ಮಗಳಿಗೆ ಅಪ್ಪನ ಭರ್ಜರಿ ಉಡುಗೊರೆ: 1,000 ಕೆಜಿ ಮೀನು, 10 ಕುರಿ, 250 ಕೆಜಿ ಸಿಹಿ!

By Suvarna News  |  First Published Jul 21, 2021, 11:47 AM IST

* ಆಷಾಢಕ್ಕೆ ಮಗಳಿಗೆ ಭರ್ಜರಿ ಉಡುಗೊರೆ ಕೊಟ್ಟಅಪ್ಪ

* 1,000 ಕೆಜಿ ಮೀನು, 250 ಕೆಜಿ ಸಿಹಿ, 10 ಕುರಿ, 250 ಬಾಕ್ಸ್‌ ಉಪ್ಪಿನ ಕಾಯಿ


ಹೈದ್ರಾಬಾದ್‌(ಜು.21): ಹೊಸದಾಗಿ ಮದುವೆಯಾಗಿ ಮೊದಲ ಆಷಾಢ ಮಾಸ ಆಚರಿಸುತ್ತಿರುವ ಮಗಳಿಗೆ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಭರ್ಜರಿ ಉಡುಗೊರೆ ಕಳುಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಾಜಮಂಡ್ರಿಯ ಪ್ರಮುಖ ಉದ್ಯಮಿ ಬಲರಾಮ ಕೃಷ್ಣ ತಮ್ಮ ಮಗಳು ಪ್ರತ್ಯೂಷಾಳನ್ನು ಇತ್ತೀಚೆಗೆ ಪುದುಚೇರಿ ಯಾನಮ್‌ನಲ್ಲಿರುವ ಪವನ್‌ ಕುಮಾರ್‌ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದರು.

Tap to resize

Latest Videos

ತೆಲುಗಿನ ನವ ವಧು-ವರರಿಗೆ ಆಷಾಡ ಮಾಸದಲ್ಲಿ ವಧುವಿನ ಮನೆಯವರು ಉಡುಗೊರೆ ನೀಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಬಲರಾಮ ಕೃಷ್ಣ, ಯಾನಮ್‌ನಲ್ಲಿ ತಮ್ಮ ಮಗಳು- ಅಳಿಯನ ಮನೆಗೆ ಉಡುಗೊರೆಯಾಗಿ 1000 ಕೆಜಿ ಮೀನು, 1000 ಕೆಜಿ ತರಕಾರಿ, 250 ಕೆಜಿ ಸೀಗಡಿ ಮೀನು, 250 ಕೆಜಿ ದಿನಸಿ ಸಾಮಾನು, 250 ಡಬ್ಬಿ ಉಪ್ಪಿನಕಾಯಿ, 250 ಕೆಜಿ ಸಿಹಿ ತಿನಿಸು, 50 ಕೆಜಿ ಕೋಳಿ ಹಾಗೂ 10 ಆಡುಗಳನ್ನು ಕಳುಹಿಸಿದ್ದಾರೆ.

click me!