
ಪಾಟ್ನಾ(ಫೆ.04): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನ ಮೂವರು ಸದಸ್ಯರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಪಿಎಫ್ಐ ಸಂಘಟನೆಯ ಈ ಮೂವರು ಆಯೋಧ್ಯೆ ರಾಮ ಮಂದಿರ ಸ್ಫೋಟಿಸಿ ಮತ್ತೆ ಬಾಬ್ರಿ ಮಸೀದಿ ಕಟ್ಟುವುದಾಗಿ ಫೇಸ್‌ಬುಕ್ ಮೂಲಕ ಲೈವ್ ನೀಡಿದ್ದರು. ನೇಪಾಳದಿಂದ ಆಯೋಧ್ಯೆಗೆ ರಸ್ತೆ ಮಾರ್ಗವಾಗಿ ಶಿಲೆ ತರಲಾಗಿದೆ. ಸಾಲಿಗ್ರಾಮದ ಶಿಲೆ ಬಿಹಾರದ ಮೂಲಕ ಆಯೋಧ್ಯೆಗೆ ತೆರಳಿದೆ. ಬಿಹಾರದ ಮೂಲಕ ಸಾಗುತ್ತಿರುವ ವೇಳೆ ಪಿಎಫ್ಐ ಸಂಘಟನೆ ಸದಸ್ಯರು ಫೇಸ್‌ಬುಕ್ ಲೈವ್ ಮೂಲಕ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಬಿಹಾರ ಪೊಲೀಸರ ಜೊತೆಗೆ ಕಾರ್ಯಾಚರಣೆ ನಡೆಸಿದ ಎನ್ಐಎ ಮೂವರನ್ನು ಬಂಧಿಸಿದೆ.
ಪಿಎಫ್ಐ ಸಂಘಟನೆಯ ಉಸ್ಮಾನ್ ಫೇಸ್‌ಬುಕ್ ಮೂಲಕ ನೇರ ಪ್ರಸಾರ ಮಾಡಿದ್ದ. ಇತರ ಇಬ್ಬರ ಜೊತೆ ಸೇರಿ ಆಯೋಧ್ಯೆ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದರು. ಬಿಹಾರದ ಮೊತಿಹಾರಿ ಜಿಲ್ಲೆಯ ಕೌನ್‌ವಾನ್ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಎನ್ಐಎ ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ದೇಶದೊಳಗೆ ಗಲಭೆ ಎಬ್ಬಿಸಿ ಆಯೋಧ್ಯೆ ಮೇಲೆ ದಾಳಿಗೆ ಉಗ್ರರ ಸ್ಕೆಚ್, ನೇಪಾಳ ಮೂಲಕ ಎಂಟ್ರಿ!
ಉಸ್ಮಾನ್ ಹಾಗೂ ಮೂವರು ಫೇಸ್‌ಬುಕ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ನೇಪಾಳದಿಂದ ಶಿಲೆ ತಂದು ರಾಮಮಂದಿರ ನಿರ್ಮಾಣ ಮಾಡುವ ಕನಸು ಬಿಟ್ಟು ಬಿಡಿ. ರಾಮ ಮಂದಿ ಸ್ಫೋಟಿಸಿ ಇದೇ ಸ್ಥಳದಲ್ಲಿ ಮತ್ತೆ ಬಾಬ್ರಿ ಮಸೀದಿ ಕಟ್ಟುತ್ತೇವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದೀಗ ರಾಷ್ಟ್ರೀಯ ತನಿಖಾ ದಳ, ಮೂವರನ್ನು ವಿಚಾರಣೆಗೆ ಒಳಪಡಿಸಿದೆ. ಇಷ್ಟೇ ಅಲ್ಲ ಬಿಹಾರದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳಿಗೆ ಈ ಘಟನೆ ಪುಷ್ಠಿ ನೀಡಿದೆ. ಹೀಗಾಗಿ ವಿಚಾರಣೆ ತೀವ್ರಗೊಳಿಸಿದೆ.
ಆಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮ ಮತ್ತು ಸೀತಾದೇವಿಯ ಮೂರ್ತಿ ಕೆತ್ತಲು 2 ವಿಶೇಷ ಕಲ್ಲನ್ನು ನೇಪಾಳದಿಂದ ತರಲಾಗಿದೆ. ನೇಪಾಳದ ಗಂಡಕಿ ನದಿಯಲ್ಲಿ ಸಿಕ್ಕ ಅಪರೂಪದ ಸಾಲಿಗ್ರಾಮ ಶಿಲೆಗಳಾಗಿದೆ. ಈ ಸಾಲಿಗ್ರಾಮದ ಕಲ್ಲುಗಳು 6 ಕೋಟಿ ವರ್ಷಗಳಷ್ಟುಹಳೆಯದಾಗಿದ್ದು ಒಂದು ಕಲ್ಲು 26 ಟನ್ ಹಾಗೂ ಮತ್ತೊಂದು ಕಲ್ಲು 14 ಟನ್ ತೂಕ ಹೊಂದಿದೆ. ನೇಪಾಳದ ಮಯಾಗಡಿ ಮತ್ತು ಮುಸ್ತಾಂಗ್ ಜಿಲ್ಲೆಗಳ ಮೂಲಕ ಹರಿಯುವ ಕಾಳಿ ಗಂಡಕಿ ನದಿಯ ದಡದಲ್ಲಿ ಮಾತ್ರ ಸಾಲಿಗ್ರಾಮ ಕಲ್ಲುಗಳು ಕಂಡುಬರುತ್ತವೆ. ಅಲ್ಲಿಂದ ಸೀತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಕ್ಕೆ ಶಿಲೆಗಳನ್ನು ಮೊದಲು ತರಲಾಯಿತು. ನಂತರ ಭಾರೀ ಟ್ರಕ್‌ಗಳಲ್ಲಿ ಅಯೋಧ್ಯೆಯನ್ನು ತಲುಪಿಸಲಾಯಿತು.
ಅಮಿತ್ ಶಾ ರಾಜಕಾರಣಿ, ಪೂಜಾರಿಯಲ್ಲ, ರಾಮ ಮಂದಿರ ಉದ್ಘಾಟನೆ ಘೋಷಣೆಗೆ ಕೆರಳಿದ ಖರ್ಗೆ!
ಅಯೋಧ್ಯೆಗೂ ಮುನ್ನ ಸಾಲಿಗ್ರಾಮಗಳು ಬುಧವಾರ ಗೋರಖ್‌ಪುರ ತಲುಪಿದ್ದು, ಅಲ್ಲಿ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ಎರಡೂ ಬಂಡೆಗಳು ಕ್ರಮವಾಗಿ ಸುಮಾರು 26 ಟನ್ ಮತ್ತು 14 ಟನ್ ತೂಕವನ್ನು ಹೊಂದಿವೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ… ತಿಳಿಸಿದ್ದಾರೆ. ವಿಗ್ರಹವನ್ನು ತಯಾರಿಸಲು ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಶಿಲೆಗಳನ್ನು ಅನುಮೋದಿಸಲಾಗಿದೆ ಎಂದು ನೇಪಾಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ ಜನಕಪುರದ ಜಾನಕಿ ದೇವಾಲಯವು ಮುಂದಿನ ದಿನಗಳಲ್ಲಿ ರಾಮಮಂದಿರಕ್ಕೆ ಬಿಲ್ಲು ಕಳಿಸುವ ನಿರೀಕ್ಷೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ