ಉಚಿತ ಲಸಿಕೆಗೆ 50,000 ಕೋಟಿ ರೂಪಾಯಿ ವ್ಯಯಿಸಲಿದೆ ಕೇಂದ್ರ!

By Suvarna NewsFirst Published Jun 8, 2021, 2:28 PM IST
Highlights
  • ಕೇಂದ್ರ ಸರ್ಕಾರ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ಘೋಷಿಸಿದೆ
  • ರಾಜ್ಯಗಳ ಹೊರೆ ತಪ್ಪಿಸಿ ಎಲ್ಲರಿಗೂ ಉಚಿತವಾಗಿ ಲಸಿಕೆ ಪೂರೈಸುವುದಾಗಿ ಹೇಳಿದ ಕೇಂದ್ರ
  • ಉಚಿತ ವ್ಯಾಕ್ಸಿನ್‌ಗಾಗಿ 50,000 ಕೋಟಿ ರೂಪಾಯಿ ಹೆಚ್ಚುವರಿ ಹೊರೆ

ನವದೆಹಲಿ(ಜೂ.08): ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶದ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ರಾಜ್ಯಗಳ ಪಾಲಿನ ಹೊರೆಯನ್ನು ತಗ್ಗಿಸಿರುವ ಕೇಂದ್ರ ಸರ್ಕಾರ, ಲಸಿಕೆಯನ್ನು ಉಚಿತವಾಗಿ ನೀಡಲಿದೆ ಎಂದಿದೆ. ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬರೋಬ್ಬರಿ 50,000 ಕೋಟಿ ರೂಪಾಯಿ ವ್ಯಯಿಸುತ್ತಿದೆ.

ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಸೋಮವಾರ(ಜೂ.07) ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ 50,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹಣಕಾಸು ಸಚಿವಾಲಯ ಮೂಲಗಳು ಹೇಳಿವೆ. 

ಕೇಂದ್ರ ಸರ್ಕಾರದ ಬಳಿಕ ಲಸಿಕೆ ಖರೀದಿಸಲು ಯಾವುದೇ ಹಣದ ಕೊರತೆ ಇಲ್ಲ. ಈಗಾಗಲೇ ಲಸಿಕೆಗಾಗಿ ಹಣ ಮೀಸಲಿಟ್ಟಿದ್ದೇವೆ. ಉತ್ಪಾದನೆಗೂ ಮೊದಲೇ ಅಡ್ವಾನ್ಸ್ ಹಣ ನೀಡುತ್ತಿದ್ದೇವೆ. ಹೀಗಾಗಿ ದೇಶದಲ್ಲಿ ಲಸಿಕೆ ಖರೀದಿ ಮೊತ್ತದ ಗಾತ್ರ ಅದೆಷ್ಟೇ ದೊಡ್ಡದಾದರೂ ಯಾವುದೇ ಸಮಸ್ಯೆ ಇಲ್ಲದೆ ಖರೀದಿಸಲು ಸಾಧ್ಯ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. 

ರಾಜ್ಯಗಳ ಹೊರೆ ತಪ್ಪಿಸಿದ ಪ್ರಧಾನಿ; ಪ್ರಮುಖ 2 ನಿರ್ಧಾರ!...

ಕೇಂದ್ರ ಇತ್ತೀಚೆಗೆ 30 ಕೋಟಿ ವ್ಯಾಕ್ಸಿನ್ ಬುಕ್ ಮಾಡಲು ಅಡ್ವಾನ್ಸ್ 1,500 ಕೋಟಿ ರೂಪಾಯಿ ನೀಡಿದೆ. ಹೀಗಾಗಿ ದೇಶದ ಪ್ರಜೆಗೆ ಲಸಿಕೆ ನೀಡಲು ಕೇಂದ್ರದ ಬಳಿಕ ಹಣವಿದೆ. ಸದ್ಯ ಉತ್ಪಾದನೆ ವೇಗವನ್ನು ಹೆಚ್ಚಿಸಲಾಗಿದೆ. ಹಂತ ಹಂತವಾಗಿ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಉತ್ಪಾದನೆಯಾಗುತ್ತಿದ್ದಂತೆ ಎಲ್ಲಾ ಲಸಿಕೆಗಳನ್ನು ಭಾರತ ಮುಂಗಡ ಹಣ ನೀಡಿ ಖರೀದಿಸುತ್ತಿದೆ. ಮುಂದೆಯೂ ಇದೇ ರೀತಿ ಇರಲಿದೆ ಎಂದಿದೆ.

click me!