
ಪಟನಾ (ಜೂನ್ 17, 2023): ಹಿಂದುಸ್ತಾನಿ ಅವಾಮ್ ಮೋರ್ಚಾ ಪಕ್ಷದ ನಾಯಕ ಜೀತನ್ ರಾಮ್ ಮಾಂಝಿ ಮಹಾಮೈತ್ರಿಕೂಟದ ಪಕ್ಷಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದರು. ಈ ಮೂಲಕ ಬಿಜೆಪಿಗೆ ನೆರವು ನೀಡುತ್ತಿದ್ದರು. ಹೀಗಾಗಿಯೇ ಅವರ ಪಕ್ಷವನ್ನು ಜೆಡಿಯುನಲ್ಲಿ ವಿಲೀನ ಮಾಡುವಂತೆ ಸಲಹೆ ನೀಡಿದ್ದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಸಂಪುಟಕ್ಕೆ ಜೀತನ್‌ರಾಮ್ ಪುತ್ರ ಸಂತೋಷ್ ರಾಜೀನಾಮೆ ನೀಡಿದ್ದರು. ಈ ವೇಳೆ ನಿತೀಶ್ ಪಕ್ಷ ವಿಲೀನಕ್ಕೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಪಕ್ಷ ವಿಲೀನದ ಸಲಹೆಯನ್ನು ಒಪ್ಪಿರುವ ನಿತೀಶ್ ಕುಮಾರ್ ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಇದನ್ನು ಓದಿ: 2024 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ: ಜೂನ್ 12ಕ್ಕೆ ಪಟನಾದಲ್ಲಿ ವಿಪಕ್ಷ ನಾಯಕರ ಬೃಹತ್ ‘ಲೋಕ’ಸಭೆ!
ಬಿಹಾರ ಸಿಎಂ ಅರೋಪವೇನು?
ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ (HAMS) ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಅವರು ಬಿಜೆಪಿಗಾಗಿ ಮಹಾಮೈತ್ರಿಕೂಟದ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಪಕ್ಷವನ್ನು ಜನತಾ ದಳ ಯುನೈಟೆಡ್ (ಜೆಡಿಯು) ನೊಂದಿಗೆ ವಿಲೀನಗೊಳಿಸುವ ಅಥವಾ ಆಡಳಿತಾರೂಢ ಮೈತ್ರಿಕೂಟವನ್ನು ತೊರೆಯುವ ಆಯ್ಕೆಯನ್ನು ಮಾಂಝಿಗೆ ನೀಡಿದ್ದೆ ಎಂದು ಬಿಹಾರ ಮುಖ್ಯಮಂತ್ರಿ ಹೇಳಿದ್ದಾರೆ.
“ನಾನು ಮಾಂಝಿ ಅವರ ಪಕ್ಷವನ್ನು ಜೆಡಿಯು ಜೊತೆ ವಿಲೀನಗೊಳಿಸುವಂತೆ ಅಥವಾ ಮೈತ್ರಿಯನ್ನು ತೊರೆಯುವಂತೆ ಕೇಳಿಕೊಂಡಿದ್ದೆ. ಬಿಜೆಪಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಅವರು ಇತ್ತೀಚೆಗೆ ಆ ಪಕ್ಷದ ನಾಯಕರನ್ನು ಭೇಟಿ ಮಾಡಿ ನಮ್ಮ ಬಗ್ಗೆ ಮಾಹಿತಿ ರವಾನಿಸುತ್ತಿದ್ದರು. ಅವರು ವಿಲೀನ ಪ್ರಸ್ತಾಪವನ್ನು ಒಪ್ಪಲಿಲ್ಲ ಮತ್ತು ಮೈತ್ರಿಕೂಟ ತ್ಯಜಿದ್ದಾರೆ. ಅವರು ನಮ್ಮೊಂದಿಗೆ ಇದ್ದಿದ್ದರೆ ಗೂಢಚಾರಿಕೆಯನ್ನು ಮುಂದುವರಿಸುತ್ತಿದ್ದರು ಎಂದೂ ನಿತೀಶ್ ಕುಮಾರ್ ಹೇಳಿದರು.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ
ಜೂನ್ 23 ರಂದು ಪಾಟ್ನಾದಲ್ಲಿ ದೇಶದ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಜೀತನ್ ರಾಮ್ ಮಾಂಝಿ ಬಯಸಿದ್ದರು. ಸಮಾವೇಶದಲ್ಲಿ ಎಲ್ಲ ಪಕ್ಷಗಳು ತಮ್ಮದೇ ನಿಲುವು ಕುರಿತು ಚರ್ಚೆ ನಡೆಸಲಿವೆ. ಅವರು (ಮಾಂಝಿ ಮತ್ತು ಇತರ HAMS ನಾಯಕರು) ನಮ್ಮೊಂದಿಗೆ ಉಳಿದಿದ್ದರೆ ಬಿಜೆಪಿಗೆ ಎಲ್ಲವೂ ಗೊತ್ತಾಗುತ್ತಿತ್ತು’’ ಎಂದೂ ನಿತೀಶ್ ಕುಮಾರ್ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವರಾಗಿದ್ದ ಜೀತನ್ ರಾಮ್ ಮಾಂಝಿ ಅವರ ಪುತ್ರ ಸುಮನ್, ನಿತೀಶ್ ಕುಮಾರ್ ಅವರು ಜೆಡಿಯು ಜೊತೆ ನಮ್ಮ ಪಕ್ಷ ವಿಲೀನಕ್ಕೆ ಒತ್ತಡ ಹೇರುತ್ತಿರುವ ಕಾರಣ ತಮ್ಮ ಪಕ್ಷದ ಉಳಿವಿಗಾಗಿ ಸಂಪುಟದಿಂದ ಹೊರಬಂದಿರುವುದಾಗಿ ಹೇಳಿದ್ದರು.
ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ವಿವಾದ, ವಿಪಕ್ಷಗಳ ಬಹಿಷ್ಕಾರ ನಡುವೆ ಕೇಂದ್ರಕ್ಕೆ ಸಿಎಂ ಪಟ್ನಾಯಕ್ ಬೆಂಬಲ
ಇನ್ನು, ಈ ವರ್ಷಾಂತ್ಯದಲ್ಲಿ ಲೋಕಸಭೆ ಚುನಾವಣೆ ನಡೆಯಬಹುದು ಎಂದು ಈ ವಾರದ ಆರಂಭದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ತಮ್ಮ ಹೇಳಿಕೆಗಳನ್ನು ಸ್ಪಷ್ಟಪಡಿಸಲು ನಿತೀಶ್ ಕುಮಾರ್ ಈ ಸಂದರ್ಭವನ್ನು ಬಳಸಿಕೊಂಡರು. ''ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಕ್ರಿಯೆ ಆರಂಭವಾಗಿದೆ. ಅವರು (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ) ಮುಂಬರುವ ದಿನಗಳಲ್ಲಿ ನಾವು ಒಗ್ಗಟ್ಟಿನ ಚಳವಳಿಯನ್ನು ಪ್ರಾರಂಭಿಸಬಹುದು ಎಂದು ಭಾವಿಸಿದ್ದು, ಅದು ಅವರಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಹಾಗಾಗಿ ಅವರು 2024 ರ ಮೊದಲೇ ಲೋಕಸಭೆ ಚುನಾವಣೆ ನಡೆಸಬಹುದು. ಈ ಸಾಧ್ಯತೆ ಯಾವಾಗಲೂ ಇದೆ ಮತ್ತು ನಾವು ಒಟ್ಟಾಗಿ ಸ್ಪರ್ಧಿಸಿದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ನಾನು ಈಗಾಗಲೇ ಎಲ್ಲಾ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದೂ ನಿತೀಶ್ ಕುಮಾರ್ ಹೇಳಿದರು.
ಸಾರ್ವತ್ರಿಕ ಚುನಾವಣೆಯನ್ನು ಅವಧಿಗಿಂತ ಮೊದಲೇ ನಡೆಸುವುದು ಕೇಂದ್ರ ಸರ್ಕಾರದ ಪರಮಾಧಿಕಾರ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ನಡೆದಿತ್ತು ಎಂದೂ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದರು.
ಇದನ್ನೂ ಓದಿ: ಒಡಿಶಾ ಸಚಿವ ಹತ್ಯೆ ಬೆನ್ನಲ್ಲೇ ಜೆಡಿಯು ನಾಯಕನ ವಾಹನದ ಮೇಲೆ ದಾಳಿ..! ಗಲಭೆಯಲ್ಲಿ ಇಬ್ಬರಿಗೆ ಗಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ