ಹೃದಯಾಘಾತದಿಂದ ಕುಸಿದು ಬಿದ್ದ ಅಧಿಕಾರಿ ಪಿಎಸ್‌ಗೆ ಸಚಿವರಿಂದ ತಕ್ಷಣ ಸಿಪಿಆರ್, ಬದುಕಲಿಲ್ಲ ರಾಜು

Published : Sep 08, 2026, 04:20 PM IST
Minister Performs CPR to officer PS

ಸಾರಾಂಶ

ಅಸೆಂಬ್ಲಿಯಲ್ಲಿ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿಯ ಪರ್ಸನಲ್ ಸೆಕ್ರಟರಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಚಿವ ನೆರವಿಗೆ ಧಾವಿಸಿದ್ದಾರೆ. ಸಿಪಿಆರ್ ಮೂಲಕ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಚಿವರ ಪ್ರಯತ್ನ ವ್ಯರ್ಥವಾಗಿದೆ.

ಹೈದರಾಬಾದ್ (ಸೆ.08) ವಿಧಾನಸಭೆಯಲ್ಲಿ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿಯ ಪರ್ಸನಲ್ ಸೆಕ್ರಟರಿ (ಪಿಎಸ್) ಹೃದಾಯಾಘಾತದಿಂದ ಕುಸಿದು ಬಿದ್ದ ಬೆನ್ನಲ್ಲೇ ಸಚಿವರು ಸಿಪಿಆರ್ ಮೂಲಕ ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ. ಸಚಿವರು ನಿರಂತರವಾಗಿ ಸಿಪಿಆರ್ ನೀಡಿ ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅಧಿಕಾರಿ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ತೆಲಂಗಾಣ ಅಸೆಂಬ್ಲಿಯಲ್ಲಿ ನಡೆದಿದೆ. ಐಎಎಸ್ ಅಧಿಕಾರಿ ನವೀನ್ ಮಿತ್ತಲ್ ಅವರ ಪರ್ಸನಲ್ ಸೆಕ್ರಟರಿ ರಾಜು ತೆಲಂಗಾಣ ವಿಧಾನಸಭೆಯಲ್ಲೇ ಮೃತಪಟ್ಟಿದ್ದಾರೆ.

ಕುಸಿದು ಬಿದ್ದ ರಾಜುಗೆ ಸ್ಥಳದಲ್ಲೇ ಸಚವರಿಂದ ಸಿಪಿಆರ್

ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ಮಿತ್ತಲ್ ಅವರ ಪರ್ಸನಲ್ ಸೆಕ್ರಟರಿ ರಾಜು ಇದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅಲ್ಲೇ ಇದ್ದ ಸಚಿವ ವಾಕಿತಿ ಶ್ರೀಹರಿ ತಕ್ಷಣ ನೆರವಿಗೆ ಧಾವಿಸಿದ್ದಾರೆ. ಕುಸಿದು ಬಿದ್ದ ರಾಜುವಿಗೆ ಸ್ಥಳದಲ್ಲೇ ಸಿಪಿಆರ್ ನೀಡಿದ್ದಾರೆ. ಸಚಿವರು ನಿರಂತರ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಇತರರಿಗೆ ಆ್ಯಂಬುಲೆನ್ಸ್‌ಗೆ ಸೂಚನೆ ನೀಡಿದ್ದಾರೆ. ಸಚಿವರು ಸಿಪಿಆರ್ ನೀಡಿದರೂ ಚೇತರಿಕೆ ಕಾಣಲಿಲ್ಲ. ಹೀಗಾಗಿ ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಆತಂಕದ ವಾತಾವರಣ ನಿರ್ಮಾಣ

ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ವೈದ್ಯರು ತಪಾಸಣೆ ನಡೆಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ರಾಜು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿ ಈ ಘಟನೆ ನಡೆದಿದೆ. ಸಚಿವರು, ಇತರ ಅಧಿಕಾರಿಗಳು ಸೇರಿದಂತೆ ಹಲವರು ನೆರೆದಿದ್ದ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಜು ಹೆಚ್ಚಿನ ಆರೋಗ್ಯ ಸಮಸ್ಯೆಯಿಂದ ಬಳಲಿಲ್ಲ. ಹೀಗಾಗಿ ಮತ್ತೆ ಆರೋಗ್ಯ ಕುರಿತು ಆತಂಕ, ಚರ್ಚೆಗಳು ಶುರುವಾಗಿದೆ.

ಕಣ್ಣೀರಿಟ್ಟ ಸಚಿವ

ರಾಜು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಐಎಸ್ ಅದಿಕಾರಿ ಹಾಗೂ ಸಚಿವ ಶ್ರೀಹರಿ ಆಘಾತಗೊಂಡಿದ್ದಾರೆ. ಸಿಪಿಆರ್ ನೀಡಿದರೂ ಬದುಕಲಿಲ್ಲ ಎಂದು ಸಚಿವ ಶ್ರೀಹರಿ ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಸಚಿವ ಶ್ರೀಹರಿ, ಎಲ್ಲರೂ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

3 ವರ್ಷಗಳಲ್ಲಿ 1.55 ಕೋಟಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ: ಶಿಕ್ಷಣ ಕ್ಷೇತ್ರದ ಶಾಕಿಂಗ್ ಸತ್ಯ ಬಿಚ್ಚಿಟ್ಟ TISS ವರದಿ!
ಪ್ರಧಾನಿ ಮೋದಿಯ ಧುರಂಧರ್ ಎಂಟ್ರಿಗೆ ಜನ ಫಿದಾ, ವೇದಿಕೆಗೆ ಬರುತ್ತಿದ್ದಂತೆ ಆರಿ..ಆರಿ ಸಾಂಗ್ ಪ್ಲೇ