ಪಾಳು ಬಾವಿಗೆ ಬಿದ್ದ ಹಾವನ್ನು ರಕ್ಷಿಸಿದ ಯುವಕ

Published : Mar 30, 2022, 12:57 PM IST
ಪಾಳು ಬಾವಿಗೆ ಬಿದ್ದ ಹಾವನ್ನು ರಕ್ಷಿಸಿದ ಯುವಕ

ಸಾರಾಂಶ

ಪಾಳು ಬಾವಿಗೆ ಬಿದ್ದಿದ್ದ ಬುಸ್‌ಬುಸ್‌ ಹಾವನ್ನು ರಕ್ಷಿಸಿದ ಯುವಕ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಘಟನೆ

ಮಹಾರಾಷ್ಟ್ರ(ಮಾ.30): ಪಾಳು ಬಾವಿಗೆ ಬಿದ್ದಿದ್ದ ಹಾವೊಂದನ್ನು ಯುವಕನೋರ್ವ ರಕ್ಷಣೆ ಮಾಡಿದ್ದಾನೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಬಿದ್ದ ಹಾವನ್ನು ಯುವಕ ರಕ್ಷಣೆ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ಹುಕ್ ಅಥವಾ ಕೊಕ್ಕೆ ಇರುವಂತಹ ಕಬ್ಬಿಣದ ರಾಡೊಂದನ್ನು ತೆಗೆದುಕೊಂಡು ಅದರಲ್ಲಿ ಹಾವು ಸಿಲುಕುವಂತೆ ಮಾಡುತ್ತಾನೆ. ನಂತರ ನಿಧಾನಕ್ಕೆ ಆ ಸರಳನ್ನು ಮೇಲಕ್ಕೆ ಎಳೆಯುತ್ತಾನೆ. ಹೀಗೆ ಹಾವು ಮೇಲೆ ಬಂದಿದೆ. ಬಳಿಕ ಆತ ನಿಧಾನವಾಗಿ ಹಾವನ್ನು ಕಪ್ಪು ಬಣ್ಣದ ಚೀಲದೊಳಗೆ ಸೇರಿಕೊಳ್ಳುವಂತೆ ಮಾಡುತ್ತಾನೆ. ಹಾವು ಚೀಲದೊಳಗೆ ಸೇರುತ್ತಿದ್ದಂತೆ ಆತ ಚೀಲದ ಬಾಯನ್ನು ಕಟ್ಟುತ್ತಾನೆ. ಸುತ್ತಲಿದ್ದವರು ಈ ಭಯಾನಕ ದೃಶ್ಯವನ್ನು ಕುತೂಹಲದಿಂದ ಗಮನಿಸುತ್ತಿರುವುದ ವಿಡಿಯೋದಲ್ಲಿ ಕಾಣಿಸುತ್ತಿದೆ.

ಎರಡು ನಿಮಿಷ ಹದಿನಾರು ಸೆಕೆಂಡುಗಳ ಈ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. "ಸರ್ಕಾರೇತರ ವನ್ಯಜೀವಿ ಸಂಶೋಧನಾ ಸಂಸ್ಥೆಯ ಸ್ವಯಂಸೇವಕರು  ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಪಾಳು ಬಿದ್ದ ಬಾವಿಯಿಂದ ಹೆಚ್ಚು ವಿಷಕಾರಿಯಾದ ಭಾರತೀಯ ಕನ್ನಡಕ ನಾಗರ  ಹಾವನ್ನು ರಕ್ಷಿಸಿದ್ದಾರೆ ಎಂದು ಬರೆದು ಟ್ವೀಟ್‌ ಮಾಡಲಾಗಿದೆ. 

ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್..

ಕೆಲದಿನಗಳ ಹಿಂದಷ್ಟೇ ಸಿರಸಿಯ ಯುವಕನೋರ್ವ ಮೂರು ಹಾವುಗಳೊಂದಿಗೆ ಸರಸವಾಡಲು ಹೋಗಿ ಆಸ್ಪತ್ರೆ ಸೇರಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯುವಕನೋರ್ವ ಮೂರು ಹಾವುಗಳೊಂದಿಗೆ ಏಕಕಾಲಕ್ಕೆ ಸರಸವಾಡಲು ಹೋಗಿ ಒಂದು ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ್ದಾನೆ. ಹಾವುಗಳ ಬಗ್ಗೆ ಆಸಕ್ತಿ ಹೊಂದಿರುವ ಶಿರಸಿ ಯುವಕ ಮಾಜ್‌ ಸಯೀದ್‌ (Maaz Sayed) ಎಂಬಾತನೇ ಹೀಗೇ ಹಾವುಗಳೊಂದಿಗೆ ಸರಸವಾಡಲು ಹೋಗಿ ಕಚ್ಚಿಸಿಕೊಂಡ ಯುವಕ. ವಿಡಿಯೋದಲ್ಲಿ ಈತ ಮೂರು ಹೆಡೆ ಎತ್ತಿ ನಿಂತಿರುವ ನಾಗರಹಾವುಗಳ ಮುಂದೆ ಕುಳಿತು ಮೆಲ್ಲ ಮೆಲ್ಲನೇ ಅವುಗಳನ್ನು ಮುಟ್ಟಲು ಅವುಗಳ ಬಾಲವನ್ನು ಎಳೆಯಲು ಆರಂಭಿಸಿದ್ದಾನೆ. ಅಲ್ಲದೇ ಅವುಗಳ ಮುಂದೆ ತನ್ನ ಕೈಗಳನ್ನು ಹಾಗೂ ಕಾಲುಗಳನ್ನು ಹೆಡೆ ಆಡಿಸಿದಂತೆ ಆಡಿಸಿದ್ದಾನೆ. ಈ ವೇಳೆ ಭಯಗೊಂಡ ಹಾವೊಂದು ಆತನ ಮೊಣಕಾಲಿಗೆ ಕಚ್ಚಿದೆ.

ಚಾರಣ ಹೊರಟವರಿಗೆ ಶಾಕ್‌ ನೀಡಿದ ಸ್ನೇಕ್‌

ಹಾವಿನಿಂದ ಕಚ್ಚಿಸಿಕೊಂಡ ಈ ಸೈಯದ್‌ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಇಂತಹದ್ದೇ ದೃಶ್ಯಗಳಿರುವ ವಿಡಿಯೋಗಳೇ ತುಂಬಿವೆ. ಅಂದರೆ ಈತ ಈ ಹಿಂದೆಯೂ ಇಂತಹ ಹುಚ್ಚು ಸಾಹಸ ಮಾಡಿ ಯಶಸ್ವಿಯಾಗಿದ್ದಾನೆ. ಆದರೆ ಈ ಬಾರಿ ಆತನ ಗ್ರಹಚಾರ ಕೆಟ್ಟಿತ್ತೇನೋ. ಹಾವು ಚಂಗನೇ ಮೇಲೇರಿ ಈತನಿಗೆ ಕಚ್ಚಿದೆ. ಈ ವೇಳೆ ಕುಳಿತಿದ್ದ ಆತನೂ ಒಮ್ಮೆಲೆ ಮೇಲೇರಿದ್ದು, ಕಚ್ಚಿದ  ಹಾವನ್ನು ತನ್ನ ಕೈಯಿಂದ ಎಳೆಯುತ್ತಾನೆ. ಆದರೆ ಅದು ಗಟ್ಟಿಯಾಗಿ ಕಚ್ಚಿ ಹಿಡಿದಿತ್ತು.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ (susanta Nanda) ಹಾವು ಹಿಡಿಯುವವರನ್ನು ಟೀಕಿಸಿದ್ದಾರೆ. 'ಇದು ನಾಗರಹಾವುಗಳನ್ನು ನಿಭಾಯಿಸುವ ಭಯಾನಕ ವಿಧಾನವಾಗಿದೆ. ಹಾವು ಚಲನೆಯನ್ನು ಬೆದರಿಕೆ ಎಂದು ಪರಿಗಣಿಸುತ್ತದೆ ಮತ್ತು ಚಲನೆಯನ್ನು ಅನುಸರಿಸುತ್ತದೆ. ಕೆಲವೊಮ್ಮೆ, ಪ್ರತಿಕ್ರಿಯೆಯು ಮಾರಕವಾಗಬಹುದು ಎಂದು ಅವರು ಬರೆದಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ