
ಮುಂಬೈ: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮೂರು ವರ್ಷದ ಸಂಭ್ರಮದಲ್ಲಿರುವ ಎನ್ಎಂಎಸಿಸಿ, ಜಾಗತಿಕವಾಗಿ ವಿಸ್ತರಣೆಯಾಗಿದೆ. ಈ ಮೂಲಕ ಭಾರತದ ಕಲಾವಿದರಿಗೆ ಪ್ರತಿಭೆ ವಿಶ್ವಮಟ್ಟಕ್ಕೆ ತೆರೆದುಕೊಳ್ಳಲು ಸಹಾಯವಾಗಲಿದೆ. ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಭಾರತದ ಕಲಾವಿದರಿಗೆ ಅವಕಾಶ ಕಲ್ಪಿಸುವ ವೇದಿಕೆಯಾಗಲಿದ್ದು, ಕಲಾರಸಿಕರು ಅಂತರರಾಷ್ಟ್ರೀಯ ಪ್ರದರ್ಶನ ವೀಕ್ಷಣೆಗಾಗಿ ವೆಸ್ಟ್ ಎಂಡ್ ಬ್ಲಾಕ್‌ಬಸ್ಟರ್ ಅಥವಾ ಬ್ರಾಡ್‌ವೇ ಮ್ಯೂಸಿಕಲ್‌ಗೆ ತೆರಳುವ ಅವಕಾಶಗಳು ಇಲ್ಲ. ಅಂತಹ ವೇದಿಕೆಯೊಂದು ಭಾರತದಲ್ಲಿ ಸೃಷ್ಟಿಯಾಗುತ್ತಿದೆ.
ಮಾರ್ಚ್ 2023ರಂದು ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಆರಂಭವಾಯ್ತು. ಸಂಕ್ಷಿಪ್ತವಾಗಿ NMACC ಎಂದು ಕರೆಯಲಾಗುತ್ತದೆ. ಇದು ಸಾಂಸ್ರ್ಕೃತಿಕ ಕಾರ್ಯಕ್ರಮದ ಬಹುದೊಡ್ಡ ವೇದಿಕೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 3500ಕ್ಕೂ ಅಧಿಕ ಪ್ರದರ್ಶನಗಳು ಇಲ್ಲಿವೆ. 25 ಲಕ್ಷದಕ್ಕೂ ಅಧಿಕ ಅತಿಥಿಗಳು NMCCಗೆ ಆಗಮಿಸಿದ್ದು, 15ಕ್ಕೂ ಹೆಚ್ಚು ಭಾಷೆಗಳಲ್ಲಿ, 10500ಕ್ಕೂ ಅಧಿಕ ಕಲಾವಿದರು NMACC ವೇದಿಕೆ ಮೇಲೆ ಪ್ರದರ್ಶನ ನೀಡಿದ್ದಾರೆ.
'ದಿ ಸೌಂಡ್ ಆಫ್ ಮ್ಯೂಸಿಕ್, ವೆಸ್ಟ್ ಸೈಡ್ ಸ್ಟೋರಿ, ಮಾಮಾ ಮಿಯಾ, ದಿ ಫ್ಯಾಂಟಮ್ ಆಫ್ ದಿ ಒಪೇರಾ, ವಿಕ್ಡ್,ಮುಘಲ್-ಇ-ಅಜಮ್: ದಿ ಮ್ಯೂಸಿಕಲ್, ರಾಜಾಧಿರಾಜ್: ಲವ್. ಲೈಫ್. ಲೀಲಾ, ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್: ಸಿವಿಲೈಜೇಷನ್ ಟು ನೇಷನ್ ಸೇರಿದಂತೆ ಹಲವು ಕಾರ್ಯಕ್ರಮಗಳು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ನಡೆದಿವೆ.
ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ವೈಲ್ಡ್‌ಲೈಫ್ ಫೊಟೋಗ್ರಾಫರ್ ಆಫ್ ದಿ ಇಯರ್, ದಿಯಾ ಆರ್ಟ್ ಫೌಂಡೇಷನ್ ಸಹಯೋಗದೊಂದಿಗೆ ಲೈಟ್ ಇನ್ ಟು ಸ್ಪೇಸ್, ಭಕ್ತಿ, ಮತ್ತು ಬಲ್ಗರಿ ಸರ್ಪೆಂಟಿ ಇನ್ಫಿನಿಟೊ ಶೋಗಳಿಗೂ ಎನ್‌ಎಂಸಿಸಿ ಸಾಕ್ಷಿಯಾಗಿದೆ.
ಸದ್ಯ NMCCಗೆ ಮೂರು ವರ್ಷ ಪೂರ್ಣಗೊಂಡಿದ್ದು, ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಇದೀಗ NMACC ಅಂತರಾಷ್ಟ್ರೀಯ ವೇದಿಕೆಯಾಗಿ ಬದಲಾಗಿದೆ. ಮುಂದಿನ ಅವಧಿಯಲ್ಲಿ NMACC ವೇದಿಕೆಯಲ್ಲಿ ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್: ಸಿವಿಲೈಜೇಷನ್ ಟು ನೇಷನ್, ಶಿಕಾಗೊ' (Chicago) ನಾಟಕ ಪ್ರದರ್ಶನ ನಡೆಯಲಿವೆ. ವಿವಿಧ ಕಲಾತ್ಮಕ ಸಂಪ್ರದಾಯ, ಸಂಸ್ಕೃತಿ ಆಧಾರಿತ ವಿಶೇಷ ಪ್ರದರ್ಶನಗಳು ಮುಂದಿನ ದಿನಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ