ಫಸ್ಟ್ ನೈಟ್ ವಿಡಿಯೋ ಸೋಶಿಯಲ್ ಮೀಡಿಯಾಗೆ ಶೇರ್ ಮಾಡಿಕೊಂಡ ನವದಂಪತಿ!

Published : Apr 17, 2025, 11:46 PM ISTUpdated : Apr 18, 2025, 05:52 PM IST
ಫಸ್ಟ್ ನೈಟ್ ವಿಡಿಯೋ ಸೋಶಿಯಲ್ ಮೀಡಿಯಾಗೆ ಶೇರ್ ಮಾಡಿಕೊಂಡ ನವದಂಪತಿ!

ಸಾರಾಂಶ

ಮದುವೆ ಸೀಸನ್‌ನಲ್ಲಿ ನವದಂಪತಿಯೊಂದು ಮೊದಲ ರಾತ್ರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್‌ಗೆ ಒಳಗಾಗಿದ್ದಾರೆ. ಖಾಸಗಿ ಕ್ಷಣಗಳನ್ನು ಸಾರ್ವಜನಿಕಗೊಳಿಸಿದ್ದಕ್ಕೆ ಟೀಕೆ ವ್ಯಕ್ತವಾಗಿದೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಹಳೆಯದ್ದಾಗಿದ್ದರೂ ಮತ್ತೆ ಹರಿದಾಡುತ್ತಿದೆ.

ಭಾರತದಲ್ಲಿ ಇದೀಗ ಮದುವೆ ಸೀಸನ್ ಆರಂಭವಾಗಿದೆ. ಆದ್ದರಿಂದ ಮದುವೆ ಸಂಬಂಧಿಸಿದ ಎಲ್ಲ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿವೆ. ಜೊತೆಗೆ, ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೀಕ್ಷಣೆ, ಶೇರ್ ಮತ್ತು ಕಾಮೆಂಟ್‌ಗಳನ್ನು ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಲ್ಲೊಂದು ಜೋಡಿ ಮದುವೆ ಮುಗಿದ ನಂತರ ಮೊದಲ ರಾತ್ರಿ ಶಾಸ್ತ್ರವನ್ನು ಹೇಗೆ ಮಾಡಬೇಕು ಎಂದು ನೋಡಿಕೊಳ್ಳಿ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎನ್ನುವುದು ಎಲ್ಲರ ಜೀವನದ ಮೇಲೂ ಭಾರೀ ಪರಿಣಾಮವನ್ನು ಬೀರಿದೆ. ತಮ್ಮ ಜೀವನದ ಎಲ್ಲ ಘಟನೆಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಅತ್ಯಂತ ಸುಮಧುರ ಹಾಗೂ ಪ್ರಮುಖ ಕ್ಷಣವಾಗಿರುತ್ತದೆ. ಆದ್ದರಿಮದ ಮದುವೆಯ ಕೆಲವು ಕ್ಷಣಗಳನ್ನು ತಮ್ಮ ಆಪ್ತರು ಹಾಗೂ ಇತರರಿಗೆ ಹಂಚಿಕೊಳ್ಳುವುದರಿಂದ ನವ ದಂಪತಿ ಸಂತೋಷವನ್ನು ಅನುಭವಿಸುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ಮದುವೆ ಶಾಸ್ತ್ರದ ಪ್ರತಿಯೊಂದು ಘಟನೆಯ ವಿಡಿಯೋವನ್ನು ಸುಂದರ ಕ್ಷಣಗಳೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದಾದ ನಂತರ ಫಸ್ಟ್ ನೈಟ್ ಅನ್ನು ಹೇಗೆ ಆರಂಭಿಸಬೇಕು ಎಂಬುದನ್ನು ಕೂಡ ವಿಡಿಯೋ ಮಾಡಿಕೊಂಡು ಅದನ್ನು ಸೋಶಿಯಲ್ ಮೀಡಿಯಾಗೆ ಹಂಚಿಕೊಂಡಿದ್ದಾರೆ. 

ಮದುವೆ ಮಾಡಿಕೊಂಡ ದಂಪತಿ ಎಲ್ಲ ಶಾಸ್ತ್ರಗಳನ್ನು ಎಲ್ಲ ಜನರೆದುರು ಮಾಡಿಕೊಂಡರೂ ಮೊದಲ ರಾತ್ರಿ ಶಾಸ್ತ್ರವನ್ನು ಆಚರಣೆ ಮಾಡುವುದಕ್ಕೆ ದಂಪತಿಗೆ ಖಾಸಗಿತನ ಎಂಬುದು ತುಂಬಾ ಅಗತ್ಯವಾಗಿರುತ್ತದೆ. ಹೀಗಾಗಿ, ಪತಿ ಮತ್ತು ಪತ್ನಿಗಂತಲೇ ಖಾಸಗಿ ಕ್ಷಣಗಳನ್ನು ಕಳೆಯಲು ಪ್ರತ್ಯೇಕ ಕೋಣೆಯನ್ನೂ ಕೂಡ ನೀಡಲಾಗುತ್ತದೆ. ಮೊದಲ ರಾತ್ರಿ ಎನ್ನುವುದು ತುಂಬಾ ಖಾಸಗಿ ವಿಚಾರವೆಂದು ಅದರ ಬಗ್ಗೆ ಯಾರ ಬಳಿಯೂ ಯಾವುದೇ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಆದರೆ ಈ ನವದಂತಿ ತಮ್ಮ ಮದುವೆಯ ಫಸ್ಟ್‌ ನೈಟ್‌ ವೀಡಿಯೊವನ್ನು ನೇರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಯುವತಿ ಬೆಡ್ ರೂಮ್ ಶೇರಿಂಗ್ ಆಫರ್; ತಿಂಗಳಿಗೆ ₹52 ಸಾವಿರ ಬಾಡಿಗೆ!

ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಕುರಿತ ಫೋಟೋ, ವಿಡಿಯೋಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಾರಣ ಇದೀಗ ಮದುವೆ ಸೀಸನ್ ಆರಂಭವಾಗಿದೆ. ಆದರೆ, ಇದೀಗ ಮದುವೆ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಫಸ್ಟ್ ನೈಟ್ ಮಾಡಿಕೊಳ್ಳಲು ಕೋಣೆಗೆ ಬಂದಿದೆ. ಅಲ್ಲಿ ಯುವತಿ ಬಂಗಾರದ ಆಭರಣಗಳನ್ನು ಮೈತುಂಬಾ ಧರಿಸಿಕೊಂಡು, ಬೆಲೆ ಬಾಳುವ ಸೀರೆಯನ್ನು ಉಟ್ಟುಕೊಂಡು ಗಂಡನೊಂದಿಗೆ ರೊಮ್ಯಾನ್ಸ್ ಮಾಡುತ್ತಾಳೆ. ಇದಾದ ನಂತರ ಗಂಡ ತನ್ನ ಹೆಂಡತಿಯ ಒಂದೊಂದೇ ಆಭರಣಗಳನ್ನು ತೆಗೆಯಲು ಸಹಾಯ ಮಾಡುತ್ತಾನೆ. ಕತ್ತಿನಲ್ಲಿದ್ದ ಸರಗಳು, ತಲೆಬೊಟ್ಟು, ಸೊಂಟದ ಡಾಬು, ಕೈಬಳೆಗಳು ಹೀಗೆ ಒಂದೊಂದೇ ಆಭರಣ ಕಳಚುತ್ತಾ ಹೋಗುತ್ತಾರೆ. ನಂತರ ಇನ್ನೇನು ಹೆಂಡತಿಯ ರವಿಕೆ ಬಿಚ್ಚಬೇಕು ಎನ್ನುವಷ್ಟರಲ್ಲಿ ವಿಡಿಯೋ ಕೊನೆಗೊಳ್ಳುತ್ತದೆ. ಪುಣ್ಯಕ್ಕೆ ಇಷ್ಟಕ್ಕೆ ನಿಲ್ಲಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನೆಟ್ಟಿಗರು ಹೇಳಿದ್ದಾರೆ.

ಸದ್ಯ ಈ ವಿಡಿಯೋವನ್ನು @Toxicity____ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋ ಹಳೆಯ ವಿಡಿಯೋ ಆಗಿದ್ದು, ಮದುವೆ ಸೀಸನ್ ಆರಂಭವಾಗಿರುವ ಹಿನ್ನೆಲೆಯಲ್ಲು ಪುನಃ ಅದನ್ನು ಶೇರ್ ಮಾಡಿಕೊಂಡಿದ್ದಾರೆ.  ಕೆಲವರು ಫಸ್ಟ್ ನೈಟ್ ವಿಡಿಯೋವನ್ನು ನೋಡಿ ಸಂತಪಟ್ಟಿದ್ದಾರೆ. ಆದರೆ, ಸಂಪ್ರದಾಯಸ್ಥ ಹಿನ್ನೆಲೆಯುಳ್ಳವರಿಗೆ ಹಾಗೂ ಮೊದಲ ರಾತ್ರಿಯ ಗೌಪ್ಯತೆ ಕಾಪಾಡಬೇಕು ಎನ್ನುವ ಮನಸ್ಥಿತಿ ಉಳ್ಳವರಿಗೆ ಈ ವಿಡಿಯೋ ಇಷ್ಟವಾಗಿಲ್ಲ. ಇನ್ನು ಮದುವೆ ಮತ್ತು ಮೊದಲ ರಾತ್ರಿ ಪರಿಕಲ್ಪನೆ ಇಲ್ಲದಿರುವ ಮಕ್ಕಳ ಮನಸ್ಸಿನ ಮೇಲೆ ಹಾಗೂ ಹದಿಹರೆಯದ ಮಕ್ಕಳ ಮೇಲೆ ಇಂತಹ ವಿಡಿಯೋಗಳು ಕೆಟ್ಟ ಪರಿಣಾಮ ಬೀರುತ್ತವೆ ಎಂದು ಕೆಲವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರೀ... ಜೊತೆಯಾಗಿ ಸ್ನಾನ ಮಾಡೋಣ ಎಂದ ಪತ್ನಿ: ಶರ್ಟ್ ಕಳಚಿ ತಯಾರಾದ ಗಂಡನಿಗೆ ಕಾದಿತ್ತು ಶಾಕ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!