ದೇಶವ್ಯಾಪಿ ಎನ್‌ಪಿಆರ್‌, ಪಟ್ಟಿಯಲ್ಲಿ ರಾಷ್ಟ್ರಪತಿ ಕೋವಿಂದ್ ಹೆಸರು ಫಸ್ಟ್?

By Kannadaprabha NewsFirst Published Feb 12, 2020, 10:06 AM IST
Highlights

ದೇಶವ್ಯಾಪಿ ಎನ್‌ಪಿಆರ್‌ ಪಟ್ಟಿಯಲ್ಲಿ ಮೊದಲ ಹೆಸರು ರಾಷ್ಟ್ರಪತಿಯದ್ದು?| ಈ ಕ್ರಮದಿಂದ ದೇಶದ ಜನರಲ್ಲಿ ಸುರಕ್ಷತೆಯ ಸಂದೇಶ ರವಾನೆ

ನವದೆಹಲಿ[ಫೆ.12]: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಹೊತ್ತಿನಲ್ಲೇ, ಏ.1ರಿಂದ ದೇಶವ್ಯಾಪಿ ಎನ್‌ಪಿಆರ್‌ ಜಾರಿಗೆ ಕೇಂದ್ರ ಸರ್ಕಾರ ಸಜ್ಜಾಗಿದೆ.

ಈ ನಡುವೆ ಎನ್‌ಪಿಆರ್‌ ಕುರಿತು ಜನರಿಗೆ ಇರುವ ಗೊಂದಲ, ಆತಂಕ ನಿವಾರಿಸುವ ನಿಟ್ಟಿನಲ್ಲಿ, ಎನ್‌ಪಿಆರ್‌ನಲ್ಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರೇ ಮೊದಲಿಗೆ ತಮ್ಮ ಹೆಸರು ಸೇರ್ಪಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಬಳಸಿದ್ದ ಪದ ರಾಜ್ಯಸಭೆ ಕಡತದಿಂದ ಔಟ್!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಹೆಸರು ಹೇಳಿಕೊಳ್ಳಲಿಚ್ಚಿಸದ ಅಧಿಕಾರಿಯೊಬ್ಬರು, ‘ಯಾವುದೇ ಯೋಜನೆಗಳಲ್ಲಿ ರಾಷ್ಟ್ರಪತಿಗಳ ಹೆಸರು ಮೊದಲಿಗೆ ನೋಂದಾಯಿಸುವುದು ಹೊಸ ಪ್ರಕ್ರಿಯೆಯೇನಲ್ಲ. ಅದರಲ್ಲೂ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿರುವ ಎನ್‌ಪಿಆರ್‌ ಪಟ್ಟಿಯಲ್ಲಿ ರಾಷ್ಟ್ರಪತಿಗಳ ಹೆಸರನ್ನು ಪ್ರಪ್ರಥಮ ಸ್ಥಾನದಲ್ಲಿ ನೋಂದಾಯಿಸಿಕೊಳ್ಳುವುದರಿಂದ ದೇಶದ ಜನರಲ್ಲಿ ಸುರಕ್ಷತೆಯ ಸ್ಪಷ್ಟ ಸಂದೇಶ ರವಾನೆಯಾಗಲಿದೆ’ ಎಂದಿದ್ದಾರೆ.

ಏತನ್ಮಧ್ಯೆ, ಎನ್‌ಪಿಆರ್‌ ಪ್ರಕ್ರಿಯೆ ಜಾರಿಯ ದಿನಾಂಕ ನಿಗದಿಗಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಅನಿವಾರ್ಯತೆಯಿಲ್ಲ ಎಂದು ಕೇಂದ್ರ ಕಾನೂನು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಪ್ರಶಾಂತ್‌ ಕಿಶೋರ್‌ ಪಕ್ಷ ತೊರೆಯಲು ಸ್ವತಂತ್ರರು: ಪಕ್ಷ ಗೆಲ್ಲಿಸಿದ ನಾಯಕನಿಗೆ ಗೇಟ್‌ಪಾಸ್?

click me!