No Confidence Motion: ಮಣಿಪುರದ ಮೌನವ್ರತ, ಮೋದಿಗೆ ಮೂರು ಪ್ರಶ್ನೆ!

Published : Aug 08, 2023, 03:04 PM IST
No Confidence Motion: ಮಣಿಪುರದ ಮೌನವ್ರತ, ಮೋದಿಗೆ ಮೂರು ಪ್ರಶ್ನೆ!

ಸಾರಾಂಶ

ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತವಳಿ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಗೊಗೊಯ್, "ಒಂದು ಭಾರತವು ಎರಡು ಮಣಿಪುರಗಳನ್ನು ಸೃಷ್ಟಿಸಿದೆ - ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ವಾಸಿಸುತ್ತಿದೆ" ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ನವದೆಹಲಿ (ಆ.8): ಮಣಿಪುರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನವ್ರತ ತಾಳಿದ್ದರಿಂದಲೇ ಅದನ್ನು ಮುರಿಯಲು ವಿರೋಧ ಪಕ್ಷ ಭಾರತವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾಪದ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಗೊಗೊಯ್, "ಒಂದು ಭಾರತವು ಎರಡು ಮಣಿಪುರಗಳನ್ನು ಸೃಷ್ಟಿಸಿದೆ - ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ವಾಸಿಸುತ್ತಿದೆ" ಎಂದು ಟೀಕಾಪ್ರಹಾರ ಮಾಡಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯನ್ನು ಪ್ರಸ್ತಾಪಿಸಿದರು. ಮಣಿಪುರವಿರಲಿ, ಹರಿಯಾಣವಾಗಲಿ ಮತಗಳನ್ನು ಗೆಲ್ಲಲು ದ್ವೇಷವೇ ಅಸ್ತ್ರವಾಗಿ ಪರಿಣಮಿಸಿದೆ ಎಂದರು.

ಬಿಜೆಪಿ ಏನೇ ಹೇಳಿದರೂ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಾಂವಿಧಾನಿಕ ಮೌಲ್ಯಗಳೊಂದಿಗೆ ಕಾಂಗ್ರೆಸ್‌ ಎಂದಿಗೂ ನಿಲ್ಲಲಿದೆ. ಮಣಿಪುರ ಸೇರಿದಂತೆ ಈಶಾನ್ಯ ಭಾರತದಲ್ಲಿ ಈ ಹಿಂದೆ ಹಿಂಸಾಚಾರ ನಡೆದಿದೆ, ಆದರೆ ಎರಡು ಸಮುದಾಯಗಳ (ಮೈಟೈಸ್ ಮತ್ತು ಕುಕಿಗಳು) ನಡುವೆ ಇಂತಹ ದ್ವೇಷವು ಹಿಂದೆಂದೂ ಕಂಡಿರಲಿಲ್ಲ ಎಂದು ಗೊಗೊಯ್ ಹೇಳಿದರು. ಗೊಗೊಯ್ ಅವರು ಮಂಡಿಸಿದ ಅವಿಶ್ವಾಸ ಪ್ರಸ್ತಾವನೆಯನ್ನು ಲೋಕಸಭೆ ಕೈಗೆತ್ತಿಕೊಂಡಾಗ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕೊನೆಯ ಕ್ಷಣದಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಮುಖ ಸ್ಪೀಕರ್ ಆಗಿ ಏಕೆ ಹಿಂತೆಗೆದುಕೊಳ್ಳಲಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಇದರ ಬೆನ್ನಲ್ಲಿಯೇ ಆಡಳಿತ ಹಾಗೂ ವಿರೋದ ಪಕ್ಷಗಳ ನಡುವೆ ಮಾತಿನ ಸಮರ ನಡೆಯಿತು.

ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಹಾಗೂ ಪ್ರಧಾನಿ ನಡುವೆ ಚೇಂಬರ್‌ನಲ್ಲಿ ಸಾಕಷ್ಟು ವಿಚಾರ ಚರ್ಚೆಯಾಗುತ್ತದೆ. ಅದನ್ನು ನಾವ್ಯಾರೂ ಪ್ರಶ್ನೆ ಮಾಡೋದಿಲ್ಲ ಎಂದು ಗೌರವ್‌ ಗೊಗೋಯ್‌ ಹೇಳಿದ ಮಾತಿಗೆ ಗೃಹ ಸಚಿವ ಅಮಿತ್‌ ಶಾ ಕೆಂಡಾಮಂಡಲರಾದರು. ಇದು ಸ್ಪೀಕರ್‌ ಅಗೌರವ ತೋರಿದ ವಿಚಾರ. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಅಮಿತ್‌ ಶಾ ಆಗ್ರಹಿಸಿದದರು. ನಾವು ಈ ಅವಿಶ್ವಾಸ ಗೆಲ್ಲುತ್ತೇವೆ ಅಥವಾ ನಂಬರ್‌ಗಳ ಪ್ರಶ್ನೆ ಅಲ್ಲ. ಬದಲಾಗಿ ಮಣಿಪುರದ ನ್ಯಾಯ ಕೇಳುವ ಕಾರಣಕ್ಕಾಗಿ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲಯನ್ಸ್ (ಐಎನ್‌ಡಿಐಎ)  ಈ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ ಎಂದರು.

ಮಣಿಪುರಕ್ಕೆ ನ್ಯಾಯ ಬೇಕಿದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಹೇಳಿದ್ದರು, ಎಲ್ಲೆಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲೆಲ್ಲಾ ನ್ಯಾಯ ಕೂಡ ಅಪಾಯದಲ್ಲಿರುತ್ತದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಇಡೀ ಭಾರತವೇ ಉರಿಯುತ್ತಿದೆ, ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ಇದು ನಾಯಕನಾಗಿ ನಮ್ಮ ಬೇಡಿಕೆಯಾಗಿತ್ತು. ದೇಶದ, ಪ್ರಧಾನಿ ಮೋದಿ ಅವರು ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು, ಆದರೆ ಅವರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ ಎಂದು ಮೌನ ವ್ರತವನ್ನು (ಮೌನ ವ್ರತ) ಮಾಡುತ್ತಿದ್ದಾರೆ, ”ಎಂದು ಗೊಗೊಯ್ ಹೇಳಿದರು.

ನಾವು ಪ್ರಧಾನಿಗೆ ಮೂರು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ
1. ರಾಹುಲ್‌ ಗಾಂಧಿ ಮಣಿಪುರಕ್ಕೆ ಹೋಗಿದ್ದರು, ಐಎನ್‌ಡಿಐಎ ನಾಯಕರು ಹೋಗಿದ್ದರು,ಗೃಹ ಸಚಿವರು ಕೂಡ ಹೋಗಿದ್ದರು. ಆದರೆ, ಇಲ್ಲಿಯವರೆಗೂ ಪ್ರಧಾನಿ ಏಕೆ ಮಣಿಪುರಕ್ಕೆ ಹೋಗಿಲ್ಲ?

2. ಮಣಿಪುರದ ಬಗ್ಗೆ ಮಾತನಾಡಲು ಎಂಭತ್ತು ದಿನಗಳು ಏಕೆ ಬೇಕಾಯಿತು? ಆ ಬಳಿಕ ಮಾತನಾಡಿದ್ದರೂ, ಅದೂ ಕೇವಲ 30 ಸೆಕೆಂಡ್‌ ಮಾತ್ರ. ಇಲ್ಲಿಯವರೆಗೆ ಯಾವುದೇ ಸಹಾನುಭೂತಿಯ ಮಾತುಗಳನ್ನು ಪ್ರಧಾನಿ ವ್ಯಕ್ತಪಡಿಸಿಲ್ಲ. ಪ್ರಧಾನಿಯಾಗಿರುವುದರಿಂದ ಅವರ ಮಾತಿಗೆ ಇರುವ ಮಹತ್ವ ಯಾವ ಸಚಿವರ ಮಾತಿನಲ್ಲೂ ಇಲ್ಲ. ಶಾಂತಿಯ ಹೆಜ್ಜೆಗೆ ಪ್ರಧಾನಿ ಚಾಲನೆ ನೀಡಿದರೆ ಒಳ್ಳೆಯದು, ಸಚಿವರ ಹೆಜ್ಜೆಯಲ್ಲಿ ಶಕ್ತಿ ಇಲ್ಲ.

3. ಮಣಿಪುರ ಸಿಎಂಅನ್ನು ಏಕೆ ವಜಾ ಮಾಡಿಲ್ಲ? ಗುಜರಾತಿನಲ್ಲಿ ರಾಜಕೀಯ ಮಾಡಬೇಕು ಎಂದಾಗ ಒಂದಲ್ಲ ಎರಡು ಬಾರಿ ಸಿಎಂ ಬದಲಾಗಿದ್ದರು. ಉತ್ತರಾಖಂಡದಲ್ಲಿ 3 ಬಾರಿ ಬದಲಾಯಿತು, ತ್ರಿಪುರಾದಲ್ಲಿ ಬದಲಾವಣೆ ಮಾಡಲಾಯಿತು. ಆದರೆ, ಗುಪ್ತಚರ ವೈಫಲ್ಯ ಎಂದು ಸ್ವತಃ ಒಪ್ಪಿಕೊಂಡ ಮಣಿಪುರ ಸಿಎಂಗೆ ವಿಶೇಷ ಆಶೀರ್ವಾದ ಏಕೆ ನೀಡುತ್ತಿದ್ದೀರಿ?

No Trust Debate: ವಿಪಿ ಸಿಂಗ್‌, ಎಚ್‌ಡಿ ದೇವೇಗೌಡ, ವಾಜಪೇಯಿ 'ಅವಿಶ್ವಾಸ'ಕ್ಕೆ ಅಧಿಕಾರ ಕಳೆದುಕೊಂಡ ನಾಯಕರು!

ಪಿಎಂ ಮಾತನಾಡುತ್ತಿಲ್ಲ ಅದಕ್ಕೂ 3 ಕಾರಣವಿದೆ
1. ಮಣಿಪುರದಲ್ಲಿ ತಮ್ಮ ಡಬಲ್‌ ಎಂಜಿನ್‌ ಸರ್ಕಾರ ವಿಫಲವಾಗಿ ಎನ್ನುವುದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ

2.ಭಾರತದ ಗೃಹ ಇಲಾಖೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಣಿಪುರ ವಿಚಾರದಲ್ಲಿ ವಿಫಲರಾಗಿದ್ದಾರೆ

3. ಸಾರ್ವಜನಿಕವಾಗಿ ತಪ್ಪು ಮಾಡಿದ್ದೇನೆ ಎಂದು ಹೇಳಲು ಪ್ರಧಾನಿ ಮೋದಿಗೆ ಇಷ್ಟವಿಲ್ಲ

ಇಂದಿನಿಂದ ಪಿಎಂ ಮೋದಿ ವಿರುದ್ಧ 3 ದಿನ ಅವಿಶ್ವಾಸ ನಿರ್ಣಯ ಚರ್ಚೆ, ಭಾರಿ ಮಾತಿನ ಸಮರ ಪಕ್ಕಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!