NIV Scientist: ಕೋವಿಡ್ ಲಸಿಕೆ ತಂಡದಲ್ಲಿದ್ದ ವಿಜ್ಞಾನಿ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್!

Kannadaprabha News   | Kannada Prabha
Published : Jun 09, 2026, 03:59 AM IST
NIV Scientist Arrested With 3 6 Grams of MDMA in Kerala

ಸಾರಾಂಶ

ಭಾರತದಲ್ಲಿ ಕೋವಿಡ್‌ ಲಸಿಕಾ ತಯಾರಿಕಾ ತಂಡದಲ್ಲಿದ್ದ, ಲಸಿಕೆ ಸಂಬಂಧಿತ ಹಲವು ಸಂಶೋಧನೆಗಳಿಗೆ ಹಲವು ಪುರಸ್ಕಾರಗಳಿಗೆ ಪಾತ್ರನಾಗಿದ್ದ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ವಿಜ್ಞಾನಿಯೊಬ್ಬ 3.630 ಗ್ರಾಂ ಡ್ರಗ್ಸ್‌ ಸಮೇತ ಸಿಕ್ಕಿಬಿದ್ದಿದ್ದಾನೆ.  ಘಟನೆ ಬೆಳಕಿಗೆ ಬಂದಿದ್ದು ಹೇಗೆ? 

- ಕೊರಿಯರ್ ಸಿಬ್ಬಂದಿ ಸಂಶಯದಿಂದ ಪ್ರಕರಣ ಬೆಳಕಿಗೆ

ಕೊಚ್ಚಿ( ಜೂ.9) : ಭಾರತದಲ್ಲಿ ಕೋವಿಡ್‌ ಲಸಿಕಾ ತಯಾರಿಕಾ ತಂಡದಲ್ಲಿದ್ದ, ಲಸಿಕೆ ಸಂಬಂಧಿತ ಹಲವು ಸಂಶೋಧನೆಗಳಿಗೆ ಹಲವು ಪುರಸ್ಕಾರಗಳಿಗೆ ಪಾತ್ರನಾಗಿದ್ದ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ವಿಜ್ಞಾನಿಯೊಬ್ಬ 3.630 ಗ್ರಾಂ ಡ್ರಗ್ಸ್‌ ಸಮೇತ ಸಿಕ್ಕಿಬಿದ್ದಿದ್ದಾನೆ. ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯಪಡೆ ಅಧಿಕಾರಿಗಳು ವಿಜ್ಞಾನಿಯನ್ನು ಬಂಧಿಸಿದ್ದಾರೆ.

ಪುಣೆಯ 39 ವರ್ಷದ ಪ್ರಸಾದ್‌ ಸರ್ಕಾಳೆ(Prasad Sarkale) ಬಂಧಿತ. ಐಎಂಆರ್‌ಸಿಯ ಎನ್‌ಐವಿಯಲ್ಲಿ ಈತ ವಿಜ್ಞಾನಿಯಾಗಿದ್ದು ಕೆಲ ತಿಂಗಳ ಹಿಂದಷ್ಟೇ ಅಲಪ್ಪುಳಕ್ಕೆ ವರ್ಗಗೊಂಡಿದ್ದ.

ಪುಣೆಯಿಂದ ಕೊಚ್ಚಿಯ ಚೆರನಲ್ಲೂರಿನ ಖಾಸಗಿ ಕೊರಿಯರ್‌ ಕಂಪನಿಗೆ ಈತನ ಹೆಸರಿನಲ್ಲಿ ಶನಿವಾರ ಪಾರ್ಸೆಲ್‌ ಬಂದಿತ್ತು. ಈ ಕುರಿತು ಆತನಿಗೆ ಮಾಹಿತಿ ನೀಡಿದ್ದರೂ ಆತ ಶಂಕೆಯಿಂದ ತಪ್ಪಿಸಿಕೊಳ್ಳಲು 2 ದಿನ ವಿಳಂಬವಾಗಿ ಕೊರಿಯರ್ ಆಫೀಸ್‌ಗೆ ಪಾರ್ಸೆಲ್‌ ಪಡೆಯಲು ಬಂದಿದ್ದ. ಇದು ಕೊರಿಯರ್‌ ಕಚೇರಿ ಸಿಬ್ಬಂದಿಯಲ್ಲಿ ಅನುಮಾನ ಮೂಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮಾರುವೇಷದಲ್ಲಿ ಆಗಮಿಸಿದ ಪೊಲೀಸರು, ಪ್ರಸಾದ್‌, ಪಾರ್ಸೆಲ್‌ ಪಡೆದು ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಅಡ್ಡಗಟ್ಟಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಸೀರೆ ಸೇರಿದಂತೆ ಇನ್ನಿತರ ಉಡುಪುಗಳ ಮಧ್ಯದಲ್ಲಿ ಡ್ರಗ್ಸ್‌ ಇರುವುದು ಪತ್ತೆಯಾಗಿದ್ದು ಬಂಧಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಕೌಟುಂಬಿಕ ಕಲಹದಿಂದ ಮಾದಕವ್ಯಸನಿಯಾಗಿದ್ದು 6 ತಿಂಗಳಿಂದ ವ್ಯಸನ ಮುಕ್ತಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ವಿಚಾರಣೆ ವೇಳೆ ಸರ್ಕಾಳೆ ತಪ್ಪೊಪ್ಪಿಕೊಂಡಿದ್ದಾನೆ.

ರ್‍ಯಾಂಕ್‌ ವಿಜೇತ ವಿದ್ಯಾರ್ಥಿಯಾಗಿದ್ದ ಪ್ರಸಾದ್‌ ಎನ್‌ಐವಿಯಲ್ಲಿ 12 ವರ್ಷದಿಂದ ಉದ್ಯೋಗದಲ್ಲಿದ್ದು ಹಲವು ಪ್ರಶಸ್ತಿಗಳನ್ನೂ ಪಡೆದಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ
ಯುಟ್ಯೂಬ್​ನಲ್ಲಿ ಹೋಮ್​ ಟೂರ್​ ಮಾಡಿಸಿದ್ಲು: ಬೆಳಗಾಗೋಷ್ಟರಲ್ಲಿ 10 ಲಕ್ಷದ ಚಿನ್ನಾಭರಣ ನಾಪತ್ತೆಯಾಯ್ತು