ಎಲ್‌ಇಟಿ ಉಗ್ರ ಕೃತ್ಯಗಳಿಗೆ ಡ್ರಗ್ಸ್‌ ಹಣ! NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

By BK Ashwin  |  First Published Feb 21, 2023, 11:52 AM IST

ಈ ಅಪರಾಧದ ಬಗ್ಗೆ ಮತ್ತಷ್ಟು ತನಿಖೆ ನಡೆಸಿದ ಸಂದರ್ಭದಲ್ಲಿ ಹಾಗೂ ಆರೋಪಿಗಳ ಲಿಂಕ್‌ಗಳನ್ನು ತನಿಖೆ ಮಾಡಿದ ಬಳಿಕ ಮಾದಕವಸ್ತು ತುಂಬಿದ ಸರಕುಗಳ ಆಮದು, ಸುಗಮಗೊಳಿಸುವಿಕೆ ಮತ್ತು ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳ ಪ್ರಮುಖ ಜಾಲ ಬಹಿರಂಗಗೊಂಡಿದೆ ಎಂದು ತಿಳಿದುಬಂದಿದೆ.


ನವದೆಹಲಿ (ಫೆಬ್ರವರಿ 21, 2023): ಗುಜರಾತಿನ ಮುಂದ್ರಾ ಬಂದರಿನಲ್ಲಿ ಮಾದಕವಸ್ತು ಸೀಜ್‌ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಎರಡನೇ ಆರೋಪಪಟ್ಟಿ ಸಲ್ಲಿಸಿದೆ. ಸೀಜ್‌ ಮಾಡಿದ ಸರಕುಗಳು ಇರಾನ್‌ನ ಬಂದರ್ ಅಬ್ಬಾಸ್ ಮೂಲಕ ಅಫ್ಘಾನಿಸ್ತಾನದಿಂದ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ, ಗುಜರಾತ್‌ನ ಗಾಂಧಿಧಾಮ್‌ನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಿಭಾಗ ಈ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ನಂತರ ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ಬಳಿಕ, ಅಕ್ಟೋಬರ್ 6, 2021 ರಂದು ಎನ್‌ಐಎ ಈ ಕೇಸ್‌ ಅನ್ನು ದಾಖಲಿಸಿಕೊಂಡಿತ್ತು ಎಂದು ವರದಿಯಾಗಿದೆ. ಹಾಗೆ, ಎನ್‌ಐಎ ಮಾರ್ಚ್ 14, 2022 ರಂದು 16 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತ್ತು ಮತ್ತು ಆಗಸ್ಟ್ 28, 2022 ರಂದು 9 ಆರೋಪಿಗಳ ವಿರುದ್ಧ ಮೊದಲ ಪೂರಕ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ.

Tap to resize

Latest Videos

ಇದನ್ನು ಓದಿ: ಸ್ಮಾರ್ಟ್ ವಾಚ್ ನಲ್ಲೂ ಡ್ರಗ್ಸ್, ಮಣಿಪಾಲ ಮಾಹೆ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ

ಮತ್ತೆ, ಸೋಮವಾರ ಎನ್‌ಐಎ ಐಪಿಸಿಯ ಸೆಕ್ಷನ್ 120ಬಿ, ಎನ್‌ಡಿಪಿಎಸ್ ಕಾಯ್ದೆ 1985ರ ಸೆಕ್ಷನ್ 8(ಸಿ), 21(ಸಿ), 23(ಸಿ), 29 ಅಡಿಯಲ್ಲಿ ಮತ್ತು UA(P) ಕಾಯಿದೆ, 1967 ರ ಸೆಕ್ಷನ್ 17, 18 ಹಾಗೂ 22C ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಗುಜರಾತ್‌ನ ಅಹಮದಾಬಾದ್‌ನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ 2ನೇ ಅಥವಾ ಪೂರಕ ಆರೋಪಪಟ್ಟಿ ಸಲ್ಲಿಸಿದೆ.   ಪ್ರಕರಣದ ಹೆಚ್ಚಿನ ತನಿಖೆಯ ಸಂದರ್ಭದಲ್ಲಿ, ಆರೋಪಿಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಮೂಲಕ ಹೆರಾಯಿನ್ ಅಕ್ರಮ ಸಾಗಣೆಗೆ ಸಂಘಟಿತ ಕ್ರಿಮಿನಲ್ ಸಂಚು ಇರುವುದು ಕಂಡುಬಂದಿದೆ.

ಈ ಅಪರಾಧದ ಬಗ್ಗೆ ಮತ್ತಷ್ಟು ತನಿಖೆ ನಡೆಸಿದ ಸಂದರ್ಭದಲ್ಲಿ ಹಾಗೂ ಆರೋಪಿಗಳ ಲಿಂಕ್‌ಗಳನ್ನು ತನಿಖೆ ಮಾಡಿದ ಬಳಿಕ ಮಾದಕವಸ್ತು ತುಂಬಿದ ಸರಕುಗಳ ಆಮದು, ಸುಗಮಗೊಳಿಸುವಿಕೆ ಮತ್ತು ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳ ಪ್ರಮುಖ ಜಾಲ ಬಹಿರಂಗಗೊಂಡಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಅನೇಕ ಆರೋಪಿಗಳ ಮೂಲಕ ಭಾರತದಲ್ಲಿ ಆರಂಭವಾಗಿರುವ ಹಲವು ನಕಲಿ/ಶೆಲ್ ಆಮದು ಮಾಲೀಕತ್ವದ ಸಂಸ್ಥೆಗಳ ಮೂಲಕ ಸರಕುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಅಂಶವೂ ಬಹಿರಂಗಗೊಂಡಿದೆ.

ಇದನ್ನೂ ಓದಿ: ಬೆಂಗಳೂರು: ಮನೆ ಬಾಗಿಲಿಗೇ ಡ್ರಗ್ಸ್ ಡೆಲಿವರಿ: 3 ಝೋಮ್ಯಾಟೋ ಬಾಯ್ಸ್ ಸೆರೆ

ಪ್ರಧಾನ ಆರೋಪಿ ಹರ್‌ಪ್ರೀತ್ ಸಿಂಗ್ ತಲ್ವಾರ್ ಅಲಿಯಾಸ್ ಕಬೀರ್ ತಲ್ವಾರ್ ಅನೇಕ ಸಂದರ್ಭಗಳಲ್ಲಿ ದುಬೈ, ಯುಎಇಗೆ ಭೇಟಿ ನೀಡಿದ್ದರು. ಮತ್ತು ವಾಣಿಜ್ಯ ಪ್ರಮಾಣದಲ್ಲಿ ಹೆರಾಯಿನ್ ಅನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಸಲುವಾಗಿ ಆಮದು ಮಾಡಿಕೊಳ್ಳುವ ವಾಣಿಜ್ಯ ಸಮುದ್ರ ಮಾರ್ಗವನ್ನು ಬಳಸಿಕೊಳ್ಳುವ ಪಿತೂರಿಯಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸಿದ್ದರು ಎಂದೂ ತಿಳಿದುಬಂದಿದೆ.

ಅಲ್ಲದೆ, ಈ ಆರೋಪಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕ್ಲಬ್, ಚಿಲ್ಲರೆ ಶೋರೂಮ್‌ಗಳು ಮತ್ತು ಆಮದು ಸಂಸ್ಥೆಗಳಂತಹ ಅನೇಕ ವಹಿವಾಟುಗಳನ್ನು ನಡೆಸುತ್ತಾರೆ. ಈ ಸಂಸ್ಥೆಗಳನ್ನು ಕಬೀರ್ ತಲ್ವಾರ್ ಅವರು ತಮ್ಮ ಉದ್ಯೋಗಿಗಳು, ಸಂಬಂಧಿಕರು ಮತ್ತು ಸ್ನೇಹಿತರ ಹೆಸರಿನಲ್ಲಿ ತೆರೆಯುತ್ತಾರೆ. ಆದರೆ, ಈ ಸಂಸ್ಥೆಗಳನ್ನು ಅವರೇ ನಿರ್ವಹಿಸುತ್ತಾರೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: ವೈದ್ಯರ ಗಾಂಜಾಲೋಕ: ವಿದ್ಯಾರ್ಥಿಗಳು ಅಮಾನತು, ವೈದ್ಯರಿಗೆ ಗೇಟ್ ಪಾಸ್ ಕೊಟ್ಟ ಕೆಎಂಸಿ ಆಸ್ಪತ್ರೆ!

ಇನ್ನು, ಈ ಸಂಸ್ಥೆಗಳನ್ನು ಮಾದಕವಸ್ತುಗಳನ್ನು, ನಿಷೇಧಿತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮತ್ತು ಕಳ್ಳಸಾಗಣೆ ಕಾರ್ಟೆಲ್‌ನಲ್ಲಿ ಅವರ ಪಾತ್ರದ ಬದಲಿಗೆ ಕಾನೂನುಬದ್ಧ ಸರಕುಗಳ ರೂಪದಲ್ಲಿ ಹಣ ರವಾನೆ ಮಾಡಲು ಬಳಸಲಾಗುತ್ತಿತ್ತು. ಮೆಜೆಂಟ್ ಇಂಡಿಯಾ ಸೇರಿದಂತೆ ಹನ್ನೆರಡು ಇಂತಹ ಸಂಸ್ಥೆಗಳನ್ನು ಗುರುತಿಸಲಾಗಿದ್ದು ಮತ್ತು ತನಿಖೆ ಮಾಡಲಾಗಿದೆ. ಈ ಕಂಪನಿಯನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಅರೆ-ಸಂಸ್ಕರಿಸಿದ ಟಾಲ್ಕ್ ಕಲ್ಲಿನಂತೆ ಹೆರಾಯಿನ್ ಅನ್ನು ಆಮದು ಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಬಳಸಲಾಗುತ್ತಿತ್ತು ಎಂದೂ ವರದಿಯಾಗಿದೆ.

ತನಿಖೆಯ ಸಮಯದಲ್ಲಿ, ವಿದೇಶಿ ಮೂಲದ ಮಾದಕವಸ್ತು ವ್ಯಾಪಾರಿಗಳು ಹೆರಾಯಿನ್ ತುಂಬಿದ ಸರಕುಗಳನ್ನು ಭಾರತೀಯ ಬಂದರುಗಳಿಗೆ (ಮುಂದ್ರಾ, ಕೋಲ್ಕತ್ತಾ) ಆಮದು ಮಾಡಿಕೊಳ್ಳಲು ಮತ್ತು ನಂತರ ಹೊಸ ದೆಹಲಿಯಲ್ಲಿರುವ ವಿವಿಧ ಗೋದಾಮುಗಳಿಗೆ ತಲುಪಿಸಲು ಸಿಂಡಿಕೇಟ್ ಸದಸ್ಯರ ಸಂಘಟಿತ ಜಾಲವನ್ನು ನಡೆಸುತ್ತಿದ್ದರು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಮಂಗಳೂರು: ಗಾಂಜಾ ಕೇಸಲ್ಲಿ ಮತ್ತಿಬ್ಬರು ವೈದ್ಯರ ಬಂಧನ

ಅಫ್ಘಾನ್ ಪ್ರಜೆಗಳ ಭಾರತ ಮೂಲದ ನೆಟ್‌ವರ್ಕ್ ಈ ಗೋದಾಮುಗಳನ್ನು ಬಾಡಿಗೆಗೆ ಪಡೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿತ್ತು ಮತ್ತು ಹೆರಾಯಿನ್ ನವದೆಹಲಿಯನ್ನು ತಲುಪಿದ ನಂತರ ಅದನ್ನು ಸಂಸ್ಕರಿಸುವುದು/ಹೊರತೆಗೆಯುವುದು ಮತ್ತು ವಿತರಿಸುವುದನ್ನು ಮಾಡಲಾಗುತ್ತಿತ್ತು.  ಇನ್ನು, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರಿಗೆ ಹೆರಾಯಿನ್ ಮಾರಾಟದಿಂದ ಬಂದ ಹಣವನ್ನು ಒದಗಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದೂ ಎನ್‌ಐಎ ತನ್ನ ಎರಡನೇ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ ಎಂದು ತಿಳಿದುಬಂದಿದೆ. 

click me!