ಕೋಲ್ಕತ್ತಾ(ಏ.14) ಪಶ್ಚಿಮ ಬಂಗಾಳದ ಉತ್ತರ ದಿಜಾನ್ ಪುರ ಜಿಲ್ಲೆಯ 12 ಜನ ತಬ್ಲಿಘಿಗಳು ದೆಹಲಿಯ ನಿಜಾಮುದ್ದೀನ್ ಮರ್ಕಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ತಲೆ ತಪ್ಪಸಿಕೊಂಡು ಇಸ್ಲಾಂಪುರ ಏರಿಯಾದ ಮಸೀದಿಯೊಂದರಲ್ಲಿ ಅಡಗಿಕುಳಿತಿದ್ದರು ಅವರನ್ನು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವಿವರಣೆ ನೀಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂ ದಿಗೆ ಖಚಿತ ಮಾಹಿತಿ ಮೇರೆಗೆ ಈ ಕೆಲಸ ಮಾಡಲಾಗಿದೆ.
ದೆಹಲಿಯಿಂದ ಹಿಂದಿರುಗಿದ ತಬ್ಲಿಘಿಗಳು ಗೈಸಾಲ್ ಏರಿಯಾದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದುಬಂತು. ಸರಿಯಾದ ಮಾಹಿತಿ ಕಲೆಹಾಕಿ ಆರೋಗ್ಯ ಅಧಿಕಾರಿಗಳ ಸಹಾಯದೊಂದಿಗೆ ದಾಳಿಮಾಡಿದ್ದೇವೆ ಎಂದು ಇಸ್ಲಾಂಪುರ ಡಿಎಸ್‌ಪಿ ಸಚಿನ್ ಮಕ್ಕಾರ್ ತಿಳಿಸಿದ್ದಾರೆ.
ಘೋರ ಕೊರೋನಾಕ್ಕೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ ಎಷ್ಟು?
ಈಗ ಕ್ವಾರಂಟೈನ್ ಮಾಡಿದ ಯಾರಿಗೂ ಕೊರೋನಾ ಲಕ್ಷಣಗಳಾದ ಕೆಮ್ಮು, ಜ್ವರ ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದ್ದು ಜನ ಆತಂಕಪಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಜಮಾತ್ ನಲ್ಲಿ 3 ಸಾವಿರಕ್ಕೂಅಧಿಕ ಜನ ಪಾಲ್ಗೊಂಡಿದ್ದರು.ದೆಹಲಿಯ ಮಸೀದಿ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಇಲ್ಲಿಂದಲೇ ದೇಶದ ಮೂಲೆ ಮೂಲೆಗೆ ಕರೋನಾ ರವಾನೆಯಾಗಿತ್ತು.