ಲಾಕ್ ಡೌನ್ ಮಧ್ಯೆ ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿ

By Suvarna NewsFirst Published Apr 14, 2020, 4:56 PM IST
Highlights

ಮೇ. 3ರವ್ರೆಗೆ ಲಾಕ್ ಡೌನ್/ ಎಲ್ಲ ಪ್ರಯಾಣಿಕ ರೈಲು ಸೇವೆಗಳು ಕ್ಯಾನ್ಸಲ್/ ನೋ ಟಿಕೆಟ್ ಬುಕಿಂಗ್/ ಗೂಡ್ಸ್ ರೈಲುಗಳಿಗೆ ಮಾತ್ರ ಅವಕಾಶ
ನವದೆಹಲಿ(ಏ. 14)  ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.  ಮೇ. 3ರವರೆಗೆ ಲಾಕ್ ಡೌನ್  ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.  ಇದರೊಂದಿಗೆ ಭಾರತೀಯ ರೈಲ್ವೆ ಸಹ ಎಲ್ಲ ಪ್ರಯಾಣಿಕ ರೈಲು ಸೇವೆಯನ್ನು ಬಂದ್ ಮಾಡಿದೆ.

ಪ್ರಿಮಿಯಂ ರೈಲುಗಳು, ಮೇಲ್, ಎಕ್ಸಪ್ರೆಸ್, ಪ್ಯಾಸೆಂಜರ್, ಸಬ್ ಅರ್ಬನ್, ಕೋಲ್ಕತ್ತಾ ಮೇಟ್ರೋ, ಕೊಂಕಣ ರೈಲ್ವೆ ಸೇರಿದಂತೆ ಎಲ್ಲ ಸೇವೆಗಳನ್ನು ಮೇ. 3ರವರೆಗೆ ಬಂದ್ ಮಾಡಲಾಗುತ್ತದೆ ಎಂದು ರೈಲ್ವೆ  ಇಲಾಖೆ ತಿಳಿಸಿದೆ.

ಭಾರತೀಯ ರೈಲ್ವೆಯಿಂದ ಐಸೋಲೇಶನ್ ವಾರ್ಡ್ 

ಮೂಲಭೂತ ಅಗತ್ಯ ಪೂರೈಕೆ ಮಾಡುತ್ತಿರುವ ಗೂಡ್ಸ್ ರೈಲುಗಳು ಸಂಚರಿಸಲಿವೆ. ಟಿಕೆಟ್ ಬುಕಿಂಗ್ ಸಹ ಬಂದ್ ಮಾಡಲಾಗಿದೆ. ಸರ್ಕಾರದ ಮುಂದಿನ ಲಾಕ್ ಡೌನ್ ತೆರವಿನ ಆದೇಶದವರೆಗೂ ಇದು ಹೀಗೆ ಮುಂದುವರಿಯಲಿದೆ ಎಂದು ರೈಲ್ವೆ ಮಿನಿಸ್ಟ್ರಿ ಎಕ್ಸಿಕ್ಯೂಟಿವ್  ನಿರ್ದೇಶಕ ರಾಜೇಶ್ ದತ್ ಬಜ್ಪೈ ತಿಳಿಸಿದ್ದಾರೆ.


 
click me!