ಮೊಸಳೆಗಿಂತ ಮನುಷ್ಯನೇ ಕ್ರೂರಿ.. 14 ವರ್ಷದ ಬಾಲಕನ ತಿಂದ ಮೊಸಳೆಯ ಜೀವ ತೆಗೆದ ಗ್ರಾಮಸ್ಥರು!

By Santosh Naik  |  First Published Jun 14, 2023, 6:18 PM IST

14 ವರ್ಷದ ಯುವಕ ಮತ್ತು ಅವನ ಕುಟುಂಬವು ಬಿಹಾರದ ಗಂಗಾನದಿಯಲ್ಲಿ ಸ್ನಾನ ಮಾಡಲು ಮತ್ತು ಗಂಗಾಜಲವನ್ನು ಹೊಸ ಬೈಕು ಖರೀದಿಯನ್ನು ಆಚರಿಸಲು ಹೋಗಿದ್ದರು.


ಪಾಟ್ನಾ (ಜೂ.14): ಹೊಸ ಬೈಕ್‌ ಖರೀದಿ ಮಾಡಿದ ಖುಷಿಯಲ್ಲಿಇಡೀ ಕುಟುಂಬ ಪುಟ್ಟ ಹುಡುಗನನ್ನು ಕರೆದುಕೊಂಡು ಬಿಹಾರದ ಗಂಗಾನದಿಯಲ್ಲಿ ಸ್ನಾನ ಮಾಡಿ ಪೂಜೆ ಮಾಡಲು ತೆರಳಿತ್ತು. ಆದರೆ, ಖುಷಿಯ ದಿನ ಇಡೀ ಕುಟುಂಬಕ್ಕೆ ಕಣ್ಣೀರಿನ ದಿನವಾಗುತ್ತದೆ ಎಂದು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಅಲ್ಲಿನ ನೀರನ್ನು ತಂದು ಬೈಕ್‌ನ ಮೇಲೆ ಪ್ರೋಕ್ಷಣೆ ಮಾಡುವ ಪ್ಲ್ಯಾನ್‌ ಕೂಡ  ಮಾಡಿತ್ತು. ಆದರೆ, ಅಲ್ಲಿ ಹಾಗಾಗಲಿಲ್ಲ. ಇಡೀ ಕುಟುಂಬ ಗಂಗಾ ನದಿ ನೀರಿನಲ್ಲಿ ಸ್ನಾನ ಮಾಡಿ ಎದ್ದು ಬಂದರೆ, 14 ವರ್ಷದ ಪುಟ್ಟ ಬಾಲಕನನ್ನು ಮೊಸಳೆಯೊಂದು ಹಿಡಿದು ತಿಂದು ಹಾಕಿತ್ತು. ಆದರೆ, ಇದರಿಂದ ಸ್ಥಳೀಯ ಜನ ಹಾಗೂ ಬಾಲಕನ ಕುಟುಂಬಸ್ಥರು ಮೊಸಳೆಗೆ ದೊಣ್ಣೆಗಳು ಹಾಗೂ ಕಬ್ಬಿಣದ ರಾಡ್‌ಗಳಿಂದ ಮಾರಣಾಂತಿಕವಾಗಿ ಬಡಿದು ಸಾಯಿಸಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾದ 5 ನೇ ತರಗತಿ ವಿದ್ಯಾರ್ಥಿ ಅಂಕಿತ್ ಕುಮಾರ್ ಅವರ ಕುಟುಂಬ ಹೊಸ ಬೈಕ್‌ ಖರೀದಿ ಮಾಡಿದ ಖುಷಿಯಲ್ಲಿ ಗಂಗಾನದಿಗೆ ಹೋಗಿ ಅಲ್ಲಿ ಸ್ನಾನ ಮಾಡುವ ಮೂಲಕ, ಬೈಕ್‌ಗೆ ಗಂಗಾಜಲವನ್ನು ಪ್ರೋಕ್ಷಣೆ ಮಾಡಿ ಪೂಜೆ ಮಾಡುವ ನಿರ್ಧಾರ ಮಾಡಿದ್ದರು. ಇಡೀ ಕುಟುಂಬ ನದಿಯಲ್ಲಿ ಸ್ನಾನ ಮಾಡಿದರೆ, ಮೊಸಳೆ ಅಂಕಿತ್‌ನ ಮೇಲೆ ದಾಳಿ ಮಾಡಿತ್ತು. ಆತನನ್ನು ಹಿಡಿದು ನದಿಯ ಅಳಕ್ಕೆ ಎಳೆದುಕೊಂಡ ಮೊಸಳೆ, ಜೀವಂತವಿರುವಾಗಲೇ ಆತನನ್ನು ತಿಂದು ತೇಗಿತ್ತು.

ಈ ಸಮಯದಲ್ಲಿ ಅಂಕಿತ್‌ನ ದೇಹದ ಅಳಿದುಳಿದ ಭಾಗಗಳನ್ನು ಅವರ ಕುಟಂಬ ಕೆಲ ಹೊತ್ತಿನ ಬಳಿಕ ಗಂಗಾ ನದಿಯಿಂದ ಹೊರತೆಗೆಯಲು ಯಶಸ್ವಿಯಾಗಿದೆ. ಇದೇ ವೇಳೆ ಸಾಕಷ್ಟು ಜನ ಕೂಡ ನದಿ ದಂಡೆಯ ಮೇಲೆ ಸೇರಿದ್ದರು. ಸಿಟ್ಟು ಹಾಗೂ ನೋವಿನಲ್ಲಿದ್ದ ಇಡೀ ಕುಟುಂಬ ಸ್ಥಳೀಯ ಗ್ರಾಮಸ್ಥರ ಜೊತೆ ಸೇರಿ ಕೋಲುಗಳು ಹಾಗೂ ಕಬ್ಬಿಣದ ರಾಡ್‌ಗಳ ಮೂಲಕ ನಿರ್ದಯವಾಗಿ ದಾಳಿ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

 

Tap to resize

Latest Videos

ಗಂಡಿಲ್ಲದೇ ಗರ್ಭ ಧರಿಸಿದ ಮೊಸಳೆ: ಸ್ವಯಂ ಸಂತಾನೋತ್ಪತಿ ಸಿದ್ಧಾಂತಕ್ಕೆ ಪುರಾವೆ ಎಂದ ಸಂಶೋಧಕರು

ಈ ಕುರಿತಂತೆ ಮಾತನಾಡಿರುವ ಅಂಕಿತ್‌ನ ಅಜ್ಜ ಮಾತನಾಡಿದ್ದು, 'ನಾವು ಇತ್ತೀಚೆಗಷ್ಟೇ ಹೊಸ ಬೈಕ್‌ ಖರೀದಿ ಮಾಡಿದ್ದೆವು. ಗಂಗಾನದಿಯಲ್ಲಿ ಸ್ನಾನ ಮಾಡಿ, ಪೂಜೆಗಾಗಿ ಗಂಗಾಜಲವನ್ನು ತರಲು ನಿರ್ಧಾರ ಮಾಡಿದ್ದೆವು ಆದರೆ, ನದಿಯಲ್ಲಿ ಸ್ನಾನ ಮಾಡುವ ವೇಳೆಗೆ ಮೊಮ್ಮಗನನ್ನು ಮೊಸಳೆ ಕಚ್ಚಿ ಹಿಡಿದಿದೆ. ಬಳಿಕ ಆತನನ್ನು ನೀರಿನ ಆಳಕ್ಕೆ ತೆಗೆದುಕೊಂಡು ಹೋಗಿದೆ. ಅಂದಾಜು ಒಂದು ಗಂಟೆಯ ಬಳಿಕ ಅಂಕಿತ್‌ನ ದೇಹದ ಭಾಗಗಳು ನಮಗೆ ಸಿಕ್ಕಿದವು. ಬಳಿಕ ಮೊಸಳೆಯನ್ನು ಹೊರಕ್ಕೆ ಎಳೆದು ಸಾಯಿಸಿದ್ದೇವೆ' ಎಂದು ತಿಳಿಸಿದ್ದಾರೆ.

ಅಬ್ಬಬ್ಬಾ..ಸಾಕಿದ ಮಾಲೀಕನ ದೇಹವನ್ನೇ ಕಿತ್ತು ಕಿತ್ತು ತಿಂದ 40 ಮೊಸಳೆಗಳು

click me!