ವಿಶ್ವದ ಗರ್ಭಿಣಿಯರಿಗೆ ಬಂಪರ್‌ ಆಫರ್‌, ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದ ನಿತ್ಯಾನಂದ!

By Santosh NaikFirst Published Oct 8, 2022, 1:21 PM IST
Highlights

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ವಿಶ್ವದ ಮಹಿಳೆಯರಿಗೆ ಆಫರ್‌ ನೀಡಿದ್ದು, ವಿಶ್ವದ ಯಾವುದೇ ದೇಶದಲ್ಲಿ ಬೇಕಾದ್ರೂ ಗರ್ಭಿಣಿಯಾಗಿರಿ, ಹೆರಿಗೆಗೆ ಮಾತ್ರ ಕೈಲಾಸಕ್ಕೆ ಬನ್ನಿ ಎಂದು ಹೇಳಿದ್ದಾರೆ. ಕೈಲಾಸಕ್ಕೆ ಬಂದರೆ ವಿಶೇಷವಾದ ಆಫರ್‌ ಕೂಡ ಇದೆ ಎಂದು ಹೇಳಿದ್ದಾರೆ.
 

ಬೆಂಗಳೂರು (ಅ.8): ಸ್ವಯಂಘೋಷಿತ ದೇವಮಾನವ ಹಾಗೂ ಅತ್ಯಾಚಾರದ ಆರೋಪ ಹೊತ್ತುಕೊಂಡಿರುವ ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ವಿಶ್ವದ ಗರ್ಭಿಣಿಯರಿಗೆ ವಿಶೇಷವಾದ ಆಫರ್‌ ನೀಡಿದ್ದಾರೆ. ನೀವು ವಿಶ್ವದ ಯಾವುದೇ ದೇಶದಲ್ಲಿ ಗರ್ಭಿಣಿಯಾಗಿರಿ, ಆದರೆ ಹೆರಿಗೆಗಾಗಿ ಕೈಲಾಸಕ್ಕೆ ಬನ್ನಿ ಎನ್ನುವ ಆಫರ್‌ ನೀಡಿದ್ದಾರೆ. ಕೈಲಾಸಕ್ಕೆ ಬಂದು ಹೆರಿಗೆ ಮಾಡಿಸಿಕೊಂಡಲ್ಲಿ, ವಿಶೇಷವಾದ ಡಿಎನ್‌ಎ ನಿಮ್ಮ ಮಗುವಿಗೆ ಪ್ರಾಪ್ತವಾಗಲಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ವಿಜಯದಶಮಿ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದಕ್ಕೂ ಮುನ್ನ ಹಾಕಿರುವ ವಿಡಿಯೋದಲ್ಲಿ ವಿಶ್ವದ ಎಲ್ಲಾ ಮಹಿಳೆಯರಿಗೆ ಅವರು ಈ ವಿಶೇಷ ಅಫರ್‌ ಕೊಟ್ಟಿದ್ದಾರೆ. ಪ್ರಸ್ತುತ ನೀವು ಯಾವುದೇ ದೇಶದಲ್ಲಿರಿ, ಆದರೆ, ಹೆರಿಗೆಗಾಗಿ ಮಾತ್ರ ಕೈಲಾಸಕ್ಕೆ ಬರಬೇಕು ಎಂದಿರುವ ನಿತ್ಯಾನಂದ, ಹುಟ್ಟುವ ಮಗವಿಗೆ ವಿಶ್ವದಲ್ಲಿ ಎಲ್ಲಿಯೂ ಇರದಂಥ ಅತ್ಯಂತ ಪ್ರಬುದ್ಧ ಎನಿಸಿಕೊಂಡಿರುವ ಮಹಾಶಕ್ತಿಶಾಲಿ ಡಿಎನ್‌ಎಅನ್ನು ದಯಪಾಲಿಸುವುದು ಘಂಟಾಘೋಷವಾಗಿ ಹೇಳಿದ್ದಾರೆ. ಆದರೆ, ಈ ಆಫರ್‌ ಕೈಲಾಸದಲ್ಲಿ ಹೆರಿಗೆಯಾಗುವ ಮಗುವಿಗೆ ಮಾತ್ರವೇ ಸೀಮಿತ ಎಂದಿದ್ದಾರೆ.  ಈ ಬಗ್ಗೆ ವಿಡಿಯೋ ತುಣುಕನ್ನೂ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ.

ಡಿಎನ್‌ಎ (DNA) ಜೋಡಿಸುವ ಸಲುವಾಗಿಯೇ ಇಡೀ ಬ್ರಹ್ಮಾಂಡಕ್ಕೆಂದು (Universe) ಮೀಸಲಾಗಿರುವ ಪರ್ಮನೆಂಟ್‌ ಕಾಸ್ಮಿಕ್‌ ಏರ್‌ ಪೋರ್ಟ್‌ ಹಾಗೂ ಮಹಾ ಶಕ್ತಿಶಾಲಿಯಾದ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್ಎ ಅನ್ನು ಜೋಡಿಸಲಾಗುತ್ತದೆ. ಅದರೊಂದಿಗೆ ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡುತ್ತೇನೆ ಎಂದಿದ್ದಾರೆ. ಆದದ್ದರಿಂದ ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿದ್ದರೂ (Women) ಸಹ, ಡೆಲಿವರಿಗಾಗಿ ನೀವು ಕೈಲಾಸವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.

ಸೂರ್ಯನನ್ನೇ ತಡೆದಿದ್ದೇ ಎಂದಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ!

ನಿತ್ಯಾನಂದನ ಸತ್ಸಂಗ ವೀಕ್ಷಿಸಿದ 4.5 ಸಾವಿರ ಮಂದಿ: ಇನ್ನು ಟ್ವಿಟರ್‌ನಲ್ಲಿ ನಿತ್ಯಾನಂದನ ವಿಜಯದಶಮಿಯ (Satsang Vijaya Dashami) ಸತ್ಸಂಗದ ವಿಡಿಯೋ ಪ್ರಕಟವಾಗಿದೆ. ಇದರಲ್ಲಿ ಅಂದಾಜು ಒಂದು ಘಂಟೆ ಭಾಷಣ ಮಾಡಿರುವ ನಿತ್ಯಾನಂದ, ಇಲ್ಲಸಲ್ಲದ ವಿಚಾರಗಳ ಬಗ್ಗೆ, ನೆರೆದಿರುವ ಅತಿಥಿಗಳ ಬಗ್ಗೆ ಮಾತನಾಡಿದ್ದಾರೆ. ಉಗಾಂಡದ ರಾಣಿ, ಈಕ್ವಡಾರ್‌ನ ರಾಜ ಕಾರ್ಯಕ್ರಮದಲ್ಲಿದ್ದು ಅವರಿಗೆ ಸ್ವಾಗತ ಮಾಡುವುದಾಗಿ ಹೇಳಿದ್ದಾನೆ. ಆದರೆ, ಎಲ್ಲಿಯೂ ಅವರ ಮುಖ ಪರಿಚಯ ಮಾಡಿಲ್ಲ.

Nithyananda Life in Danger: ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯ ಪಡೀತಾರಾ ಸ್ವಯಂಘೋಷಿತ ದೇವಮಾನವ..?

ನನ್ನಷ್ಟು ಪುಸ್ತಕ ಯಾರೂ ಬರೆದಿಲ್ಲ: ಸತ್ಸಂಗದ ಆರಂಭದಲ್ಲಿ ಮಾತನಾಡುವ ನಿತ್ಯಾನಂದ ನಾನು ಈವರೆಗೂ 1123 ಪುಸ್ತಕಗಳನ್ನು ಬರೆದಿದ್ದೇನೆ. ಎಲ್ಲವೂ ಕೈಲಾಸ ಪಬ್ಲಿಕೇಷನ್‌ನಿಂದಲೇ ಪ್ರಕಟವಾಗಿದೆ. ಇದೊಂದು ದಾಖಲೆ. ವಿಶ್ವದ ಯಾವುದೇ ವ್ಯಕ್ತಿ ಕೂಡ ಇಷ್ಟು ಪುಸ್ತಕಗಳನ್ನು ಬರೆದಿಲ್ಲ ಎಂದು ಹೆಮ್ಮೆಯಿಂದ ಮಾತನಾಡಿದ್ದಾನೆ. ತನ್ನ ಎಲ್ಲಾ ಪುಸಕ್ತಗಳ ಐದು ಕಾಪಿಗಳನ್ನು ನಮ್ಮ ಮ್ಯೂಸಿಯಂನಲ್ಲಿ ಇಡಲಾಗಿದೆ. ಇದನ್ನು ಶಿವನ ಆಜ್ಞೆಯ ಮೇರೆಗೆ, ಕೈಲಾಸದಿಂದ ಬಂದ ನೇರ ಸಂದೇಶದ ಆಧಾರದಲ್ಲಿ ಇಡಲಾಗಿದೆ ಎಂದು ಹೇಳಿದ್ದಾರೆ.

click me!