ಡೆಲ್ಟಾ, ಬೀಟಾ ವೈರಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ; ಅಧ್ಯಯನ ವರದಿ!

Published : Jun 08, 2021, 03:48 PM ISTUpdated : Jun 08, 2021, 05:22 PM IST
ಡೆಲ್ಟಾ, ಬೀಟಾ ವೈರಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ; ಅಧ್ಯಯನ ವರದಿ!

ಸಾರಾಂಶ

ದೇಶಿಯ ಕೋವಾಕ್ಸಿನ್ ರೂಪಾಂತರಿ ವಿರುದ್ಧವೂ ಪರಿಣಾಮಕಾರಿ ಬೀಟಾ, ಡೆಲ್ಟಾ ವಿರುದ್ಧ ಕೋವಾಕ್ಸಿನ್ ಹೋರಾಟ ಅಧ್ಯಯನ ವರದಿಯಲ್ಲಿ ಬಹಿರಂಗವಾಯಿತು ದೇಶಿ ಲಸಿಕೆ ಸಾಮರ್ಥ್ಯ

ನವದೆಹಲಿ(ಜೂ.08): ಕೊರೋನಾ ರೂಪಾಂತರಿ ವೈರಸ್ ಡೆಲ್ಟಾ ಹಾಗೂ ಬೇಟಾ ವೈರಸ್ ಅಪಾಯದ ಮಟ್ಟವನ್ನು ಹೆಚ್ಚಿಸಿದೆ. ರೂಪಾಂತರಿ ವೈರಸ್ ತ್ವರಿತವಾಗಿ ಹರಡುವ ಭೀತಿ, ಸೋಂಕಿತರಿಗೆ ತಕ್ಷಣವೇ ಐಸಿಯುು, ವೆಂಟಿಲೇಟರ್ ಅವಶ್ಯತೆ ಹೆಚ್ಚಾಗುತ್ತಿದೆ. ಆದರೆ ಭಾರತ ಆತಂಕ ಪಡುವ ಅವಶ್ಯಕತೆ ಇಲ್ಲ. ಕಾರಣ  ಭಾರತದ ದೇಸಿ ಲಸಿಕೆ ಕೋವಾಕ್ಸಿನ್ ಈ ರೂಪಾಂತರಿ ವೈರಸ್‌ ವಿರುದ್ಧ ಅತ್ಯಂತ ಪರಿಣಾಮಕಾರಿ ಅನ್ನೋದು ಇದೀಗ ಅಧ್ಯಯನ ವರದಿಯಿಂದ ಸಾಬೀತಾಗಿದೆ. 

ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗಕ್ಕೆ ಮುಂದಾದ ದೆಹಲಿ ಏಮ್ಸ್!...

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ICMR ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಈ ವಿಚಾರ ಬಹಿರಂಗಾಗಿದೆ. ಈ ಸಂಶೋಧನೆಯಲ್ಲಿ ಕೋವಾಕ್ಸಿನ್ ಲಸಿಕೆ ಬೀಟಾ(B.1.351) ಹಾಗೂ ಡೆಲ್ಟಾ (B.1.617.2) ವೇರಿಯೆಂಟ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ.

ಕೋವಾಕ್ಸಿನ್‌ನೊಂದಿಗೆ ಲಸಿಕೆ ಹಾಕಿದ ಜನರಲ್ಲಿ  ಬೀಟಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಪೋಲ್ಡ್ ರಿಡಕ್ಷನ್ ಪ್ರಮಾಣ 3.3  ಮತ್ತು 4.6 ಪಟ್ಟು ಹೆಚ್ಚಾಗಿದೆ. ಅಧ್ಯಯನದ ಫಲಿತಾಂಶಗಳನ್ನು ಜೂನ್ 7 ರಂದು ಬಯೋರಿಕ್ಸೀವ್ ಪ್ರಿಪ್ರಿಂಟ್ ಸರ್ವರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 

'ಕೋವ್ಯಾಕ್ಸಿನ್‌ ಬ್ರೆಜಿಲ್‌ ವೈರಸ್‌ ಮೇಲೆ ಪರಿಣಾಮಕಾರಿ!'

ಬೀಟಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಕೊವಾಕ್ಸಿನ್  ರಕ್ಷಣೆ ನೀಡುತ್ತದೆ ಎಂದು ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಮತ್ತು ಪ್ರಿಪ್ರಿಂಟ್‌ನ  ಲೇಖಕ ಡಾ. ಪ್ರಜ್ಞಾ ಯಾದವ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ