ಇದೇ ಆಗಸ್ಟ್ ಒಳಗಾಗಿ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು| ಭಾರತದಲ್ಲಿ ಕೊರೋನಾ ಲಸಿಕೆ 2021ರಲ್ಲಿ ಮಾತ್ರ ಲಭ್ಯ ಎಂದ ಕೆಂದ್ರ| . ‘ಕೋವಿಡ್-19 ಬಗ್ಗೆ ಕೇಂದ್ರದ ಸಿದ್ಧತೆ’ ವಿಚಾರವಾಗಿ ನಡೆದ ಸಭೆ
ನವದೆಹಲಿ(ಜು.11): ಇದೇ ಆಗಸ್ಟ್ ಒಳಗಾಗಿ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಮಾರಕ ಕೊರೋನಾ ವಿರುದ್ಧದ ಲಸಿಕೆಯು ಮುಂದಿನ ವರ್ಷದ ಆರಂಭದಲ್ಲಿ ಸಿದ್ಧವಾಗಬಹುದು ಎಂದು ಸಂಸದೀಯ ಸಮಿತಿಗೆ ಶುಕ್ರವಾರ ಮಾಹಿತಿ ನೀಡಲಾಗಿದೆ.
ಆ.15ರೊಳಗೆ ಲಸಿಕೆ ಅಸಾಧ್ಯ: ಬೆಂಗಳೂರು ವಿಜ್ಞಾನ ಸಂಸ್ಥೆ!
‘ಕೋವಿಡ್-19 ಬಗ್ಗೆ ಕೇಂದ್ರದ ಸಿದ್ಧತೆ’ ವಿಚಾರವಾಗಿ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಮುಂದಿನ ವರ್ಷವಷ್ಟೇ ಕೊರೋನಾ ಲಸಿಕೆ ಲಭ್ಯವಾಗಬಹುದು ಎಂದು ಸಮಿತಿಗೆ ವಿಜಾನ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಗಳು ಮನವರಿಕೆ ಮಾಡಿಕೊಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸೇರಿದಂತೆ ಮತ್ತಿತರ ಆರು ಮಂದಿ ಸದಸ್ಯರು ಭಾಗಿಯಾಗಿದ್ದರು.