಯಾ ಈ ಪ್ರಶ್ನೆಗೆ ಖಡಕ್ ಉತ್ತರ
ಕೇಂದ್ರ ತನ್ನ ತಪ್ಪನ್ನು ಮರೆಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಿಡಿ ಕಾರಿದ್ದಾರೆ. ಅಲ್ಲದೇ ಕೇಂದ್ರದ ನೀತಿಗಳಿಂದಾಗಿ ಈ ಅನಾಹುತ ಸಂಭವಿಸಿದೆ ಎಂದೂ ದೂರಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅನೇಕ ಪರ ವಿರೋಧಗಳು ವ್ಯಕ್ತವಾಗಿವೆ. ಹೀಗಿರುವಾಗ ಬಳಕೆದಾರನೊಬ್ಬ ಉತ್ತರಿಸುತ್ತಾ ದೆಹಲಿಯ ಅನೇಕ ಆಸ್ಪತ್ರೆಗಳು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿವೆ ಮತ್ತು ಎಎಪಿ ಸರ್ಕಾರವು ಏನನ್ನೂ ಮಾಡಲಾಗದೇ ಸಂಪೂರ್ಣವಾಗಿ ವಿಫಲವಾಗಿದೆ. ಪಿಎಂ ಮೋದಿ ದೇಶ ಮತ್ತು ವಿದೇಶಗಳ ಜೊತೆ ಮಾತನಾಡಿ ಆಮ್ಲಜನಕ ವ್ಯವಸ್ಥೆ ಮಾಡಬೇಕಾಯ್ತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ