Latest Videos

ವಿಪಕ್ಷಗಳ ಮೈತ್ರಿಗೆ INDIA ಹೆಸರು, ನಿತೀಶ್‌ ಕುಮಾರ್‌ ಅಪಸ್ವರ; ಇತ್ತ ಚುನಾವಣಾ ಆಯೋಗಕ್ಕೆ ದಾಖಲಾಯ್ತು ದೂರು!

By Santosh NaikFirst Published Jul 19, 2023, 3:29 PM IST
Highlights

2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎನ್ನುವ ಅರ್ಥ ನೀಡುವಂತೆ ಐಎನ್‌ಡಿಐಎ ಎಂದು ಕರೆದುಕೊಂಡಿದೆ. ಆದರೆ, ಈ ಹೆಸರಿಗೆ ಸ್ವತಃ ಮೈತ್ರಿಕೂಟದ ಪ್ರಮುಖ ನಾಯಕರಾಗಿದ್ದ ನಿತೀಶ್‌ ಕುಮಾರ್‌ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.

ನವದೆಹಲಿ (ಜು.19):  ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧವಾಗಿರುವ ವಿಪಕ್ಷಗಳ ಮೈತ್ರಿಕೂಟಕ್ಕೆ  INDIA (ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟ್‌ ಇನ್‌ಕ್ಲೂಸಿವ್‌ ಅಲಯನ್ಸ್‌)  ಎನ್ನು ಹೆಸರನ್ನು ಇಟ್ಟಿರೋದಕ್ಕೆ ಅಪಸ್ವರ ಎತ್ತಿದ್ದರು ಎಂದು ಮೂಲಗಳು ತಿಳಿಸಿವೆ.  ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ವಿರೋಧ ಪಕ್ಷಗಳು ಹೊಸ ಮೈತ್ರಿಯ ಹೆಸರನ್ನು ಘೋಷಣೆ ಮಾಡಿದ್ದವು. ವಿರೋಧ ಪಕ್ಷದ ಮೈತ್ರಿಯ ಹೆಸರಿನ ಬಗ್ಗೆ ಕಾಂಗ್ರೆಸ್ ಯಾವುದೇ ಚರ್ಚೆ ನಡೆಸಿಲ್ಲ. ತಾನೇ ನಿರ್ಧಾರ ತೆಗೆದುಕೊಂಡು ಘೋಷಣೆ ಮಾಡಿದೆ. ಮೈತ್ರಿ ಕೂಟದ ಹೆಸರು ಬಹಿರಂಗಪಡಿಸಿದಾಗ ನಿತೀಶ್ ಕುಮಾರ್ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಅದಲ್ಲದೆ, ಈ ಮೈತ್ರಿಕೂಟಕ್ಕೆ ಐಎನ್‌ಡಿಐಎ ಎಂದು ಹೆಸರಿಡಲು ಹೇಗೆ ಸಾಧ್ಯ ಎಂದೂ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕರ್ನಾಟಕದಲ್ಲಿ ಗಿರೀಶ್‌ ಭಾರದ್ವಾಜ್‌ ಎನ್ನುವ ವ್ಯಕ್ತಿ, ಮೈತ್ರಿಕೂಟಕ್ಕೆ ಐಎನ್‌ಡಿಐಎ ಎಂದು ಹೆಸಟ್ಟಿರುವ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. '1950 ರ ಲಾಂಛನಗಳು ಮತ್ತು ಹೆಸರುಗಳು (ಅಸಮರ್ಪಕ ಬಳಕೆಯ ತಡೆಗಟ್ಟುವಿಕೆ) ಕಾಯಿದೆ, ಹೆಸರುಗಳು ಮತ್ತು ಲಾಂಛನಗಳ ದುರ್ಬಳಕೆಯನ್ನು ನಿಷೇಧಿಸುತ್ತದೆ.' ಅದಕ್ಕಾಗಿ ಐಎನ್‌ಡಿಐಎ ಹೆಸರಿಗೆ ಅನುಮತಿ ನೀಡಬಾರದು ಎಂದು ಇಸಿಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

"ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಮೈತ್ರಿಯನ್ನು ಹೈಜಾಕ್ ಮಾಡಿರುವ ರೀತಿ ಜೆಡಿಯು ಮತ್ತು ಆರ್ ಜೆಡಿ ನಾಯಕರನ್ನು ಖಂಡಿತವಾಗಿ ಬೆಚ್ಚಿ ಬೀಳಿಸಿದೆ" ಎಂದು ಮೂಲಗಳು ತಿಳಿಸಿವೆ.

ಕಳೆದ ಮಂಗಳವಾರ 26 ವಿರೋಧ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಲ್ಲದೆ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಲಯನ್ಸ್ (ಎನ್‌ಡಿಎ) ಅನ್ನು ಎದುರಿಸುವ ಪ್ರಯತ್ನದಲ್ಲಿ ತನ್ನ ಮೈತ್ರಿಗೆ ಐಎನ್‌ಡಿಐಎ ಹೆಸರನ್ನು ಘೋಷಣೆ ಮಾಡಿತು. ಇಂಗ್ಲೀಷ್‌ನಲ್ಲಿ ಇದು ಇಂಡಿಯಾ ಎನ್ನುವ ಅರ್ಥ ನೀಡುತ್ತದೆ. ಹಿಂದೆ, ಎನ್‌ಡಿಎ ವಿರೋಧಿ ಬಣವನ್ನು ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) ಎಂದು ಕರೆಯಲಾಗುತ್ತಿತ್ತು, ಇದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ 2004 ರಿಂದ 2014 ರವರೆಗೆ ದೇಶವನ್ನು ಆಳಿತ್ತು.

ಮೂಲಗಳ ಪ್ರಕಾರ ಹೊಸ ಮೈತ್ರಿಗೆ ಐಎನ್‌ಡಿಐಎ ಎನ್ನುವ ಹೆಸರನ್ನು ಸೂಚಿಸಿರುವುದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಎನ್ನಲಾಗಿದೆ. ಈ ಹೆಸರಿನ ಕೆಳ ಶೀರ್ಷಿಕೆಯಾಗಿ ಜೀತೇಗಾ ಭಾರತ್‌ (ಗೆಲ್ಲಲಿದೆ ಭಾರತ) ಎನ್ನುವ ಸಾಲನ್ನು ಇಡಲಾಗಿದೆ.

ಇನ್ನೊಂದೆಡೆ ಪ್ರತಿಪಕ್ಷಗಳ ಮೈತ್ರಿಗೆ ನೀಡಿರುವ ಹೊಸ ಹೆಸರಿನಿಂದ ಅವರ ಗುಣಗಳು ಬದಲಾಗಲು 2024ರ ಲೋಕಸಭೆ ಚುನಾವಣೆ ಭಾರತ ಮಾತೆ ವರ್ಸಸ್‌ ಐಎನ್‌ಡಿಐಎ ಆಗಿರಲಿದೆ ಎಂದು ಬಿಜೆಪಿ ಹೇಳಿದೆ.

Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ ಸ್ಪಷ್ಟೀಕರಣ

ಚುನಾವಣಾ ಆಯೋಗಕ್ಕೆ ದೂರು: ಇನ್ನೊಂದೆಡೆ ಕರ್ನಾಟಕದಲ್ಲಿ ಗಿರೀಶ್‌ ಭಾರದ್ವಾಜ್‌ ಎನ್ನುವ ವ್ಯಕ್ತಿ, ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಐಎನ್‌ಡಿಐಎ ಎಂದು ಹೆಸರಿಟ್ಟಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅದಕ್ಕಾಗಿ ಕಾಯಿದೆಯನ್ನೂ ಅವರು ಉಲ್ಲೇಖಿಸಿದ್ದಾರೆ.

ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್‌

ಪಿಎಂ ಸ್ಥಾನಕ್ಕೆ ಶುರುವಾಯ್ತು ಐಎನ್‌ಡಿಐಎ ಫೈಟ್‌: ಇನ್ನೊಂದೆಡೆ ಐಎನ್‌ಡಿಐಎ ಅಲ್ಲಿ ಪ್ರಧಾನಿ ಯಾರಾಗ್ತಾರೆ ಎನ್ನುವ ವಿಚಾರವಾಗಿಯೂ ಚರ್ಚೆ ಆರಂಭವಾಗಿದೆ. ಪ್ರಧಾನಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ ರೇಸ್‌ನಲ್ಲಿಲ್ಲ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದೆ ಶತಾಬ್ದಿ ರಾಯ್‌, ಹಾಗಿದ್ದಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಫೇಸ್‌ ಆಗಿರಬೇಕು ಎನ್ನುವುದು ನಮ್ಮ ಆಸೆ ಎಂದಿದ್ದಾರೆ.

click me!