ಮತ್ತೆ ನಿರ್ಭಯಾ ದೋಷಿ ಪೀಕಲಾಟ, ರಾಷ್ಟ್ರಪತಿ ವಿರುದ್ಧ ಸುಪ್ರೀಂಗೆ ಅರ್ಜಿ!

By Suvarna News  |  First Published Feb 12, 2020, 10:48 AM IST

ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು| ಕ್ಷಮಾದಾನ ತಿರಸ್ಕಾರ ಪ್ರಶ್ನಿಸಿ ವಿನಯ್‌ ಶರ್ಮಾ ಮತ್ತೆ ಸುಪ್ರೀಂಗೆ ಅರ್ಜಿ


ನವದೆಹಲಿ[ಫೆ.12]: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿಗಳ ಪೈಕಿ ಒಬ್ಬನಾದ ವಿನಯ್‌ ಶರ್ಮಾ, ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾನೆ.

ವಕೀಲ ಎ.ಪಿ.ಸಿಂಗ್‌ ಮೂಲಕ ಅರ್ಜಿ ಸಲ್ಲಿಸಿರುವ ಶರ್ಮಾ, ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಫೆ.1ರಂದು ವಿನಯ್‌ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

Latest Videos

undefined

ವಾರದ ಗಡುವು: ನಿರ್ಭಯಾ ಹಂತಕರ ಹೊಸ ಡೆತ್‌ವಾರಂಟ್‌ಗೆ ಅರ್ಜಿ!

ಇದೇ ವೇಳೆ ಇನ್ನೊಬ್ಬ ಆರೋಪಿ ಪವನ್‌ ಗುಪ್ತಾ ಇದುವರೆಗೂ ಸುಪ್ರೀಂಕೋರ್ಟ್‌ನಲ್ಲಿ ಕ್ಯುರೇಟಿವ್‌ ಅರ್ಜಿಯನ್ನು ದಾಖಲಿಸಿಲ್ಲ. ಕ್ಯುರೇಟಿವ್‌ ಅರ್ಜಿ ತಿರಸ್ಕೃತಗೊಂಡ ಬಳಿಕ ಆತನಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!