ಬೆಂಗಳೂರು: ಮಾರ್ಷಲ್ ಆರ್ಟ್ಸ್ ಪ್ರವೀಣನಾಗಿರುವ 27 ವರ್ಷದ ಯುವಕರೊಬ್ಬರು ಬಹಳ ಗಟ್ಟಿಯಾಗಿರುವ ವಾಲ್‌ನಟ್ ಅಥವಾ ಅಕ್ರೋಟ್ ನ್ನು ತಮ್ಮ ಹಣೆಯಿಂದಲೇ ಒಡೆದು ಗಿನ್ನೆಸ್ ದಾಖಲೆ ಪುಟ್ಟ ಸೇರಿದ್ದಾರೆ. ನವೀನ್‌ಕುಮಾರ್ ಎಂಬುವವರೆ ಹೀಗೆ ಗಿನ್ನೆಸ್ ಪುಟ ಸೇರಿದ ಭಾರತೀಯ ಯುವಕ. ವಾಲ್‌ನಟ್ ಬಹಳ ಗಟ್ಟಿಯಾದ ಅಷ್ಟು ಸುಲಭವಾಗಿ ಕೈ ಅಥವಾ ಕತ್ತಿಯಿಂದಲೂ ಒಡೆಯಲು ಸಾಧ್ಯವಾಗದ ಗಟ್ಟಿಯಾದ ಹೊದಿಕೆಯನ್ನು ಹೊಂದಿರುವ ಒಣ ಹಣ್ಣಾಗಿದೆ. ಇದನ್ನು ಇವರು ಬರೀ ತಲೆಯಿಂದ ಒಡೆಯುವ ಮೂಲಕ ಗಿನ್ನೆಸ್ ಪುಟ ಸೇರಿದ್ದಾರೆ.
ಇವರು ಕೇವಲ ಒಂದು ನಿಮಿಷದಲ್ಲಿ 273 ವಾಲ್‌ನಟ್‌ಗಳನ್ನು ಒಡೆದು ಹಾಕಿದ್ದಾರೆ. ಇದಕ್ಕಿಂತ ಮೊದಲು ಇದೇ ರೀತಿಯ ಸಾಧನೆಯ ಹೆಗ್ಗಳಿಕೆ ಪಾಕಿಸ್ತಾನದ ವ್ಯಕ್ತಿಯ ಹೆಸರಲ್ಲಿತ್ತು. ಪಾಕಿಸ್ತಾನದ (Pakistan) ಮೊಹಮ್ಮದ್ ರಷೀದ್ (Mohammed Rashid) ಎಂಬುವವರು 1 ನಿಮಿಷದಲ್ಲಿ 150 ವಾಲ್‌ನಟ್‌ಗಳನ್ನು ಮುರಿದು ಹಾಕಿದ್ದರು. 2014 ಹಾಗೂ 2016ರಲ್ಲಿ ಮೊಹಮ್ಮದ್ ರಷೀದ್ ಈ ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಗಮನಿಸಿದ್ದ ನವೀನ್ ಕುಮಾರ್ ಅವರು ಮೊಹಮ್ಮದ್ ರಷೀದ್ ಮಾಡಿದ ಸಾಧನೆಯನ್ನು ಮುರಿಯುವುದಕ್ಕಾಗಿ ಸತತ ಪರಿಶ್ರಮ ಪಟ್ಟಿದ್ದರು. ಅದರಂತೆ ಅವರಿಗೆ ಈಗ ಯಶ ಸಿಕ್ಕಿದ್ದು ಗಿನ್ನೆಸ್ ವಿಶ್ವ ದಾಖಲೆ (GWR) ಸಂಸ್ಥೆ ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
6 ವರ್ಷದಲ್ಲಿಯೇ ಎರಡು ವಿಶ್ವದಾಖಲೆ ಮುಡಿಗೇರಿಸಿಕೊಂಡ ಚಿತ್ರದುರ್ಗದ ಪೋರ!
ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ಈ ವೀಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ನವೀನ್‌ಕುಮಾರ್ (Naveen Kumar) ಮೇಜಿನ ಮೇಲೆ ಉದ್ದದ ಎರಡು ಸಾಲುಗಳಲ್ಲಿ ಇರಿಸಿದ ವಾಲ್‌ನಟ್‌ನ್ನು ಪಟಪಟನೇ ಕಲ್ಲಿನಂತೆ ತಲೆಯಿಂದ ಜಜ್ಜಿ ಒಡೆದು ಹಾಕುವುದನ್ನು ಕಾಣಬಹುದಾಗಿದೆ. ವಾಲ್‌ನಟ್‌ನ ಹೊದಿಕೆ ಬಹಳ ಗಟ್ಟಿಯಾಗಿದ್ದು, ತೆಂಗಿನ ಚಿಪ್ಪಿನಂತಿರುತ್ತದೆ. ಹೀಗಾಗಿ ಒಂದೊಂದು ವಾಲ್‌ನಟ್ (Wallnut)ಒಡೆಯುತ್ತಿದ್ದಂತೆ ಅದರ ಹೊದಿಕೆಯ ತುಂಡುಗಳು ತಾಗಿ ವನೀನ್‌ಕುಮಾರ್ ತಲೆಯಿಂದ ರಕ್ತ ಸುರಿಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಒಂದು ನಿಮಿಷದಲ್ಲಿ ಅವರು273 ವಾಲ್‌ನಟ್ ತುಂಡು ಮಾಡಿರುವುದರಿಂದ ಒಂದು ಸೆಕೆಂಡ್‌ನಲ್ಲಿ ಅವರು ಒಟ್ಟು ನಾಲ್ಕೂವರೆ ವಾಲ್‌ನಟ್ ಅನ್ನು ಒಡೆದಂತಾಗಿದೆ. ಆಗಸ್ಟ್ 4 ರಂದು ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ದೇಹಕ್ಕೆ ಬೆಂಕಿ ಹಚ್ಚಿ 100 ಮೀಟರ್ ಓಟ, 2 ವಿಶ್ವದಾಖಲೆ ನಿರ್ಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ