ಕೊರೋನಾ ಸೋಂಕು ತೀವ್ರ: 4 ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ!

By Suvarna NewsFirst Published Mar 7, 2021, 8:20 AM IST
Highlights

 ಕಳೆದ ಕೆಲ ದಿನ​ಗ​ಳಿಂದ ಪಂಜಾ​ಬ್‌​ನ ಹಲವು ನಗ​ರ​ಗ​ಳಲ್ಲಿ ಕೊರೋನಾ ಸೋಂಕು ಹೆಚ್ಚಳ| 4 ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ| ಜಿಲ್ಲಾ​ದ್ಯಂತ ಶನಿ​ವಾರದಿಂದಲೇ ರಾತ್ರಿ 11 ಗಂಟೆ​ಯಿಂದ ಬೆಳ​ಗಿನ ಜಾವ 5 ಗಂಟೆ​ವ​ರೆಗೆ ನಿರ್ಬಂಧ

ಚಂಡೀ​ಗ​ಢ(ಮಾ.07): ಕಳೆದ ಕೆಲ ದಿನ​ಗ​ಳಿಂದ ಪಂಜಾ​ಬ್‌​ನ ಹಲವು ನಗ​ರ​ಗ​ಳಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ಜಲಂಧರ್‌, ಎಸ್‌​ಬಿ​ಎಸ್‌ ನಗರ, ಹೋಶಿ​ಯಾ​ರ್‌​ಪುರ ಹಾಗೂ ಕಪೂರ್ತಲಾ ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡ​ಲಾ​ಗಿದೆ.

ಜಿಲ್ಲಾ​ದ್ಯಂತ ಶನಿ​ವಾರದಿಂದಲೇ ರಾತ್ರಿ 11 ಗಂಟೆ​ಯಿಂದ ಬೆಳ​ಗಿನ ಜಾವ 5 ಗಂಟೆ​ವ​ರೆಗೆ ರಾತ್ರಿ ಕರ್ಫ್ಯೂ ಜಾರಿ​ಯ​ಲ್ಲಿ​ರ​ಲಿದೆ. ಆದಾಗ್ಯೂ ಕೆಲ ಕೈಗಾ​ರಿ​ಕೆ​ಗ​ಳ ಕಾರ್ಮಿ​ಕರು, ವೈದ್ಯ​ಕೀಯ ತುರ್ತು ಪರಿ​ಸ್ಥಿತಿ, ಬಸ್ಸು, ರೈಲು ಮತ್ತು ವಿಮಾ​ನ​ಗ​ಳಲ್ಲಿ ರಾತ್ರಿ ಆಗ​ಮಿ​ಸುವ ಪ್ರಯಾ​ಣಿ​ಕ​ರಿಗೆ ರಾತ್ರಿ ಕರ್ಫ್ಯೂ ನೀತಿ​ಯಿಂದ ವಿನಾಯ್ತಿ ನೀಡ​ಲಾ​ಗಿದೆ ಎಂದು ಪಂಜಾಬ್‌ ಮುಖ್ಯ ಕಾರ್ಯ​ದರ್ಶಿ ವಿನಿ ಮಹಾ​ಜನ್‌ ಟ್ವೀಟ್‌ ಮಾಡಿ​ದ್ದಾರೆ.

To effectively manage 2nd wave of & to break the chain of transmission, a high level meeting was chaired by , wherein the DCs, Police Chiefs and key officers of other stakeholder departments like health and medical education were present.https://t.co/TPAdZkRq9b

— Government of Punjab (@PunjabGovtIndia)

ಪಂಜಾಬ್‌ ಮುಖ್ಯ ಕಾರ್ಯ​ದರ್ಶಿ ವಿನಿ ಮಹಾ​ಜನ್‌ ಹಾಗೂ ಪೊಲೀಸ್‌ ಮಹಾ ನಿರ್ದೇ​ಶಕ ದಿನ್‌​ಕರ್‌ ಗುಪ್ತಾ ನೇತೃ​ತ್ವ​ದಲ್ಲಿ ಶನಿ​ವಾರ ವಿಡಿಯೋ ಕಾನ್ಫ​ರೆನ್ಸ್‌ ಮೂಲಕ ನಡೆದ ಸಭೆ​ಯಲ್ಲಿ ಈ ಕ್ರಮ ಕೈಗೊ​ಳ್ಳ​ಲಾ​ಗಿ​ದೆ.

click me!