
ನವದೆಹಲಿ (ಫೆಬ್ರವರಿ 4, 2023): ಪ್ರಧಾನಿ ಮೋದಿ ವಿಶ್ವದ ಜನಪ್ರಿಯ ನಾಯಕರ ಪೈಕಿ ಪ್ರಮುಖರು ಅನ್ನೋದು ಮತ್ತೆ ಸಾಬೀತಾಗಿದೆ. ಅಮೆರಿಕ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 78 ರ ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಗುರುತಿಸಲಾಗಿದೆ. ಈ ಸರ್ವೇಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಇತರ ನಾಯಕರು ಇದ್ದರೂ ಮೋದಿಯ ಜನಪ್ರಿಯತೆ ಮುಂದೆ ಇವರೆಲ್ಲ ಮಂಕಾಗಿದ್ದಾರೆ. ಏಕೆಂದರೆ ಮೋದಿಗೆ ಸಿಕ್ಕಿರುವ ರೇಟಿಂಗ್‌ಗೂ ಈ ನಾಯಕರಿಗೆ ದೊರೆತಿರುವ ರೇಟಿಂಗ್‌ಗೂ ಹೆಚ್ಚು ವ್ಯತ್ಯಾಸವಿದೆ. ಈ ಸಮೀಕ್ಷೆಯಲ್ಲಿ 22 ಜಾಗತಿಕ ನಾಯಕರನ್ನು ರೇಟಿಂಗ್ ಮಾಡಿದ್ದು, ಮೋದಿಯೇ ನಂ. 1 ಸ್ಥಾನ ಪಡೆದಿದ್ದಾರೆ.
''ಗ್ಲೋಬಲ್ ಲೀಡರ್ ಅಪ್ರೂವಲ್'' ಸಮೀಕ್ಷೆಯು ಈ ವರ್ಷದ ಜನವರಿ 26-31 ರಿಂದ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿದೆ ಎಂದು ರಾಜಕೀಯ ಗುಪ್ತಚರ ಸಂಶೋಧನಾ ಸಂಸ್ಥೆಯು ಹೇಳಿದೆ. ಇದು ಪ್ರತಿ ದೇಶದಲ್ಲಿ ಏಳು ದಿನಗಳ ಕಾಲ ಸರಾಸರಿ ವಯಸ್ಕ ನಿವಾಸಿಗಳ ಹೇಳಿಕೆಗಳನ್ನು ಸಂಗ್ರಹಿಸಿದ್ದು, ಮಾದರಿ ಗಾತ್ರಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ ಎಂದು ತಿಳಿದುಬಂದಿದೆ.
Most Popular Leader in 2021: ಟಾಪ್ 10 ಪಟ್ಟಿಯಲ್ಲಿ ಪ್ರಧಾನಿ ಮೋದಿ, ಜನಪ್ರಿಯತೆ ಹೆಚ್ಚಿದ್ಹೇಗೆ.?
ಈ ಸರ್ವೇಯಲ್ಲಿ ಪ್ರಧಾನಿ ಮೋದಿ ಅವರು ಶೇಕಡಾ 78 ರಷ್ಟು ಅನುಮೋದನೆ ರೇಟಿಂಗ್‌ಗಳನ್ನು ಗಳಿಸಿದ್ದು, ಶೇಕಡಾ 40 ರೇಟಿಂಗ್‌ಗಳನ್ನು ಪಡೆದ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರಿಗಿಂತ ಮುಂದಿದ್ದಾರೆ. ಇನ್ನು, ಮೋದಿಯ ನಂತರದ ಸ್ಥಾನ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರಿಗೆ ಸಿಕ್ಕಿದ್ದು, ಶೇಕಡಾ 68 ರೇಟಿಂಗ್ ಗಳಿಸಿದ್ದಾರೆ. ಇನ್ನು, ಸ್ವಿಸ್ ಅಧ್ಯಕ್ಷ ಅಲೈನ್ ಬರ್ಸೆಟ್ ಶೇಕಡಾ 62 ಅನುಮೋದನೆ ರೇಟಿಂಗ್‌ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.
.
2022 ರ ವರ್ಷವು ಭಾರತದ ವಿದೇಶಾಂಗ ನೀತಿಯ ಇತಿಹಾಸದಲ್ಲಿ ಒಂದು ಅಸಾಧಾರಣ ವರ್ಷವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ "ಇದು ಯುದ್ಧದ ಯುಗವಲ್ಲ" ಎಂದು ನೀಡಿದ ಸಲಹೆಯು ಪ್ರಪಂಚದಾದ್ಯಂತ ಪ್ರತಿಧ್ವನಿಸಿತು.
ಇದನ್ನು ಓದಿ: 8 ವರ್ಷ ಆದ್ರೂ ಮೋದಿ ಜನಪ್ರಿಯತೆ ಕುಸಿದಿಲ್ಲ: ನಮೋ ವಿರುದ್ಧ ಆಡಳಿತ ವಿರೋಧಿ ಅಲೆ ಕಮ್ಮಿ, ಸಮೀಕ್ಷೆ
ರಷ್ಯಾ-ಉಕ್ರೇನ್ ಯುದ್ಧವು ವಿಶ್ವವನ್ನು III ನೇ ಮಹಾಯುದ್ಧದ ಅಂಚಿನಲ್ಲಿ ಇರಿಸಿದ್ದು, ಪ್ರತಿ ದೇಶವು ಒಂದೊಂದು ದೇಶವನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ ಶಾಂತಿಯ ಕಡೆಯನ್ನು ಆಯ್ಕೆ ಮಾಡಿಕೊಂಡಿದ್ದು, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಎರಡೂ ದೇಶಗಳಿಗೆ ಕೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 2022ರಲ್ಲಿ ಸಹ , ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನಡುವೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು "ಈಗ ಯುದ್ಧದ ಸಮಯವಲ್ಲ" ಎಂದು ಹೇಳಿದ್ದರು. ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಈ ಹೇಳಿಕೆಯನ್ನು ಸ್ವಾಗತಿಸಿದ್ದವು.
ಇದನ್ನು ಓದಿ: Modi Wave ಅಧ್ಯಯನ ವರದಿಯಲ್ಲಿ ಮೋದಿ ಜನಪ್ರಿಯತೆ ಬಹಿರಂಗ, ಹೊಸ ದಾಖಲೆ ನಿರ್ಮಾಣ!
ಅಮೆರಿಕ ಮೂಲಕ ಟ್ರ್ಯಾಕಿಂಗ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಶೇಕಡಾ 78 ರಷ್ಟು ಜನರು ಪ್ರಧಾನಿ ಮೋದಿಯನ್ನು ಅನುಮೋದಿಸಿದ್ದಾರೆ ಮತ್ತು ಶೇಕಡಾ 18 ರಷ್ಟು ಜನರು ಅವರನ್ನು ನಿರಾಕರಿಸಿದ್ದಾರೆ. ಇನ್ನೊಂದೆಡೆ, ಜನವರಿ ಮೂರನೇ ವಾರದಲ್ಲಿ ಪ್ರಧಾನಿ ಮೋದಿಯವರ ಅನುಮೋದನೆ ರೇಟಿಂಗ್ ಶೇಕಡಾ 79 ರಷ್ಟಿತ್ತು ಎಂದು ತಿಳಿದುಬಂದಿದೆ.
ಇನ್ನು, ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಸ್ತುತ ಏಳನೇ ಶ್ರೇಯಾಂಕದಲ್ಲಿದ್ದಾರೆ. 22 ದೇಶಗಳ ಪೈಕಿ, ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸಿಯೋಕ್-ಯೌಲ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಪಟ್ಟಿಯಲ್ಲಿ ಕೊನೆಯ ಮೂರು ಸ್ಥಾನಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಆಯ್ಕೆಯಾದ ಬಲಪಂಥೀಯ ನಾಯಕ ಇಟಲಿಯ ಜಾರ್ಜಿಯಾ ಮೆಲೋನಿ, ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ 52 ರಷ್ಟು ರೇಟಿಂಗ್‌ಗಳೊಂದಿಗೆ 6 ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?
ಇನ್ನು, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು 58 ಶೇಕಡಾ ಅನುಮೋದನೆಯೊಂದಿಗೆ ಈ ಸರ್ವೇಯಲ್ಲಿ 4 ನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್‌ನ ನೂತನ ಚುನಾಯಿತ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು 50 ಪ್ರತಿಶತ ರೇಟಿಂಗ್‌ಗಳೊಂದಿಗೆ 5 ನೇ ಸ್ಥಾನದಲ್ಲಿದ್ದರೆ, ಕೆನಡಾದ ಪ್ರಧಾನಿ ಶೇಕಡಾ 40 ಅನುಮೋದನೆಯೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಶೇಕಡಾ 30 ಅನುಮೋದನೆಗಳೊಂದಿಗೆ 12 ನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ