
ಬೆಂಗಳೂರು (ಜೂ.14): ದೇಶದ ನಿಷೇಧಿತ ಸಂಘಟನೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (Popular Front of India-PFI) ಸಂಘಟನೆಯ ಮಾಸ್ಟರ್ ಮೈಂಡ್ ಆಗಿದ್ದ ಮೊಹಮದ್ ಯೂನಸ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಮೊಹಮದ್ ಯೂನಸ್ ಬಂಧನ ಮಾಡಲಾಗಿದೆ. ಕೆಲವು ಯುವಕರಿಗೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಟ್ರೈನಿಂಗ್ ಕೊಡುತ್ತಿದ್ದನು. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ವಾಸವಾಗಿದ್ದುಕೊಂಡು ತೆಲಂಗಾಣದಲ್ಲಿ ಟ್ರೈನಿಂಗ್ ಕೊಟ್ಟು ಬರುತ್ತಿದ್ದನು. ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಶಸ್ತಾಸ್ತ್ರಗಳ ತರಬೇತಿಯನ್ನು ನೀಡುತ್ತಿದ್ದನು.
2022 ರಲ್ಲಿ ಬಳ್ಳಾರಿಯ ಯೂನಸ್ ಮನೆ ಮೇಲೆ ಎನ್ ಐ ಎ ದಾಳಿ ಮಾಡಿತ್ತು. ಈ ವೇಳೆ ಪರಾರಿಯಾಗಿದ್ದ ಮೊಹಮದ್ ಯೂನಸ್, ನಂತರ ಇಡೀ ಕುಟುಂಬವನ್ನು ತೆಲಂಗಾಣಕ್ಕೆ ಶಿಫ್ಟ್ ಮಾಡಿಸಿದ್ದನು. ತೆಲಂಗಾಣದಲ್ಲಿ ಹೆಸರು ಬದಲಿಸಿಕೊಂಡು ವಾಸವಾಗಿದ್ದನು. ಬಶೀರ್ ಅಂತ ಹೆಸರು ಬದಲಾಯಿಸಿ ಫ್ಲಂಬರ್ ಕೆಲಸ ಮಾಡಿಕೊಂಡಿದ್ದನು. ತೆಲಂಗಾಣ ಹಾಗೂ ಆಂಧ್ರಪ್ರದೇಶದ ತರಬೇತುದಾರರಿಗೆ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದನು. ಈ ಮೂಲಕ ದೇಶದಲ್ಲಿ ಸಂಘಟನೆ ನಿಷೇಧ ಮಾಡಿದ್ದರೂ ಸಂಘಟನೆಯ ಎಲ್ಲ ಸದಸ್ಯರಿಗೆ ತರಬೇತಿ ನೀಡುತ್ತಿದ್ದನು.
ನಿಜಾಮಾಬಾದ್ ಪಿಎಫ್ಐ ಪ್ರಕರಣದಲ್ಲಿ ಮೊಹಮದ್ ಯೂನಸ್ ಪ್ರಮುಖ ಆರೋಪಿಯಾಗಿದ್ದನು. ತೆಲಂಗಾಣ ಪೊಲೀಸರು ಕೇಸ್ ದಾಖಲಿಸಿ ಎನ್ ಐ ಎ ವರ್ಗಾವಣೆ ಮಾಡಿದ್ದರು. ಸದ್ಯ ಎನ್‌ಐಎ ಮೊಹಮದ್ ಯೂನಸ್‌ನನ್ನು ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ, ಯೂನಸ್‌ನೊಂದಿಗಿದ್ದ ಇಲಿಯಾಸ್‌ಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ