ನಟ ಮಿಥುನ್‌ ಚಕ್ರವರ್ತಿ ಇಂದು ಬಿಜೆಪಿ ಸೇರ್ಪಡೆ?

Published : Mar 07, 2021, 07:59 AM IST
ನಟ ಮಿಥುನ್‌ ಚಕ್ರವರ್ತಿ ಇಂದು ಬಿಜೆಪಿ ಸೇರ್ಪಡೆ?

ಸಾರಾಂಶ

ವಿಧಾನಸಭಾ ಚುನಾವಣೆ ಹಿನ್ನೆಲೆ| ನಟ ಮಿಥುನ್‌ ಚಕ್ರವರ್ತಿ ಇಂದು ಬಿಜೆಪಿ ಸೇರ್ಪಡೆ?| ಮೋದಿ ರಾರ‍ಯಲಿಯಲ್ಲಿ ಭಾಗಿ ಸಾಧ್ಯತೆ

ಕೋಲ್ಕತಾ(ಮಾ.07): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಚುನಾವಣಾ ರಾರ‍ಯಲಿ ನಡೆಸಲಿದ್ದಾರೆ. ಈ ವೇಳೆ ನಟ, ಟಿಎಂಸಿ ಮಾಜಿ ರಾಜ್ಯಸಭಾ ಸದಸ್ಯ ಮಿಥುನ್‌ ಚಕ್ರವರ್ತಿ ಅವರು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ಇದೇ ವೇದಿಕೆಯಲ್ಲೇ ಬಿಜೆಪಿಗೆ ಸೇರ್ಪಡೆಯಾಗಬಹುದು ಅಥವಾ ಪಕ್ಷದ ಪರ ಪ್ರಚಾರ ಕೈಗೊಳ್ಳಬಹುದು ಎಂಬ ಗುಸುಗುಸು ಕೂಡ ದಟ್ಟವಾಗಿದೆ. ಈ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದ ಪಕ್ಷದ ರಾಜ್ಯ ಪ್ರಭಾರಿ ಕೈಲಾಶ್‌ ವಿಜಯವರ್ಗೀಯ, ‘ಮಿಥುನ್‌ ಚಕ್ರವರ್ತಿ ಬಂದರೆ ಬರಲಿ.. ಅವರಿಗೆ ಸ್ವಾಗತವಿದೆ’ ಎಂದರು. ‘ಮುಂದೇನಾಗುತ್ತೋ ಕಾದು ನೋಡಿ’ ಎಂದು ಇನ್ನೊಬ್ಬ ಬಿಜೆಪಿ ನಾಯಕ, ಗೂಢಾರ್ಥದಲ್ಲಿ ನುಡಿದರು.

ಫೆ.16ರಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಿಥುನ್‌ ಚಕ್ರವರ್ತಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಮಿಥುನ್‌ ಅವರ ರಾಜಕೀಯ ಸೇರ್ಪಡೆ ಬಗ್ಗೆ ವದಂತಿಗಳು ಹರಿದಾಡುತ್ತಿವೆ.

70 ವರ್ಷದ ನಟ ಮಿಥುನ್‌ ಚಕ್ರವರ್ತಿ ಅವರು ರಾಜ್ಯದಲ್ಲಿ ಸಾಕಷ್ಟುಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿಂದೆ ಸಿಪಿಎಂಗೆ ಆಪ್ತರಾಗಿದ್ದ ಮಿಥುನ್‌, ಕೆಲಕಾಲ ಟಿಎಂಸಿ ಸಂಸದರಾಗಿ ಶಾರದಾ ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು